ಆಕ್ಸಿಜನ್, ಲಸಿಕೆ, ಔಷಧ ಜೊತೆ ಪಿಎಂ ಮೋದಿಯೂ ಮಾಯ: ರಾಹುಲ್ ವ್ಯಂಗ್ಯ!

By Suvarna NewsFirst Published May 13, 2021, 3:42 PM IST
Highlights

* ಕೊರೋನಾ ಅಬ್ಬರದಿಂದಾಗಿ ದೇಶದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣ

* ಒಗ್ಗಟ್ಟು ಪ್ರದರ್ಶಿಸಿ ಮಾದರಿಯಾಗಬೇಕಿದ್ದ ಜನನಾಯಕರು, ಕಿತ್ತಾಟ

* ಆಕ್ಸಿಜನ್, ಲಸಿಕೆ ಮತ್ತು ಔಷಧಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯೂ ಮಾಯ ಎಂದ ರಾಹುಲ್

ನವದೆಹಲಿ(ಮೇ.13): ಕೊರೋನಾ ಅಬ್ಬರದಿಂದಾಗಿ ದೇಶದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಇಂತಹ ಸಮಯದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಮಾದರಿಯಾಗಬೇಕಿದ್ದ ಜನನಾಯಕರು, ಕಿತ್ತಾಡುವಲ್ಲಿ ತಲ್ಲೀನರಾಗಿದ್ದಾರೆ. ಸದ್ಯ ಕೊರೋನಾ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪಿಎಂ ಮೋದಿ ವಿರುದ್ಧ ಕಿಡಿ ಕಾರಿದ್ದು, ಕೊರೋನಾ ಕಾಲದಲ್ಲಿ ಆಕ್ಸಿಜನ್, ಲಸಿಕೆ ಮತ್ತು ಔಷಧಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯೂ ಮಾಯವಾಗಿದ್ದಾರೆ ಎಂದಿದ್ದಾರೆ.

ಕೊರೋನಾ ಮಧ್ಯೆ ರೈತರಿಗೆ ಗುಡ್‌ ನ್ಯೂಸ್: PM-KISAN ನಿಧಿ ಬಿಡುಗಡೆ, ಹೀಗೆ ಚೆಕ್ ಮಾಡಿ!

ಹೌದು ಇಂತಹುದ್ದೊಂದು ಆರೋಪ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಕಾಣಿಸಿಕೊಳ್ಳುತ್ತಿಲ್ಲ. ಸೆಂಟ್ರಲ್‌ ವಿಸ್ತಾ ಯೋಜನೆ, ಔಷಧಿಗಳ ಮೇಲಿನ ಜಿಎಸ್‌ಟಿ ಮತ್ತು ಮೋದಿಯವರ ಫೋಟೋಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಇನ್ನು ರಾಹುಲ್ ಗಾಂಧಿ ಆರಂಭದಿಂದಲೂ ಸರ್ಕಾರ ಕೊರೋನಾ ಪರಿಸ್ಥಿತಿಯನ್ನು ನಿರ್ವಹಿಸುತ್ತಿರುವ ಬಗ್ಗೆ ಕಿಡಿ ಕಾರುತ್ತಲೇ ಇದ್ದಾರೆ ಎಂಬುವುದು ಉಲ್ಲೇಖನೀಯ.

'ರಾಹುಲ್ ವರ್ತನೆ ಕ್ಷುಲ್ಲಕ ಎಂದೇ ಇತಿಹಾಸದಲ್ಲಿ ದಾಖಲಾಗುತ್ತದೆ' ಸೋನಿಯಾಗೆ ತಿಳಿಸಿದ ನಡ್ಡಾ

ಇನ್ನು ಗಂಗಾ ನದಿಯಲ್ಲಿ ಶವಗಳು ತೇಲಿ ಬರುತ್ತಿರುವ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್‌ ಮುಖ್ಯ ವಕ್ತಾರ ರಣ್ದೀಪ್ ಸುರ್ಜೇವಾಲಾ 'ಈ ನವಭಾರದಲ್ಲಿ ನದಿಗಳಲ್ಲಿ ಶವಗಳು ತೇಲಿ ಬರುತ್ತಿದ್ದರೂ ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ಇದರೊಂದಿದೆ ಈ ಕುರಿತಾಗಿ ಪ್ರಸಾರವಾದ ವರದಿಯನ್ನೂ ಶೇರ್ ಮಾಡಿಕೊಂಡಿದ್ದಾರೆ. 

click me!