2365 ಸೋಂಕಿತರ ಸಾವು : ದೇಶದಲ್ಲಿ 1 ದಿನದ ದಾಖಲೆ

By Kannadaprabha News  |  First Published Apr 23, 2021, 7:16 AM IST

ಏಕದಿನದಲ್ಲಿ ಬರೋಬ್ಬರಿ 3.32 ಲಕ್ಷ ಲಕ್ಷ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಕೇವಲ 24 ತಾಸುಗಳ ಅವಧಿಯಲ್ಲಿ ಈ ಪ್ರಮಾಣದ ಕೇಸುಗಳು ಒಂದು ದೇಶದಲ್ಲಿ ಪತ್ತೆಯಾಗಿರುವುದು ವಿಶ್ವದಲ್ಲಿಯೇ ಮೊದಲು.
 


ನವದೆಹಲಿ (ಏ.23): ಕೊರೋನಾ ವೈರಸ್‌ ಮಹಾಮಾರಿ ಭಾರತದಲ್ಲಿ ಮತ್ತೊಂದು ಜಾಗತಿಕ ದಾಖಲೆ ಸೃಷ್ಟಿಸಿದೆ. ಗುರುವಾರ ರಾತ್ರಿವರೆಗೆ ಏಕದಿನದಲ್ಲಿ ಬರೋಬ್ಬರಿ 3.32 ಲಕ್ಷ ಲಕ್ಷ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಕೇವಲ 24 ತಾಸುಗಳ ಅವಧಿಯಲ್ಲಿ ಈ ಪ್ರಮಾಣದ ಕೇಸುಗಳು ಒಂದು ದೇಶದಲ್ಲಿ ಪತ್ತೆಯಾಗಿರುವುದು ವಿಶ್ವದಲ್ಲಿಯೇ ಮೊದಲು.

ಜ.8ರಂದು ಅಮೆರಿಕದಲ್ಲಿ 3.07 ಲಕ್ಷ ಕೇಸುಗಳು ದೃಢಪಟ್ಟಿದ್ದವು. ಆ ದಾಖಲೆಯನ್ನು ಬುಧವಾರ 3.14 ಲಕ್ಷ ಕೇಸುಗಳ ಮೂಲಕ ಅಳಿಸಿ ಹಾಕಿತ್ತು. ಗುರುವಾರ ಕೂಡ ಸೋಂಕಿನ ಓಟ ಇದೇ ವೇಗ ಭಾರತದಲ್ಲಿ ಮುಂದವರಿದಿದ್ದು, ಇನ್ನೂ 18 ಸಾವಿರ ಹೆಚ್ಚು ಕೇಸುಗಳೊಂದಿಗೆ 3.32 ಲಕ್ಷ ಹೊಸ ಪ್ರಕರಣಗಳು ದೃಢಪಟ್ಟಿವೆ.

Tap to resize

Latest Videos

undefined

ಆಕ್ಸಿಜನ್ ಟ್ಯಾಂಕರ್‌ಗೆ ಗ್ರೀನ್ ಕಾರಿಡಾರ್.. ಪೊಲೀಸರ ಮಾದರಿ ಕಾರ್ಯ

ಇನ್ನು ಗುರುವಾರ ದೇಶದಲ್ಲಿ 2,365 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದ ಮಟ್ಟಿಗೆ ಇದೂ ಈವರೆಗಿನ ದಾಖಲೆಯಾಗಿದೆ. ಸಾವಿಗೆ ಹೋಲಿಸಿದರೆ ಈವರೆಗೆ ಅತಿ ಹೆಚ್ಚು ಏಕದಿನದ ಸಾವು ಸಂಭವಿಸಿದ್ದು ಅಮೆರಿಕದಲ್ಲಿ. ಜ.12ರಂದು ಅಲ್ಲಿ 4493 ಜನ ಅಸುನೀಗಿದ್ದರು.

10 ರಾಜ್ಯಗಳಲ್ಲಿ 75% ಕೇಸ್‌:

ಗುರುವಾರ ಬೆಳಗ್ಗೆ 8ರವರೆಗೆ ದೃಢಪಟ್ಟಿರುವ ಹೊಸ ಪ್ರಕರಣಗಳ ಪೈಕಿ ಶೇ.75ರಷ್ಟುಕರ್ನಾಟಕ ಸೇರಿದಂತೆ ಕೇವಲ 10 ರಾಜ್ಯಗಳಲ್ಲಿ ಪತ್ತೆಯಾಗಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್‌, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಬಿಹಾರ ಮತ್ತು ರಾಜಸ್ಥಾನ ಆ ರಾಜ್ಯಗಳು.

ಹಾಗೆಯೇ ಒಟ್ಟು ಸಕ್ರಿಯ ಪ್ರಕರಣದ ಶೇ.59.99ರಷ್ಟುಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರಪ್ರದೇಶ, ಕರ್ನಾಟಕ ಮತ್ತು ಕೇರಳ ಈ 5 ರಾಜ್ಯಗಳಲ್ಲಿಯೇ ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಗುರುವಾರ ಸಾವಿಗೀಡಾದವರ ಪೈಕಿ ಶೇ.81.08ರಷ್ಟುಸಾವು ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ದಾಖಲಾಗಿದೆ. ಮಹಾರಾಷ್ಟ್ರವೊಂದರಲ್ಲಿಯೇ 568 ಮಂದಿ, ದೆಹಲಿಯಲ್ಲಿ 249, ಛತ್ತೀಸ್‌ಗಢದಲ್ಲಿ 193, ಉತ್ತರಪ್ರದೇಶದಲ್ಲಿ 187, ಗುಜರಾತ್‌ನಲ್ಲಿ 125 ಮಂದಿ ಮೃತಪಟ್ಟಿದ್ದಾರೆ.

ವಾರದ ಸರಾಸರಿಯಲ್ಲೂ ಅಮೆರಿಕ ಹಿಂದಿಕ್ಕಿದ ಭಾರತ

ನವದೆಹಲಿ: ಗುರುವಾರವೊಂದೇ ದಿನ ಭಾರತದಲ್ಲಿ 3.32 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಈವರೆಗೆ, ವಿಶ್ವದಲ್ಲೇ ದೈನಂದಿನ ಕೇಸಿನಲ್ಲಷ್ಟೇ ಅಲ್ಲ, ವಾರದ ಸರಾಸರಿಯಲ್ಲೂ ಅಮೆರಿಕ ಹೊಂದಿದ್ದ ಗರಿಷ್ಠ ಪ್ರಕರಣಗಳ ದಾಖಲೆ ಮುರಿದಿದೆ.

ಭಾರತದಲ್ಲಿ ಕಳೆದ 1 ವಾರದಿಂದ ಪತ್ತೆಯಾಗುತ್ತಿರುವ ಏಕದಿನದ ಕೇಸುಗಳ ಸರಾಸರಿ 2.64 ಲಕ್ಷ. ಇದು ಅಮೆರಿಕದಲ್ಲಿ 3ನೇ ಅಲೆ ಆರಂಭವಾಗಿ, ಅದು ಗರಿಷ್ಠಮಟ್ಟಕ್ಕೆ ತಲುಪಿದಾಗಿನ ಅಂಕಿಗಿಂತಲೂ ಅಧಿಕ. ಅಂದರೆ ಜ.11ರ ಸುಮಾರಿಗೆ ಅಮೆರಿಕದ ಏಕದಿನದ ಕೇಸುಗಳ ಸರಾಸರಿ 2.55 ಲಕ್ಷ ಇತ್ತು.

click me!