ಎಲ್ಲ ನಾಗರಿಕರಿಗೂ ಲಸಿಕೆ/ ಏಪ್ರಿಲ್ 28 ರಿಂದ ನೊಂದಣಿ ಮಾಡಿಕೊಳ್ಳಬಹುದು/ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ/ ದಾಖಲೆಗಳನ್ನು ಆನ್ ಲೈನ್ ಸನ್ ಮಿಟ್ ಮಾಡದರೆ ಮುಗಿಯಿತು
ನವದೆಹಲಿ (ಏ. 22) 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದ್ದ ಸಂದರ್ಭದಲ್ಲಿಯೇ ಸರ್ಕಾರ ಅಂಥದ್ದೊಂದು ಹೆಜ್ಜೆ ಇಟ್ಟಿದೆ.
ಕೋವಿನ್ ಫ್ಲಾಟ್ ಫಾರ್ಮ್ ನಲ್ಲಿ ಆರೋಗ್ಯ ಸೇತು ಆಪ್ ಮೂಲಕ ಏಪ್ರಿಲ್ 28 ರಿಂದ ನೊಂದಾವಣೆ ಮಾಡಿಕೊಳ್ಳಬಹುದು. ಬೇಕಾದ ದಾಖಲೆಗಳನ್ನು ಇಲ್ಲಿಯೇ ಸಬ್ ಮಿಟ್ ಮಾಡಬೇಕಾಗುತ್ತದೆ. ಮೇ. 1 ರಿಂದ ಇಡೀ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ.
undefined
ಭಾರತೀಯರಿಗೆ ನಿತ್ಯಾನಂದನ ಕೈಲಾಸಕ್ಕೆ ಪ್ರವೇಶ ಇಲ್ಲ
ಮಹಾರಾಷ್ಟ್ರ ಮತ್ತು ದೆಹಲಿಯನ್ನು ಕೊರೋನಾ ಆವರಿಸಿದ್ದು ರಾಜ್ಯಗಳು ಲಾಕ್ ಡೌನ್ ಮೊರೆ ಹೋಗಿವೆ. ದೇಶದಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಕೇಸ್ ದಾಖಲಾಗುತ್ತಿರುವುದು ಸದ್ಯದ ಲೆಕ್ಕ.
ಭಾರತ ಸರ್ಕಾರ ವಿಶ್ವದಲ್ಲಿಯೇ ಅತಿದೊಡ್ಡ ಲಸಿಕಾ ಅಭಿಯಾನವನ್ನು ಆರಂಭ ಮಾಡಿತ್ತು. ಮೊದಲು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ನಂತರ ಹಿರಿಯ ಮನಾಗರಿಕರಿಗೆ ಅದಾದ ಮೇಲೆ ಅದಕ್ಕೂ ಕೆಲಗಿನ ವಯೋಮಾನದವರಿಗೆ ಲಸಿಕೆ ನೀಡಿಕೊಂಡು ಬರಲಾಗಿದೆ. ದೇಶದ ಎಲ್ಲ ನಾಗರಿಕರಿಗೂ ಲಸಿಕೆ ನೀಡುವ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡು ಬಂದಿದ್ದು ಇದೀಗ ಮೊದಲ ಹೆಜ್ಜೆ ಇಡುತ್ತಿದೆ.