'ಇಂಟರ್ನೆಟ್‌ ಇಲ್ಲ, ಮೊಬೈಲ್‌ ಫೋನ್‌ ಕೂಡ ಇಲ್ಲ..' ಸಂವಹನ ನಡೆಸುವ ಸೀಕ್ರೆಟ್‌ ಹೇಳಿದ ಅಜಿತ್‌ ದೋವಲ್‌!

Published : Jan 11, 2026, 05:24 PM IST
Ajit Doval

ಸಾರಾಂಶ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು 'ವಿಕಸಿತ್ ಭಾರತ್' ಸಂವಾದದಲ್ಲಿ ತಾವು ಅಧಿಕೃತ ಕೆಲಸಕ್ಕಾಗಿ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬಳಸುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಕುಟುಂಬದ ಅಗತ್ಯಗಳಿಗೆ ಮಾತ್ರ ಫೋನ್ ಬಳಸುವುದಾಗಿ ಹೇಳಿದ್ದಾರೆ.

ನವದೆಹಲಿ (ಜ.11): ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಧಿಕೃತ ಕೆಲಸಕ್ಕಾಗಿ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬಳಸುವುದಿಲ್ಲ ಎಂದು ಹೇಳಿದ್ದಾರೆ 'ವಿಕಸಿತ್ ಭಾರತ್ ಯುವ ನಾಯಕರ ಸಂವಾದ 2026' ರಲ್ಲಿ ಯುವಕರೊಂದಿಗೆ ಸಂವಹನ ನಡೆಸುವಾಗ ಅವರು ಈ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಕುಟುಂಬದ ಅಗತ್ಯಗಳಿಗಾಗಿ ಅಥವಾ ವಿದೇಶಗಳ ಪ್ರತಿನಿಧಿಗಳೊಂದಿಗೆ ಮಾತನಾಡಲು ಮಾತ್ರ ಫೋನ್ ಬಳಸುತ್ತಾರೆ. ಸಾಮಾನ್ಯ ಜನರಿಗೆ ತಿಳಿದಿಲ್ಲದ ಇತರ ಅತ್ಯಾಧುನಿಕ ಸಂವಹನ ಸಾಧನಗಳನ್ನು ಅವರ ರಹಸ್ಯ ಕೆಲಸಕ್ಕಾಗಿ ಮಾತ್ರವೇ ಬಳಸುತ್ತಾರೆ ಎಂದು ತಿಳಿಸಿದ್ದಾರೆ. ಆದರೆ, ಅತ್ಯಾಧುನಿಕ ಸಂವಹನ ಸಾಧನಗಳು ಯಾವುದು ಅನ್ನೋದನ್ನು ಬಹಿರಂಗಪಡಿಸಲಿಲ್ಲ.

ಭಾರತ್ ಮಂಟಪದಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ, ಮಾಜಿ ಗುಪ್ತಚರ ಅಧಿಕಾರಿಯೂ ಆಗಿರುವ ದೋವಲ್‌ ಅವರಿಗೆ, ನೀವು ಮೊಬೈಲ್‌ ಫೋನ್‌ ಮತ್ತು ಇಂಟರ್ನೆಟ್‌ಅನ್ನು ಬಳಸೋದಿಲ್ಲ ಎಂದು ಕೇಳಿದ್ದೇವೆ. ಇದು ನಿಜವೇ ಎಂದು ಪ್ರಶ್ನೆ ಮಾಡಲಾಯಿತು.

ಇದಕ್ಕೆ ಉತ್ತರ ನೀಡಿದ ಅವರು, 'ಹೌದು ನಾನು ಇಂಟರ್ನೆಂಟ್‌ ಬಳಕೆ ಮಾಡೋದಿಲ್ಲ ಅನ್ನೋದು ನಿಜ' ಎಂದರು 'ಅದಲ್ಲದೆ, ನಾನು ಫೋನ್‌ ಕೂಡ ಬಳಕೆ ಮಾಡೋದಿಲ್ಲ. ಕುಟುಂಬದ ಸದಸ್ಯರೊಂದಿಗೆ ಸಂವಹನ ಮಾಡಬೇಕಾದಾಗ ಹಾಗೂ ವಿದೇಶದ ಅಧಿಕಾರಿಗಳ ಜೊತೆ ಮಾತನಾಡುವಾಗಲಷ್ಟೇ ಫೋನ್‌ ಬಳಸುತ್ತೇನೆ. ಇದು ಅಗತ್ಯ. ನನ್ನ ಕೆಲಸವನ್ನು ನಾನು ಇದೇ ರೀತಿಯಲ್ಲೇ ಮಾಡುತ್ತೇನೆ. ಸಂವಹನ ಮಾಡಲು ಬೇರೆ ಬೇರೆ ಮಾರ್ಗಗಳು ಕೂಡ ಇವೆ. ನಮಗಾಗಿ ಕೆಲವೊಂದು ವಿಶೇಷ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ. ಅದು ನಿಮಗೆ ಗೊತ್ತಿರೋದಿಲ್ಲ' ಎಂದು ಹೇಳಿದರು.

 

ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌

ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್, 1945ರಲ್ಲಿ ಉತ್ತರಾಖಂಡದಲ್ಲಿ ಜನಿಸಿದರು. ಕೇರಳ ಕೇಡರ್‌ನ ನಿವೃತ್ತ ಐಪಿಎಸ್ ಅಧಿಕಾರಿ. ಅವರು 1968 ರಲ್ಲಿ ಸೇವೆಗೆ ಸೇರಿದರು ಮತ್ತು ಶೌರ್ಯಕ್ಕಾಗಿ ಕೀರ್ತಿ ಚಕ್ರ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಪೊಲೀಸ್ ಅಧಿಕಾರಿ. 2016 ರ ಸರ್ಜಿಕಲ್ ಸ್ಟ್ರೈಕ್‌, 2019 ರ ಬಾಲಕೋಟ್ ಏರ್‌ಸ್ಟ್ರೈಕ್‌ ಮತ್ತು ಡೋಕ್ಲಾಮ್ ಗಡಿ ವಿವಾದದಲ್ಲಿ ಭಾರತದ ರಾಜತಾಂತ್ರಿಕ ಮತ್ತು ಭದ್ರತಾ ಕ್ರಮಗಳ ಹಿಂದಿನ ಪ್ರಮುಖ ವ್ಯಕ್ತಿ ಇವರಾಗಿದ್ದಾರೆ.

1999 ರಲ್ಲಿ ಕಂದಹಾರ್‌ನಲ್ಲಿ ನಡೆದ IC-814 ವಿಮಾನ ಅಪಹರಣ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಸಂಧಾನಕಾರರಲ್ಲಿ ಒಬ್ಬರಾಗಿದ್ದರು. 1971 ಮತ್ತು 1999 ರ ನಡುವೆ ಹಲವಾರು ಅಪಹರಣ ಪ್ರಕರಣಗಳನ್ನು ಅವರು ನಿರ್ವಹಿಸಿದ್ದಾರೆ. ಪಾಕಿಸ್ತಾನದಲ್ಲಿ ವರ್ಷಗಳ ರಹಸ್ಯ ಕೆಲಸ ಮಾಡಿದ ಅಪಾರ ಅನುಭವ ಕೂಡ ಅವರಿಗಿದೆ.

ಕಳೆದ ವರ್ಷ, ಸರ್ಕಾರದ ಸತ್ಯ ಪರಿಶೀಲನಾ ಸಂಸ್ಥೆಯು ದೋವಲ್ ಅವರದ್ದು ಎಂದು ತಪ್ಪಾಗಿ ಹೇಳಲಾದ ನಕಲಿ ಫೇಸ್‌ಬುಕ್ ಪೋಸ್ಟ್ ಅನ್ನು ಬಹಿರಂಗಪಡಿಸಿತು, ಪಾಕಿಸ್ತಾನದಿಂದ ಮುಂಬರುವ ಸೈಬರ್ ದಾಳಿಯ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿತು. ಅಜಿತ್ ದೋವಲ್ ಯಾವುದೇ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಹೊಂದಿಲ್ಲ ಮತ್ತು ಅವರ ಹೆಸರು ಮತ್ತು ಫೋಟೋದೊಂದಿಗೆ ಪ್ರಸಾರವಾಗುವ ಪೋಸ್ಟ್ ಸಂಪೂರ್ಣವಾಗಿ ಕಟ್ಟುಕಥೆ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2 ತಿಂಗಳು ರೈಲ್ವೆ ಮಾರ್ಗದಲ್ಲಿ ಭಾರಿ ಬದಲಾವಣೆ- ಈ ರೈಲ್ವೆ ಸ್ಟೇಷನ್​ ತಾತ್ಕಾಲಿಕ ಬಂದ್​: ಡಿಟೇಲ್ಸ್​ ಇಲ್ಲಿದೆ
3ನೇ ಮಹಾಯುದ್ಧಕ್ಕೆ ಮುನ್ನುಡಿ, ಗ್ರೀನ್‌ಲ್ಯಾಂಡ್‌ ಆಕ್ರಮಿಸಲು ಸಿದ್ಧರಾಗುವಂತೆ ಆರ್ಮಿ ಚೀಫ್‌ಗೆ ಸೂಚಿಸಿದ ಟ್ರಂಪ್‌!