ಮೇರಿ ರಾಣಿ ಹಾಡಿಗೆ ನೋರಾ ಫತೇಹಿ ಕೂಡ ನಾಚುವಂತೆ ಕುಣಿದ ರಷ್ಯಾ ಬಾಲೆ

Suvarna News   | Asianet News
Published : Jan 31, 2022, 06:08 PM ISTUpdated : Jan 31, 2022, 06:56 PM IST
ಮೇರಿ ರಾಣಿ ಹಾಡಿಗೆ ನೋರಾ ಫತೇಹಿ ಕೂಡ ನಾಚುವಂತೆ ಕುಣಿದ ರಷ್ಯಾ ಬಾಲೆ

ಸಾರಾಂಶ

ಡಾನ್ಸ್‌ ಮೇರಿ ರಾಣಿ ಹಾಡಿಗೆ ರಷ್ಯಾದ ಪುಟ್ಟ ಬಾಲೆಯ ಸಖತ್ ಡಾನ್ಸ್‌ ನೋರಾ ಫತೇಹಿಯಿಂದಲೂ ಪ್ರಶಂಸೆ, ವಾವ್ ಎಂದ ನೆಟ್ಟಿಗರು

ರಷ್ಯಾ(ಜ.31): ಹಾಡು ಸಂಗೀತಾಗಳಿಗೆ ದೇಶ ಭಾಷೆಯ ಗಡಿ ಇಲ್ಲ. ಇದು ಅನೇಕ ಸಲ ಸಾಬೀತಾಗಿದೆ. ಬಾಲಿವುಡ್ ಸಿನಿಮಾದ 'ಡಾನ್ಸ್‌ ಮೇರಿ ರಾಣಿ ಹಾಡು ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುತೇಕ ಯುವ ಸಮೂಹ ಈ ಹಾಡನ್ನು ಕೇಳಿರುತ್ತೀರಿ. ಈ ಹಾಡಿಗೆ ಈಗ ಪುಟ್ಟ ಬಾಲೆಯೊಬ್ಬಳು ಸೊಂಟ ಬಳುಕಿಸಿದ್ದು, ಬಾಲೆಯ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ಮೂಲ ಹಾಡಿಗೆ ಹೆಜ್ಜೆ ಹಾಕಿದ ನೋರಾ ಫತೇಹಿ (Nora Fatehi) ಕೂಡ ಬಾಲೆಯ ನೃತ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ನೆಟ್ಟಿಗರು ಕೂಡ ವಾವ್ ಎಂದಿದ್ದಾರೆ. 

ರಷ್ಯಾದ (Russia) ಆರು ವರ್ಷದ ಬಾಲಕಿ ಎಸೆನ್ಯಾ (Esenya) ಈ ಹಾಡಿಗೆ ಅಮೋಘವಾಗಿ ಹೆಜ್ಜೆ ಹಾಕಿದ್ದಾರೆ.  ಬಾಲೆ ಸಾಹಸಮಯವಾದ ಸಖತ್ ಸ್ಟೆಪ್‌ಗಳನ್ನು ಮಾಡುತ್ತಿದ್ದು, ನೋರಾ ಫತೇಹಿ ಕೂಡ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ರಿಪೋಸ್ಟ್ ಮಾಡಿದ್ದಾರೆ. ಎಷ್ಟು ಮುದ್ದು ಈಕೆ, ಅವಳು ತುಂಬಾ ಸೊಗಸಾಗಿ ಕಾಣಿಸುತ್ತಿದ್ದಾಳೆ.  ಎಂದು ಬರೆದು ನೋರಾ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.  ಇತ್ತ ಇನ್ಸ್ಟಾಗ್ರಾಮ್‌ನಲ್ಲಿ 4ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

 

ಇದು ಕೇವಲ ಫತೇಹಿ ಗಮನವನ್ನು ಮಾತ್ರ ಸೆಳೆದಿಲ್ಲ. ಈ ಹಾಡಿಗೆ ಕೊರಿಯೋಗ್ರಾಫ್‌ ಮಾಡಿದ ಬೋಸ್ಕೋ ಮಾರ್ಟಿಸ್‌ (Bosco Martis) ಕೂಡ ಇದು ತುಂಬಾ ಮುದ್ದಾಗಿದೆ ಎಂದು ಮೂಲ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಕಲೆ ಹಾಗೂ ಸಂಗೀತ ದೇಶ ಭಾಷೆಯ ಗಡಿಗಳನ್ನು ಹೇಗೆ ಮೀರುತ್ತದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. 

ಡೇವಿಡ್ ವಾರ್ನರ್ (David Warner), ಅಮೆರಿಕಾದ ಡ್ಯಾನ್ಸಿಂಗ್ ಡ್ಯಾಡ್ ಮತ್ತು ತಾಂಜೇನಿಯಾದ (Tanzania) ಕಿಲಿ ಪಾಲ್ (Kili Paul) ಅವರಂತಹ ಅನೇಕ ವಿದೇಶಿ ಪ್ರತಿಭೆಗಳು ಈಗಾಗಲೇ ಹಲವು ಭಾರತೀಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.  ಇನ್ಸ್ಟಾಗ್ರಾಮ್‌ನಲ್ಲಿ (Instagram) ಖಾತೆ ಹೊಂದಿರುವ ವಿವಿಧ ದೇಶದ ಬಳಕೆದಾರರು ಬಾಲಿವುಡ್‌ನ ಹಾಡುಗಳಿಗೆ ಭಾರತದಾಚೆಗೂ ಹೆಜ್ಜೆ ಹಾಕುತ್ತಿದ್ದಾರೆ. 

ಪುಷ್ಪಾದ ಒ ಅಂಟವಾ ಹಾಡಿಗೆ ಸಮಂತಾ ಕೂಡ ನಾಚುವಂತೆ ಕುಣಿದ ಅಮೆರಿಕನ್ ಡ್ಯಾಡ್‌

ಇತ್ತೀಚೆಗೆ ಪುಷ್ಪಾ  ಸಿನಿಮಾದ ಶ್ರೀವಲ್ಲಿ ಹಾಡು ಭಾರಿ ಟ್ರೆಂಡ್‌ನಲ್ಲಿ ಇದ್ದು, ಭಾರತ ಮಾತ್ರವಲ್ಲದೇ ವಿದೇಶದ ಸೆಲೆಬ್ರಿಟಿಗಳು, ಕ್ರಿಕೆಟಿಗರು ಈ ಹಾಡಿಗೆ ಸೊಂಟ ಬಳುಕಿಸಿದ್ದನ್ನು ನೀವು ಈಗಾಗಲೇ ನೋಡಿರಬಹುದು. ಅದರೊಂದಿಗೆ ರಷ್ಯಾದ ಪುಟ್ಟ ಬಾಲೆಯ ಈ ಡಾನ್ಸ್ ಸಾಕಷ್ಟು ಗಮನ ಸೆಳೆಯುತ್ತಿದೆ.

ಈ ಹಿಂದೆ ಹಾರ್ಡಿ ಸಂಧು ಅವರ ಟ್ರೆಂಡಿಂಗ್‌ನಲ್ಲಿ ಇರುವ ಹಾಡು,  ಬಿಜ್ಲಿ ಬಿಜ್ಲಿ (Bijlee Bijlee), ಹಾಡಿಗೆ  ಅಪ್ಪ ಮಗಳು ಮಾಡಿದ ಡಾನ್ಸ್‌ನ ವಿಡಿಯೋ ಸಖತ್ ವೈರಲ್ ಆಗಿತ್ತು.  ಅಪ್ಪ ಮಗಳು ಇಬ್ಬರು ಈ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ್ದರು. ಈ ವಿಡಿಯೋದ ಮತ್ತೊಂದು ವಿಶೇಷ ಎಂದರೆ ಈ ಇಬ್ಬರೂ ಭಾರತೀಯರು ಅಲ್ಲ ಎನ್ನುವುದು ಇದರಿಂದ ಹಾರ್ಡಿ ಸಂಧು (Harrdy Sandhu) ಅವರ ಬಿಜ್ಲಿ ಬಿಜ್ಲಿ ಹಾಡು ಅಂತಾರಾಷ್ಟ್ರೀಯ (International) ಮಟ್ಟದಲ್ಲಿ ಹಿಟ್‌ ಆಗಿದೆ ಎಂಬುದು ಸಾಬೀತಾಗಿತ್ತು. 

ಜಬರ್‌ದಸ್ತ್‌ ಡಾನ್ಸ್‌ನಿಂದ ನೋರಾ ಫತೇಹಿಯನ್ನು ಇಂಪ್ರೆಸ್ ಮಾಡಿದ ತಾಂಜೇನಿಯಾ ತರುಣ

ಪಾಬ್ಲೋ ( Pablo) ಮತ್ತು ವೆರೋನಿಕಾ (Veronica) ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಹಾರ್ಡಿ ಸಂಧು ಅವರ ಬಿಜ್ಲಿ ಬಿಜ್ಲಿ ಹಾಡಿಗೆ  ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊವನ್ನು ಇದುವರೆಗೆ 1 ಮಿಲಿಯನ್ ಜನ  ವೀಕ್ಷಿಸಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ