ವೃದ್ಧನ ಮನವಿ ಸ್ವೀಕಾರಕ್ಕೆ 1 ಗಂಟೆ ಕಾಯಿಸಿದ ಸಿಬ್ಬಂದಿ; ಅಧಿಕಾರಿಗಳಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ!

Published : Dec 18, 2024, 08:44 AM ISTUpdated : Dec 18, 2024, 08:46 AM IST
ವೃದ್ಧನ ಮನವಿ ಸ್ವೀಕಾರಕ್ಕೆ 1 ಗಂಟೆ ಕಾಯಿಸಿದ ಸಿಬ್ಬಂದಿ; ಅಧಿಕಾರಿಗಳಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ!

ಸಾರಾಂಶ

ಹಿರಿಯ ನಾಗರಿಕರೊಬ್ಬರ ಅಹವಾಲು ಸ್ವೀಕರಿಸದೇ ಒಂದು ಗಂಟೆ ಕಾಯಿಸಿದ್ದಕ್ಕೆ ನೋಯ್ಡಾ ಪ್ರಾಧಿಕಾರದ ಸಿಇಒ ತಮ್ಮ ಕಚೇರಿ ಸಿಬ್ಬಂದಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದ್ದಾರೆ. ಸಿಸಿಟಿವಿಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನೋಯ್ಡಾ (ಉ.ಪ್ರ.): ಹಿರಿಯ ನಾಗರಿಕರೊಬ್ಬರ ಅಹವಾಲು ಸ್ವೀಕರಿಸಿದೇ ಒಂದು ಗಂಟೆ ಕಾಯಿಸಿದ್ದಕ್ಕೆ, ನೋಯ್ಡಾ ಪ್ರಾಧಿಕಾರದ ಸಿಇಒ ಅವರು, ತಮ್ಮ ಕಚೇರಿ ಸಿಬ್ಬಂದಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ನೋಯ್ಡಾ ಪ್ರಾಧಿಕಾರದ ಕಾರ್ಯನಿರ್ವಹಣಾಧಿಕಾರಿ ಲೋಕೇಶ್‌ ಎಂ. ಕಚೇರಿಯಲ್ಲಿ ಸಿಸಿಟೀವಿಯನ್ನು ಅಳವಡಿಸಿದ್ದರು. ಸಿಸಿಟೀವಿ ಪರಿಶೀಲನೆ ವೇಳೆ, ಸಿಬ್ಬಂದಿ ಕಚೇರಿಗೆ ಬರುವ ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸುಮ್ಮನೆ ಕುಳಿತಿದ್ದು ಹಾಗೂ ವೃದ್ಧರೊಬ್ಬರ ಸಮಸ್ಯೆ ಬಗ್ಗೆ ವಿಚಾರಿಸದೇ ಸುಮಾರು 1 ಗಂಟೆ ಕಾಯಿಸಿದ್ದು ಕಂಡುಬಂತು. ಹೀಗಾಗಿ ಸಿಇಒ ಅವರು, ನಿರ್ಲಕ್ಷ್ಯ ತೋರಿದ್ದಕ್ಕಾಗಿ 20 ನಿಮಿಷ ನಿಂತುಕೊಂಡೇ ಕೆಲಸ ಮಾಡಿ ಎನ್ನುವ ಶಿಕ್ಷೆಯನ್ನು ಸಿಬ್ಬಂದಿಗೆ ನೀಡಿದ್ದಾರೆ. ಸಿಬ್ಬಂದಿ ಕೂಡ ಶಿಕ್ಷೆಯನ್ನು ಪಾಲಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.ನೋಯ್ಡಾ ರೆಸಿಡೆನ್ಶಿಯಲ್ ಪ್ಲಾಟ್ ವಿಭಾಗದ ಕನಿಷ್ಠ 16 ಉದ್ಯೋಗಿಗಳಿಗೆ ಈ ಶಿಕ್ಷೆ ನೀಡಲಾಗಿದೆ. ತಮ್ಮ ಕೌಂಟರ್‌ಗಳ ಎದುರು ಜನರನ್ನು ಕಾಯಿಸುತ್ತಿದ್ದ ಕಾರಣಕ್ಕಾಗಿ ಅವರಿಗೆ ಸ್ಟ್ಯಾಂಡ್‌ಅಪ್‌ ಶಿಕ್ಷೆ ನೀಡಲಾಗಿದ್ದು ಅದರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. 

ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸುಮಾರು 65 ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದ್ದು, ಪ್ರತಿದಿನ ನೂರಾರು ನೋಯ್ಡಾ ನಿವಾಸಿಗಳು ವಿವಿಧ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಕಳೆದ ವರ್ಷ ನೋಯ್ಡಾದ ಅಧಿಕಾರ ವಹಿಸಿಕೊಂಡ 2005-ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸಿಇಒ ಅವರು ಈ ಕ್ಯಾಮೆರಾಗಳ ದೃಶ್ಯಗಳನ್ನು ಆಗಾಗ್ಗೆ ಸ್ಕ್ಯಾನ್ ಮಾಡುತ್ತಾರೆ ಮತ್ತು ಜನರನ್ನು ವಿಶೇಷವಾಗಿ ಹಿರಿಯ ನಾಗರಿಕರನ್ನು ದೀರ್ಘಕಾಲ ಕಾಯದಂತೆ ಸಿಬ್ಬಂದಿಗೆ ಸೂಚನೆ ನೀಡುತ್ತಿರುತ್ತಾರೆ.

ಸೋಮವಾರ ಸಿಇಒ, ಕೌಂಟರ್‌ ಎದುರು ಬಹಳ ಹೊತ್ತು ನಿಂತಿದ್ದ ವ್ಯಕ್ತಿಯೊಬ್ಬರನ್ನು ಗಮನಿಸಿದರು. ಈ ಹಂತದಲ್ಲಿ ಅವರು ಕೌಂಟರ್‌ನಲ್ಲಿದ್ದ ಮಹಿಳಾ ಸಿಬ್ಬಂದಿಗೆ, ಹಿರಿಯ ವ್ಯಕ್ತಿಯ ಅಹವಾಲನ್ನು ತಕ್ಷಣವೇ ಕೇಳುವಂತೆ ಸೂಚನೆ ನೀಡಿದ್ದಾರೆ. ಹಾಗೇನಾದರೂ ಈ ಕೆಲಸ ಇಂದೂ ಕೂಡ ಆಗಲು ಸಾಧ್ಯವಾಗದೇ ಇದ್ದಲ್ಲಿ, ಅದನ್ನು ಸ್ಪಷ್ಟವಾಗಿ ಆ ವ್ಯಕ್ತಿಗೆ ತಿಳಿಸುವಂತೆಯೂ ಸೂಚಿಸಿದ್ದಾರೆ.

ಆದರೆ, ಈ ಸೂಚನೆ ನೀಡಿದ 20 ನಿಮಿಷದ ಬಳಿಕವೂ ವೃದ್ಧ ಅದೇ ಕೌಂಟರ್‌ನಲ್ಲಿ ನಿಂತಿರುವುದು ಕಂಡುಬಂದಿತ್ತು. ಇದರಿಂದ ಸಿಟ್ಟಾದ ಸಿಇಒ, ರೆಸಿಡೆನ್ಶಿಯಲ್‌ ಡಿಪಾರ್ಟ್‌ಮೆಂಟ್‌ ಇಲಾಖೆಗೆ ಭೇಟಿ ನೀಡಿ, ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ ಸ್ಕೂಲಿಂಗ್‌ ತೆಗೆದುಕೊಂಡಿದ್ದಾರೆ. ಎಲ್ಲರೂ 20 ನಿಮಿಷಗಳ ಕಾಲ ನಿಂತೇ ಕೆಲಸ ಮಾಡುವಂತೆ ಆದೇಶ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿfದು, ಮಹಿಳೆಯರು ಕೂಡ ಸಿಇಒ ಶಿಕ್ಷೆಯ ಬಳಿಕ ನಿಂತೇ ಕೆಲಸ ಮಾಡಿದ್ದಾರೆ.

'ನನ್ನ ಜೀವ ಹೋದ್ರೂ ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ತರುತ್ತೇನೆ'; ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸ್ನೇಹಮಯಿ ಕೃಷ್ಣ!

ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಸಿಇಒ ಅವರ ಕ್ರಮವನ್ನು ಶ್ಲಾಘಿಸಿದ್ದಾರೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ತ್ವರಿತ ಕೆಲಸ ಮಾಡಿಸಿಕೊಳ್ಳಲು ಇಂತಹ ಶಿಸ್ತು ಕ್ರಮಗಳು ಅಗತ್ಯ ಎಂದು ಹೇಳಿದ್ದಾರೆ.

ಆಧಾರ್ ಅಪ್‌ಡೇಟ್ ದಿನಾಂಕ ವಿಸ್ತರಿಸಿದ UIDAI; ವಿಳಾಸ ಬದಲಿಸುವ ವಿಧಾನ ಇಲ್ಲಿದೆ ನೋಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ