2025ರಿಂದ ಎನ್‌ಟಿಎ ನೇಮಕ ಪರೀಕ್ಷೆ ನಡೆಸಲ್ಲ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌

By Kannadaprabha News  |  First Published Dec 18, 2024, 8:06 AM IST

2025ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಬದಲಿಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಮೇಲಷ್ಟೇ ಗಮನ ಹರಿಸಲಿದೆ. ಪರೀಕ್ಷೆಗಳಲ್ಲಾಗುವ ದೋಷಗಳನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.


ನವದೆಹಲಿ (ಡಿ.18): 2025ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಬದಲಿಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಮೇಲಷ್ಟೇ ಗಮನ ಹರಿಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ ಹಾಗೂ ಅನ್ಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸಾಲುಸಾಲು ಪರೀಕ್ಷೆಗಳ ರದ್ದತಿಯ ಬೆನ್ನಲ್ಲೇ ರಚಿಸಲಾದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಮೇರೆಗೆ ಈ ಸುಧಾರಣೆ ಮಾಡಲಾಗಿದೆ. ಅಂತೆಯೇ, ಪರೀಕ್ಷೆಗಳನ್ನು ಲಿಖಿತ ರೂಪದಲ್ಲಿ ನಡೆಸುವುದೇ ಅಥವಾ ಕಂಪ್ಯೂಟರ್‌ ಮೂಲಕ ನಡೆಸುವುದೇ ಎಂಬ ಬಗ್ಗೆ ಆರೋಗ್ಯ ಸಚಿವಾಲಯದೊಂದಿಗೂ ಮಾತುಕತೆ ನಡೆಯುತ್ತಿದೆ.

ಈ ಕುರಿತು ಮಾತನಾಡಿದ ಪ್ರಧಾನ್‌, ‘ಸರ್ಕಾರವು ಪರೀಕ್ಷೆಗಳನ್ನು ಕಂಪ್ಯೂಟರ್‌ ಹಾಗೂ ತಂತ್ರಜ್ಞಾನ ಬಳಸಿ ನಡೆಸಲು ಚಿಂತನೆ ನಡೆಸುತ್ತಿದೆ. 2025ರಲ್ಲಿ ಎನ್‌ಟಿಎ ಅನ್ನು ಪುನರಚಿಸಲಾಗುವುದು ಹಾಗೂ 10 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುವುದು. ಇದರಿಂದ ಅದರ ಕಾರ್ಯವೈಖರಿ ಬದಲಾಗಲಿದ್ದು, ಪರೀಕ್ಷೆಗಳಲ್ಲಾಗುವ ದೋಷಗಳನ್ನು ಶೂನ್ಯಕ್ಕೆ ಇಳಿಸಲಾಗುವುದು’ ಎಂದರು. ಜತೆಗೆ, ಮುಂದಿನ ವರ್ಷ 15 ಕೋಟಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುವುದು. ಅವುಗಳ ಬೆಲೆಯನ್ನು ಕಡೆಮೆ ಮಾಡಲಾಗುವುದು. 2026ರಲ್ಲಿ 9-12 ಕ್ಲಾಸ್‌ಗೆ ಹೊಸ ಪಠ್ಯ ಬರಲಿದೆ ಎಂದು ಪ್ರಧಾನ್‌ ತಿಳಿಸಿದರು.

Tap to resize

Latest Videos

undefined

ಏಕ ಚುನಾವಣೆ ಮಸೂದೆ ಮಂಡನೆ: ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಈ ಕುರಿತು ಆರಂಭವಾದ ಪರ-ವಿರೋಧ ಚರ್ಚೆ ಅಪೂರ್ಣಗೊಂಡಿದ್ದು, ಸರ್ಕಾರವು ಇದನ್ನು ತಕ್ಷಣವೇ ಅಂಗೀಕರಿಸಲು ಮುಂದಾಗದೇ ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸುವ ಇರಾದೆ ವ್ಯಕ್ತಪಡಿಸಿದೆ. ಬುಧವಾರ ಈ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದ್ದು ಬಳಿಕ ಜೆಪಿಸಿ ರಚನೆ ಆಗಲಿದೆ. 

ಕಾಂಗ್ರೆಸ್‌ ರೈತರಿಗೆ ಏನೂ ಮಾಡಲ್ಲ, ಮಾಡೋಕೂ ಬಿಡಲ್ಲ: ಪ್ರಧಾನಿ ಮೋದಿ

ಜೆಪಿಸಿಯಲ್ಲಿ 31 ಸಂಸದರು (21 ಲೋಕಸಭೆ, 10 ರಾಜ್ಯಸಭೆ) ಇರಲಿದ್ದು ಬಿಜೆಪಿಗರೇ ಅಧ್ಯಕ್ಷ ಆಗುವ ಸಂಭವವಿದೆ. 90 ದಿನಗಳಲ್ಲಿ ಇದು ವರದಿ ನೀಡಬೇಕು. ಇದು ಅನಗತ್ಯ ಚುನಾವಣಾ ಖರ್ಚು ವೆಚ್ಚ ತಪ್ಪಿಸಲು ಹಾಗೂ ನೀತಿಸಂಹಿತೆ ಹೇರಿಕೆಯಿಂದ ಆಗುವ ಅಭಿವೃದ್ಧಿ ಚಟುವಟಿಕೆಗಳ ಸ್ಥಾಗಿತ್ಯವನ್ನು ತಡೆಯಲು ಸಹಕಾರಿ ಎಂದಿರುವ ಕೇಂದ್ರ ಸರ್ಕಾರ, ಇದರಿಂದ ಸಂವಿಧಾನಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ಮಸೂದೆ ವಿರೋಧಿಸಿರುವ ಪ್ರತಿಪಕ್ಷಗಳು, ಇದನ್ನು ಸಂವಿಧಾನ ವಿರೋಧಿ ಎಂದು ಕರೆದಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿವೆ. ಜೊತೆಗೆ ಕರಡು ವರದಿಯನ್ನು ಜೆಪಿಸಿಗೆ ವಹಿಸುವಂತೆ ಒತ್ತಾಯಿಸಿದರು.

click me!