ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅಕ್ರಮ ಕಟ್ಟಡ ನೆಲಸಮ, ವಿಡಿಯೋ ವೈರಲ್!

By Suvarna NewsFirst Published Aug 8, 2022, 10:56 AM IST
Highlights

 ಶ್ರೀಕಾಂತ್ ತ್ಯಾಗಿ ಮಾಲೀಕತ್ವದ  ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಅಕ್ರಮವಾಗಿದ್ದು, ಅಧಿಕಾರಿಗಳು ಬುಲ್ಡೋಜರ್ ಬಳಸಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ನೋಯ್ಡಾ (ಆ.08):  ಸ್ವಯಂಘೋಷಿಸಿದ ಬಿಜೆಪಿ ನಾಯಕಿ ಶ್ರೀಕಾಂತ್ ತ್ಯಾಗಿಗೆ ಮತ್ತೊಂದು ಹಿನ್ನಡೆಯಾಗಿದೆ. ಈಗಾಗಲೇ ಮಹಿಳೆಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಶ್ರೀಕಾಂತ್ ತ್ಯಾಗಿಗೆ ನೋಯ್ಡಾ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಶ್ರೀಕಾಂತ್ ತ್ಯಾಗಿ ಮಾಲೀಕತ್ವದ  ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಅಕ್ರಮವಾಗಿದ್ದು, ಅಧಿಕಾರಿಗಳು ಬುಲ್ಡೋಜರ್ ಬಳಸಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಹಾಗೂ ತ್ಯಾಗಿ ಬೆಂಬಲಿಗರಿಂದ ತೀವ್ರ ವಾಗ್ವಾದ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ನೋಯ್ಡಾದ ಸೆಕ್ಟರ್ 93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಅತಿಕ್ರಮ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು 2019ರಲ್ಲಿ ನೋಟಿಸ್ ನೀಡಿದ್ದರು. ಅಕ್ರಮ ಒತ್ತುವರಿ ಕುರಿತು ನೋಟಿಸ್ ನೀಡಲಾಗಿತ್ತು. ಆದರೆ ಶ್ರೀಕಾಂತ್ ತ್ಯಾಗಿ ತಮ್ಮ ಪ್ರಭಾವ ಬಳಸಿ ಕಟ್ಟಡ ತೆರವುಗೊಳಿಸಲು ಅಡ್ಡಿಯಾಗಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದರಿಂದ ಬುಲ್ಡೋಜರ್, ಪಿಕಾಸಿ ಸೇರಿದಂತೆ ಎಲ್ಲಾ ಸಲಕರಣೆ ಹಾಗೂ ಭದ್ರತೆಯೊಂದಿಗೆ ಆಗಮಿಸಿದ ಅಧಿಕಾರಿಗಳು ಸುಸಜ್ಜಿತ ಕಾಂಪ್ಲೆಕ್ಸ್ ಕೆಡವಿದ್ದಾರೆ.

ಅಧಿಕಾರಿಗಳು ಬುಲ್ಡೋಜರ್ ಜೊತೆ ಆಗಮಿಸಿ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಕಟ್ಟಡ ಕೆಡವುತ್ತಿದ್ದಂತೆ ವಸತಿ ಸಮುಚ್ಚಯ ನಿವಾಸಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಈ ಮೂಲಕ ತ್ಯಾಗಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾತ್ರಿ ವಸತಿ ಸಮುಚ್ಚಯಕ್ಕೆ ಶ್ರೀಕಾಂತ್ ತ್ಯಾಗಿ ಕಳುಹಿಸಿದ ಗೂಂಡಾಗಳು ಆಗಮಿಸಿ ನಿವಾಸಿಗಳಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ.  ಈ ವೇಳೆ ವಾಗ್ವಾದಕ್ಕೆ ನಿಂತ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡ ಪೊಲೀಸರು 6 ಗೂಂಡಾಗಳನ್ನು ಬಂಧಿಸಿದ್ದಾರೆ. ಇನ್ನು ಶ್ರೀಕಾಂತ್ ತ್ಯಾಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದಾರೆ.

 

ಅಕ್ರಮ ಪ್ರದೇಶವಾದ ಸ್ಮಶಾನದ ಮೇಲೆ ಮನೆ ಕಟ್ಟಿದ್ದೇನೆ, ಬುಲ್ಡೋಜರ್ ಬಳಸಿ ಕೆಡವಿ ಯೋಗಿ ಸರ್ಕಾರಕ್ಕೆ ಪತ್ರ ಬರೆದ ವ್ಯಕ್ತಿ!

ಶ್ರೀಕಾಂತ್ ತ್ಯಾಗಿ ಯಾವ ಪಕ್ಷ ಅಧಿಕಾರದಲ್ಲಿದೆ ಆ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ. ಗೂಂಡಾಗಿರಿ ತೋರಿಸುವ ಶ್ರೀಕಾಂತ್ ವಿರುದ್ಧ ತಕ್ಷ ಕ್ರಮ ಕೈಗೊಳ್ಳಬೇಕು ಎಂದು ವಸತಿ ಸಮುಚ್ಚಯ ನಿವಾಸಿಗಳು ಆಗ್ರಹಿಸಿದ್ದಾರೆ. ಶ್ರೀಕಾಂತ್ ತ್ಯಾಗಿಯಿಂದ ಬಿಜೆಪಿ ದೂರ ಉಳಿದುಕೊಂಡಿದೆ.  ಇತ್ತ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ದಾಳಿ ಮಾಡಲಾಗಿದೆ ಎಂದು ಶ್ರೀಕಾಂತ್ ತ್ಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಜೆಪಿ ತನ್ನ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಪರೋಕ್ಷವಾಗಿ ದೂರಿದ್ದಾರೆ. 

ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಬೃಹತ್ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆಯಿಂದ ಶ್ರೀಕಾಂತ್ ತ್ಯಾಗಿ ಕೆರಳಿದ್ದಾರೆ. ರಹಸ್ಯ ಸ್ಥಳದಿಂದಲೇ ತಮ್ಮ ಬೆಂಬಲಿಗರಿಗೆ ಸೂಚನೆ ನೀಡುತ್ತಿರುವ ಶ್ರೀಕಾಂತ್ ತ್ಯಾಗಿ, ಅಧಿಕಾರಿಗಳ ವಿರುದ್ದ ಪ್ರತಿಭಟನೆಗೆ ಸೂಚಿಸಿದ್ದಾರೆ. ಆದರೆ ಕಾಂಪ್ಲೆಕ್ಸ್‌  ಸಮೀಪದ ವಸಚಿ ಸಮುಚ್ಚಯದ ನಿವಾಸಿಗಳು ಶ್ರೀಕಾಂತ್ ತ್ಯಾಗಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ತಕ್ಷಣವೇ ಶ್ರೀಕಾಂತ್ ತ್ಯಾಗಿ ಬಂಧಿಸಬೇಕು. ಮಹಿಳೆಗೆ ಕಿರುಕುಳ ನೀಡಿರುವ ಗಂಭೀರ ಆರೋಪ ಹೊತ್ತಿದ್ದಾರೆ. ಹೀಗಾಗಿ ತ್ಯಾಗಿ ಬಂಧಿಸಲು ಆಗ್ರಹಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ಅಕ್ರಮ ಕಟ್ಟಡ ನಿರ್ಮಾಣ ತಡೆಯದಿದ್ದರೆ ಅಧಿಕಾರಿಗಳಿಗೆ ಭಾರೀ ದಂಡ!

click me!