
ನೋಯ್ಡಾ (ಏ.02) ಹೋದಾಗ ಬಂದಾಗ, ಎದುರಿಗೆ ಸಿಕ್ಕಾಗ ನಗುತ್ತಿದ್ದ ಮಹಿಳೆಯನ್ನು ಕೆಲ ದಿನಗಳಿಂದ ಫಾಲೋ ಮಾಡುತ್ತಿದ್ದ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ ಪ್ಲಾನ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ಮರಳಿದಾಗ ಮಹಿಳೆಯನ್ನು ಹಿಂಬಾಲಿಸಿದ ಸೆಕ್ಯೂರಿಟಿ ಗಾರ್ಡ್ ಲಿಫ್ಟ್ ಏರುತ್ತಿದ್ದಂತೆ ಈತನೂ ಹತ್ತಿದ್ದಾನೆ. ಬಳಿಕ ಲಿಫ್ಟ್‌ನಲ್ಲಿ ಮಹಿಳೆಯನ್ನು ಬಲವಂತವಾಗಿ ಅಪ್ಪಿಕೊಂಡು ಚುಂಬಿಸುವ ಪ್ರಯತ್ನ ಮಾಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕೈಯಿಂದ ಹೇಗೋ ತಪ್ಪಿಸಿಕೊಂಡು ಲಿಫ್ಟ್‌ನಿಂದ ಹೊರಬಂದ ಘಟನೆ ನೋಯ್ಡಾದ ಸೆಕ್ಟರ್ 78ರಲ್ಲಿ ನಡೆದಿದೆ.
ಹಲವು ಮಹಡಿಗಳ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಮಹಿಳೆ ಪ್ರತಿ ದಿನ ಕೆಲಸಕ್ಕೆ ಹೋಗುವಾಗ, ಬರುವಾಗ ಸೆಕ್ಯೂರಿಟಿ ಗಾರ್ಡ್ ಅಂಕಲ್‌ಗೆ ಸ್ಮೈಲ್ ಮಾಡುತ್ತಿದ್ದಳು. ಅಷ್ಟರಲ್ಲೇ 60 ವರ್ಷದ ಸೆಕ್ಯೂರಿಟಿ ಗಾರ್ಡ್ ಮನಸ್ಸಿನಲ್ಲಿ ಏನೇನು ಆಸೆಗಳು ಹುಟ್ಟಿಕೊಂಡಿದೆ. ಎಂದಿಂತೆ ಕಚೇರಿಯಿಂದ ಕೆಲಸ ಮುಗಿಸಿ ಅಪಾರ್ಟ್‌ಮೆಂಟ್ ಗೇಟ್ ಮುಂಭಾಗ ಕ್ಯಾಬ್‌ನಿಂದ ಇಳಿದಿದ್ದಾಳೆ. ಅಷ್ಟರಲ್ಲೇ ಸೆಕ್ಯೂರಿಟಿ ಗಾರ್ಡ್ ಅಲರ್ಟ್ ಆಗಿದ್ದಾನೆ.
ಮಹಿಳೆ ಮೇಲಿನ ಮಹಡಿಯಲ್ಲಿರುವ ಮನೆಗೆ ತೆರಳಲು ಲಿಫ್ಟ್ ಬಳಿ ಬಂದಾಗ ಈ ಸೆಕ್ಯೂರಿಟಿ ಗಾರ್ಡ್ ಕೂಡ ಆಗಮಿಸಿದ್ದಾನೆ. ಬಳಿಕ ಆಕೆಯ ಜೊತೆಗೆ ಲಿಫ್ಟ್ ಒಳಹೊಕ್ಕಿದ್ದಾನೆ. ಲಿಫ್ಟ್ ಡೋರ್ ಕ್ಲೂಸ್ ಆಗುತ್ತಿದ್ದಂತೆ ತನ್ನ ಕೆಲಸ ಶುರುಮಾಡಿದ್ದಾನೆ. ಆಕೆಯನ್ನು ತಬ್ಬಿಕೊಂಡು ಚುಂಬಿಸಲು ಪ್ರಯತ್ನಿಸಿದ್ದಾನೆ.
ಸೆಕ್ಯೂರಿಟಿ ಗಾರ್ಡ್ ಲೈಂಗಿಕವಾಗಿ ಕಿರುಕಳ ನೀಡಲು ಆರಂಭಿಸುತ್ತಿದ್ದಂತೆ ಮುಂದಿನ ಫ್ಲೋರ್‌ಗೆ ಬಟನ್ ಒತ್ತಿದ್ದಾಳೆ. ಹೀಗಾಗಿ ಮನೆಯ ಫ್ಲೋರ್ ಆಗಮಿಸುವ ಮೊದಲೇ ಲಿಫ್ಟ್ ಬಾಗಿಲು ತೆರೆದುಕೊಂಡಿದೆ. ಹೀಗಾಗಿ ತಕ್ಷಣವೇ ಲಿಫ್ಟ್‌ನಿಂದ ಹೊರಬಂದು ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಬಳಿಕ ಸೊಸೈಟಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾಳೆ. ಆಡಳಿತ ಮಂಡಳಿ ಪ್ರಕರಣ ಗಂಭೀರವಾಗಿದ್ದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಲಿಖಿತವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.
ತನಿಖೆ ಆರಂಭಿಸಿದ ಪೊಲೀಸರು ನೇರವಾಗಿ ಲಿಫ್ಟ್ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಆ ವೇಳೇ ಘಟನೆ ನಡೆದ ದಿನದಿ ಮಧ್ಯಾಹ್ನ 3 ಗಂಟೆಯಿಂದ ಲಿಫ್ಟ್ ಒಳಗಿನ ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ ಅನ್ನೋದು ಬೆಳೆಕಿಗೆ ಬಂದಿದೆ. ತಂತ್ರಜ್ಞನರನ್ನು ಕರೆಯಿಸಿ ಸಮಸ್ಯೆ ಏನು ಎಂದು ಪರಿಶೀಲನೆ ಸೂಚಿಸಿದ್ದಾರೆ. ಈ ವೇಳೆ ಉದ್ದೇಶಪೂರ್ವಕವಾಗಿ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿರುವುದು ಬೆಳೆಕಿಗೆ ಬಂದಿದೆ. ಇನ್ನು ಇತರ ಸಿಸಿಟಿವಿ ದೃಶ್ಯಗಳಲ್ಲಿ ಮಹಿಳೆಯನ್ನು ಹಿಂಬಾಲಿಸುತ್ತಿರುವುದು ಪತ್ತೆಯಾಗಿದೆ. ಪ್ರಾಥಮಿಕ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು 60 ವರ್ಷದ ಸೆಕ್ಯೂರಿಟಿ ಗಾರ್ಡ್‌ನ ಅರೆಸ್ಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ