
ಮಾಲಾಲಾ, ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯ(University of Oxford)ದಿಂದ ತತ್ವಶಾಸ್ತ್ರ(philosophy) ರಾಜಕೀಯ ಹಾಗೂ ಅರ್ಥಶಾಸ್ತ್ರ( economics) ವಿಷಯದಲ್ಲಿ ಪದವಿ ಪಡೆದಿದ್ದಾರೆ. 2020ರ ಮೇ ತಿಂಗಳಲ್ಲಿಯೇ ಮಲಾಲಾ ಈ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿದ್ದರು. ಆದರೆ ಕೋವಿಡ್‌ನಿಂದಾಗಿ ಪದವಿ ಹಸ್ತಾಂತರ ಸಮಾರಂಭ ಮುಂದೂಡಿಕೆಯಾಗಿತ್ತು. ಆದರೆ ಈಗ ಆ ಸಮಾರಂಭ ನಡೆದಿದ್ದು, ಮಾಲಾಲಾ ಪತಿ ಅಸ್ಸರ್ ಮಲಿಕ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರಿಬ್ಬರ ಮೊದಲ ಭೇಟಿಯ ಬಗ್ಗೆ ಭಾವುಕವಾಗಿ ಬರೆದು ಕೆಲವು ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
Malala Wedding| ಪಾಕ್ ಕ್ರಿಕೆಟ್ ಅಧಿಕಾರಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನೊಬೆಲ್ ಪುರಸ್ಕೃತೆ!
ಇದರಲ್ಲಿ ಮಲಾಲಾ ಪದವಿ ಸಮಾರಂಭದ ಧಿರಿಸಿನಲ್ಲಿ ಮಿಂಚುತ್ತಿರುವ ಹಾಗೂ ಆಕೆಯ ತಂದೆ ತಾಯಿಯ ಜೊತೆ ಇರುವ ಫೋಟೋಗಳಿವೆ. ಮಾಲಾಲಾ ಕೂಡ ತಮ್ಮ ಈ ವಿಶೇಷ ದಿನದ ಹಲವು ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಹಾಕಿದ್ದಾರೆ. ತಂದೆ ತಾಯಿ, ಸ್ನೇಹಿತರು ಹಾಗೂ ಗಂಡನ ಜೊತೆ ಇರುವ ಫೋಟೋವನ್ನು ಮಾಲಾಲಾ ಪೋಸ್ಟ್ ಮಾಡಿದ್ದಾರೆ. ಇತ್ತ ಮಲಾಲಾ ಪತಿ ಅಸ್ಸರ್ ಪೋಸ್ಟ್ ಮಾಡಿರುವ ಚಿತ್ರಗಳಲ್ಲಿ ಮಲಾಲಾ ಕಪ್ಪು ಹಾಗೂ ಬಿಳಿಯ ಬಣ್ಣದ ಸಂಯೋಜನೆಯ, ಪದವಿ ಪಡೆಯುವಾಗ ಧರಿಸುವ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಪದವಿ ಸಮಾರಂಭ(graduation ceremony)ದ ಹಿನ್ನೆಲೆಯಲ್ಲಿ ನಾವು ಮೊದಲು ಭೇಟಿ ಮಾಡಿದ ಸ್ಥಳ ಇವತ್ತು ಸ್ವಲ್ಪ ಹೆಚ್ಚು ವಿಶೇಷವಾಗಿ ಕಾಣಿಸುತ್ತಿದೆ ಎಂದು ಅಸ್ಸರ್ ಬರೆದುಕೊಂಡಿದ್ದಾರೆ.
ಮಾಲಾಲಾ ಯೂಸುಫ್‌ಝೈ ಹಾಗೂ ಅಸ್ಸರ್ ಮಲಿಕ್ ಈ ತಿಂಗಳು ನವಂಬರ್ 9ರಂದು ವಿವಾಹವಾಗಿದ್ದರು. ಮಾಲಾಲಾ ಪಾಕಿಸ್ತಾನಿ ಮೂಲದ ಹೆಣ್ಣು ಮಕ್ಕಳ ಶಿಕ್ಷಣ(education for girls) ಪರ ಹೋರಾಟಗಾರ್ತಿಯಾಗಿದ್ದು,ಅತ್ಯಂತ ಕಿರಿಯ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆಯೂ ಆಗಿದ್ದಾಳೆ. 2012ರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಅವರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದಕ್ಕಾಗಿ ವಾಯುವ್ಯ ಪಾಕಿಸ್ತಾನದಲ್ಲಿ ತಾಲಿಬಾನಿಗರು ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಆಕೆಯ ತಲೆಗೆ ಗುಂಡು ತಗುಲಿತ್ತು. ಇದಾದ ಬಳಿಕ ಜಗತ್ತಿನಾದ್ಯಂತ ಅವರು ಭಾರಿ ಸುದ್ದಿಯಾಗಿದ್ದಳು.
ರೈತ ಹೋರಾಟಕ್ಕೆ ಪಾಕ್‌ನ ಮಲಾಲಾ ಬೆಂಬಲ
ಇತ್ತೀಚೆಗೆ ಭಾರತದಲ್ಲಿ ನಡೆದ ರೈತ ಹೋರಾಟಕ್ಕೆ ಈಕೆ ಬೆಂಬಲ ವ್ಯಕ್ತಪಡಿಸಿದ್ದಳು. ಸರ್ಕಾರದ ನೀತಿಗಳ ವಿರುದ್ಧ ದನಿ ಎತ್ತಿದ ಹೋರಾಟಗಾರರ ಬಂಧನ ಹಾಗೂ ಇಂಟರ್‌ನೆಟ್ ನಿರ್ಬಂಧ ಕಳವಳಕಾರಿ ಎಂದು ಆಕೆ ಹೇಳಿದ್ದಳು. ಈ ವೇಳೆ ಭಾರತದ ಅಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಭಾರತದ ನೆಟ್ಟಿಗರು ಆಕೆಯ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಲಾಲಾ ಪತಿ ಉದ್ಯಮಿ( entrepreneur)ಯಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಬೋರ್ಡ್(Pakistan Cricket Board )ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ