Free Hindu temples :ಸರ್ಕಾರದಿಂದ ಹಿಂದೂ ದೇವಾಲಯ ಮುಕ್ತ, ಮತಾಂತರ ವಿರೋಧಿ ಕಾನೂನಿಗೆ ಒತ್ತಾಯಿಸಿ VHP ಆಂದೋಲನ!

By Suvarna News  |  First Published Nov 27, 2021, 5:29 PM IST
  • ಮತಾಂತರ ಕಾಯ್ದೆ ಜಾರಿಗೆ ತರಲು ಆಗ್ರಹಿಸಿ ಆಂದೋಲನ
  • ಸರ್ಕಾರ ನಿಯಂತ್ರಣದಿಂದ ಹಿಂದೂ ದೇವಾಲಯ ಮುಕ್ತಗೊಳಿಸಲು ಆಗ್ರಹ
  • ವಿಶೇಷ ಅಂದೋಲನ ಹಮ್ಮಿಕೊಂಡ ವಿಶ್ವ ಹಿಂದೂ ಪರಿಷತ್ 

ನವದೆಹಲಿ(ನ.27): ದೇಶದ ಹಲವು ರಾಜ್ಯಗಳಲ್ಲಿ ಬಲವಂತದ ಮತಾಂತರ(Conversion) ನಡೆಯುತ್ತಿದೆ ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮತಾಂತರ ಚಟುವಟಿಕೆ ಜೋರಾಗಿದೆ ಅನ್ನೋ ಆರೋಪಗಳಿವೆ. ಇದರ ಜೊತೆಗೆ ಸರ್ಕಾರದ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯದಲ್ಲಿ ಇತರ ಧರ್ಮದವರನ್ನು ನೇಮಕ ಮಾಡಿ ಅಪಚಾರ ಎಸೆಯಲಾಗುತ್ತಿದೆ. ಹೀಗಾಗಿ  ಹಿಂದೂ ದೇವಾಲಯಗಳನ್ನು(Hindu temple) ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಲು ಹಾಗೂ ದೇಶಾದ್ಯಂತ ಮತಾಂತರ ನಿಷೇಧ ಕಾಯ್ದೆ(Anti Conversion law) ಜಾರಿಗೆ ತರಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ವಿಶೇಷ ಆಂದೋಲನ ಹಮ್ಮಿಕೊಂಡಿದೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿದ ವಿಶ್ವ ಹಿಂದೂ ಪರಿಷತ್(Vishva Hindu Parishad) ಅಂತಾರಾಷ್ಟ್ರೀಯ ಕಾರ್ಯಧ್ಯಕ್ಷ ಅಲೋಕ್ ಕುಮಾರ್, ದೇಶದಲ್ಲಿ ನಡೆಯುತ್ತಿರುವ ಅದರಲ್ಲೂ ತಮಿಳುನಾಡಿನಲ್ಲಿ(Tamil Nadu) ನಡೆಯುತ್ತಿರುವ ಮತಾಂತರ ಹಾಗೂ ದೇವಸ್ಥಾನ ಆದಾಯಗಳ ಲೂಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೇ ಅಲ್ಲ ಇದರ ವಿರುದ್ಧ ಕ್ರಮ ಜರುಗಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ಕಾನೂನು ಜಾರಿಗೊಳಿಸಲು ಆಗ್ರಹಿಸಿದ್ದಾರೆ.

ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ : ಮುತಾಲಿಕ್ ವಾಗ್ದಾಳಿ

Tap to resize

Latest Videos

ಕ್ರೈಸ್ತ ಧರ್ಮದ ಮಿಶನರಿಗಳು, ಇಸ್ಲಾಂ ಗುರುಗಳಿಂದ ಬಲವಂತದ ಮತಾಂತರ ಭಾರತದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಹಲವು ರಾಜ್ಯಗಳಲ್ಲಿ ಅಮಾಯಕರು ಈ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇದರ ವಿರುದ್ಧ ದ್ವನಿ ಎತ್ತಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಹಿಂದೂ ಧರ್ಮದ ಬಾಂಧವರನ್ನು ಮತಾಂತರ ಮಾಡುವ ಕಾರ್ಯ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ದೇಶದಲ್ಲಿ 11 ರಾಜ್ಯಗಳಲ್ಲಿ ಮತಾಂತರ ಮಿತಿ ಮೀರಿದ ಕಾರಣ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ ತಮಿಳುನಾಡಿನಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯತೆ ತೀವ್ರವಾಗಿದೆ. ಕಾರಣ ತಮಿಳುನಾಡಿನಲ್ಲಿ ಆರ್ಥಿಕ ದುರ್ಬಲವಾಗಿರುವ, ಅಶಕ್ತರು ಸೇರಿದಂತೆ ಹಲವರನ್ನು ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ನಗದು, ಹೂಡಿಕೆ, ನೆರವು, ಆರ್ಥಿಕ ಸಹಾಯದ ಮೂಲಕ ಮತಾಂತರ ಮಾಡಲಾಗುತ್ತಿದೆ. ಇದಕ್ಕೂ ಜಗ್ಗದಿದ್ದರೆ ಬೆದರಿಕೆ ಹಾಕಿ ಮತಾಂತರ ಮಾಡಲಾಗುತ್ತಿದೆ. ಸುಳ್ಳು ಭರವಸೆಗಳನ್ನು ನೀಡಿ ಬಲವಂತದಿಂದ ಮತಾಂತರ ಮಾಡಲಾಗುತ್ತಿದೆ. ಹೀಗಾಗಿ ತಮಿಳುನಾಡು ಸೇರಿದಂತೆ ಇಡೀ ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಅಗತ್ಯವಿದೆ. ಕೇಂದ್ರ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.

ಕೇದಾರನಾಥ ಸೇರಿ 51 ದೇಗುಲ ನಿರ್ವಹಣೆ ಸರ್ಕಾರದ ಕೈಗೆ: ವಿಎಚ್‌ಪಿ ವಿರೋಧ

ತಮಿಳುನಾಡಿನಲ್ಲಿ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದಾಳಿ ಇದೊಂದೆ ಅಲ್ಲ. ಸರ್ಕಾರ ದೇವಸ್ಥಾನದ ಆದಾಯದ ಮೇಲೆ ಕಣ್ಣು ಹಾಕಿದೆ. ದೇವಸ್ಥಾನದಲ್ಲಿರುವ ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾಡಲಾಗುತ್ತಿದೆ. ಈ ಚಿನ್ನದ ಗಟ್ಟಿಗಳನ್ನು ಬ್ಯಾಂಕ್‌ಗಳಲ್ಲಿ ಇಟ್ಟು ಅದರಿಂದ ಬರವು ಬಡ್ಡಿಯನ್ನು ತಮಿಳುನಾಡು ದೇವಾಲಯದ ಖರ್ಚು ವೆಚ್ಚಗಳಿಗೆ ನೀಡಲಾಗುತ್ತದೆ. ತಮಿಳುನಾಡು ಸರ್ಕಾರದ ಈ ಕ್ರಮವನ್ನು ನಿಲ್ಲಿಸಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆ ಅವರವರ ಧಾರ್ಮಿಕ ನಂಬಿಕೆಗಳ ಮೇಲೆ ಅವಲಂಬಿತವಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆಯಾಗಿದೆ . ಇದರಲ್ಲಿ ಸರ್ಕಾರಕ್ಕೆ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಸಿದೆ.

ಸರ್ಕಾರ ನಿಯಂತ್ರಣದಿಂದ ಹಿಂದೂ ದೇವಾಲಯ, ಮಠಗಳನ್ನು ಮುಕ್ತಗೊಳಿಸಲು ವಿಶ್ವ ಹಿಂದೂ ಪರಿಷತ್ ತಮಿಳುನಾಡಿನಲ್ಲಿ ಹಲವು ಸಾಧು ಸಂತರನ್ನು ಸಂಪರ್ಕಿಸಿ ಚರ್ಚೆ ನಡೆಸಿದೆ. ಇದೀಗ ಸರ್ಕಾರದಿಂದ ಮುಕ್ತಗೊಳಿಸಿದ ಹಿಂದೂ ದೇವಾಲಯಗಳ ಆಡಳಿತ ನೋಡಿಕೊಳ್ಳಲು ಹಿಂದು ಸಮಾಜ್ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಮತ್ತಷ್ಟು ಸಂತರು, ಸ್ವಾಮೀಜಿಗಳು ಹಾಗೂ ಹಿಂದೂ ಧರ್ಮದ ಗಣ್ಯರನ್ನು ಭೇಟಿ ಮಾಡಿ ರೂಪುರೇಶೆ ರೂಪಿಸುವುದಾಗಿ ವಿಶ್ವ ಹಿಂದೂ ಪರಿಷತ್ ಹೇಳಿದೆ. 

ಜುಲೈ 21ರಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಹಿಂದೂ ದೇವಾಲಯಗಳನ್ನು ಸರ್ಕಾರ ನಿಯಂತ್ರಣದಿಂದ ಮುಕ್ತಗೊಳಿಸಲು ಕಾನೂನು ಜಾರಿಗೊಳಿಸುವ ನಿರ್ಣಯವನ್ನು ಅಂಗೀಕರಿಸಿದೆ. ಇದೀಗ ಅತೀ ದೊಡ್ಡ ಆಂದೋಲನ ಹಮ್ಮಿಕೊಳ್ಳುವುದರ ಮೂಲಕ, ದೇಶಾದ್ಯಂತ ಈ ಕುರಿತು ಎಚ್ಚರಿಸಲು VHP ಮುಂದಾಗಿದೆ. 

click me!