ಮೋದಿ 100 ಬಾರಿ ಪ್ರಧಾನಿಯಾದರೂ ಚಿಂತೆ ಇಲ್ಲ: ಕಾಂಗ್ರೆಸ್‌ನ ಅಧೀರ್‌

Published : Aug 11, 2023, 09:17 AM ISTUpdated : Aug 11, 2023, 09:22 AM IST
ಮೋದಿ 100 ಬಾರಿ ಪ್ರಧಾನಿಯಾದರೂ ಚಿಂತೆ ಇಲ್ಲ: ಕಾಂಗ್ರೆಸ್‌ನ ಅಧೀರ್‌

ಸಾರಾಂಶ

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಧ್ರುವೀಕರಣ, ಕೋಮುವಾದ ಮತ್ತು ಕೇಸರೀಕರಣಕ್ಕೆ ಭಾರತವನ್ನು ಬಿಡುವ ಸಮಯ ಬಂದಿದೆ. ನರೇಂದ್ರ ಮೋದಿ 100 ಬಾರಿ ಪ್ರಧಾನಿಯಾದರೂ ಚಿಂತೆ ನನಗಿಲ್ಲ ಎಂದಿದ್ದಾರೆ. 

ನವದೆಹಲಿ: ಧ್ರುವೀಕರಣ, ಕೋಮುವಾದ ಮತ್ತು ಕೇಸರೀಕರಣಕ್ಕೆ ಭಾರತವನ್ನು ಬಿಡುವ ಸಮಯ ಬಂದಿದೆ. ನರೇಂದ್ರ ಮೋದಿ 100 ಬಾರಿ ಪ್ರಧಾನಿಯಾದರೂ ಚಿಂತೆ ನನಗಿಲ್ಲ. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಜನರ ಬಗ್ಗೆ ಕಾಳಜಿ ಇದೆ. ಕ್ವಿಟ್‌ ಇಂಡಿಯಾ ಇರಬೇಕು. ಆದರೆ ಅದು ಕೋಮುವಾದ, ಧ್ರುವೀಕರಣ ಮತ್ತು ಕೇಸರೀಕರಣವನ್ನು ತೊರೆಯಬೇಕು. ಪ್ರಧಾನಿ ಮಣಿಪುರ ಜನರಿಗೆ ಶಾಂತಿ ಸಂದೇಶ ನೀಡಬೇಕು. ಆ ಬಗ್ಗೆ ಮನ್‌ ಕೀ ಬಾತ್‌ನಲ್ಲಿ ಮಾತನಾಡಬೇಕೆಂದು ಕಾಂಗ್ರೆಸ್‌ ಬಯಸುತ್ತದೆ. 

ಇದಕ್ಕಾಗಿ ಅವಿಶ್ವಾಸ ನಿರ್ಣಯ ಮಂಡಿಸುವುದು ಬಿಟ್ಟು ಇಂಡಿಯಾ ಮೈತ್ರಿಕೂಟಕ್ಕೆ ಬೇರೆ ದಾರಿಯಿಲ್ಲ. ಹಸ್ತಿನಾಪುರ ಮತ್ತು ಮಣಿಪುರದ ಮಹಿಳೆಯರ ದೌರ್ಜನ್ಯದ ಬಗ್ಗೆ ರಾಜ ಕುರುಡನಾಗಬಾರದು. ಮಣಿಪುರ ಹಿಂಸಾಚಾರ (Manipur violence) ಸಣ್ಣ ವಿಚಾರವಲ್ಲ. ಈ ಅಂತರ್ಯುದ್ಧ ಜಾಗತಿಕ ಆಯಾಮ ಪಡೆದುಕೊಂಡಿದೆ. ಯೂರೋಪ್‌ ಮತ್ತು ಅಮೆರಿಕ ಸಂಸತ್ತಲ್ಲಿ ಚರ್ಚಿಸಲಾಗಿದೆ. ಇದು ರಾಜ್ಯಕ್ಕೆ ಸೀಮಿತವಾದ ವಿಷಯವಲ್ಲ. ಹೀಗಾಗಿ ಪ್ರಧಾನಿಗಳ ಮಧ್ಯಸ್ಥಿಕೆ ಅನಿವಾರ್ಯವಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ (Adhir ranjan chowdhury) ಹೇಳಿದ್ದರು. 

ಬೆಂಗಳೂರಿನಲ್ಲಿ UPA ಅಂತ್ಯಕ್ರಿಯೆ ಮಾಡಿ ಹೊಸ ಪೈಂಟ್ ಬಳಿದ ಕಾಂಗ್ರೆಸ್, ವಿಪಕ್ಷ ಒಕ್ಕೂಟ ತಿವಿದ ಮೋದಿ!

ವಿಪಕ್ಷಗಳ ಬೈಗುಳ ನನಗೆ ಟಾನಿಕ್‌


ವಿಪಕ್ಷಗಳು ಪ್ರಮುಖ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತವೆ. ಸದನಕ್ಕೆ ದೃಷ್ಟಿಬೊಟ್ಟು ರೀತಿ ಕಪ್ಪು ಬಟ್ಟೆಧರಿಸಿ ಬಂದಿದ್ದಕ್ಕೆ ವಿಪಕ್ಷ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರು ನನಗೆ ಎಸೆದ ಬೈಗುಳ ಮತ್ತು ಅಸಾಂವಿಧಾನಿಕ ಭಾಷೆಯನ್ನು ನಾನು ಟಾನಿಕ್‌ ಆಗಿ ಪರಿವರ್ತಿಸಿಕೊಂಡಿದ್ದೇನೆ. ಅವರು ಅಚ್ಚುಮೆಚ್ಚಿನ ಡೈಲಾಗ್‌ ಎಂದರೆ ಮೋದಿ ನಿಮ್ಮ ಸಮಾಧಿ ಅಗೆಯಲಾಗುವುದು ಎಂಬುದು ಎಂದರು.

ಅಲ್ಪಸಂಖ್ಯಾತರ ಬಗ್ಗೆ ಎಲ್ಲರದ್ದೂ ಮೌನ: ಒವೈಸಿ

ದೇಶದಲ್ಲಿ ಅಲ್ಪಸಂಖ್ಯಾತರು ತುಳಿತಕ್ಕೊಳಗಾದಾಗ ಯಾವ ದುಕಾನ್‌ದಾರ್‌ (ವಿಪಕ್ಷಗಳು) ಆಗಲೀ ಚೌಕೀದಾರ್‌ (ಸರ್ಕಾರ) ಆಗಲೀ ಬಾಯಿ ಬಿಡುವುದಿಲ್ಲ. ಆಡಳಿತ ಪಕ್ಷಗಳು ಮತ್ತು ವಿಪಕ್ಷಗಳೆರಡೂ ಅಲ್ಪಸಂಖ್ಯಾತರ ಸಮಾಧಿಯ ಮೇಲೆ ರಾಜಕೀಯ ಮಾಡುತ್ತಿವೆ. ದೇಶದಲ್ಲಿ ಎರಡು ರಂಗಗಳಿವೆ, ಒಂದು ದುಕಾನ್‌ದಾರ್‌ ಇನ್ನೊಂದು ಚೌಕೀದಾರ್‌ (Chowkidaar). ಅಮಿತ್‌ ಶಾ (Amit shah) ಯುಎಪಿಎ ಕಾನೂನು ತಿದ್ದುಪಡಿ ತಂದರು ಮತ್ತು ಈ ದುಕಾನ್‌ದಾರ್‌ಗಳು ಅದನ್ನು ಅನುಮೋದಿಸಿದರು. ರೈಲಿನಲ್ಲಿ ಪೊಲೀಸನೊಬ್ಬ ದೇಶದಲ್ಲಿ ಇರಬೇಕಾದರೆ ಮೋದಿಗೆ ಮತ ಹಾಕಬೇಕು ಎಂದು ಮುಸ್ಲಿಮರ ಕೊಂದು ಹಾಕಿದೆ. ನೂಹ್‌ನಲ್ಲಿ ಮುಸ್ಲಿಮರಿಗೆ ಸೇರಿದ್ದ 750 ಕಟ್ಟಡಗಳ ಧ್ವಂಸ ಮಾಡಿದ್ದಾರೆ. ಇದು ಉಗ್ರವಾದವಲ್ಲವೇ? ದೇಶದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಯಾಗಿದೆ. ಇದೇ ಅವರು 9 ವರ್ಷದಲ್ಲಿ ಮಾಡಿದ ಕೆಲಸ. ಮುಸ್ಲಿಂ ಮಕ್ಕಳಿಗೆ ಶಿಕ್ಷಣ ನಿರಾಕರಿಸಲು ಹಿಜಾಬ್‌ ನೆಪವಾಗಿದೆ. ಬಿಲ್ಕಿಸ್‌ ಬಾನೋ ಒವೈಸಿ ಮಗಳಾ? ಎಂದು ನಿರ್ಮಲಾ ಸೀತಾರಾಮನ್‌ ಪ್ರಶ್ನಿಸುತ್ತಾರೆ. ಗರ್ಭಿಣಿ ಬಿಲ್ಕಿಸ್‌ಳನ್ನು ಅತ್ಯಾಚಾರ ಮಾಡಿ ಅವಳ ಕುಟುಂಬವನ್ನು ಕೊಲೆ ಮಾಡಿದವರನ್ನು ಬಿಡುಗಡೆ ಮಾಡಿದ್ದೀರಿ. ಇದು ನಿಮ್ಮ ಆತ್ಮಸಾಕ್ಷಿಯೇ? ಎಂದು ಒವೈಸಿ ಕೆಂಡಕಾರಿದ್ದಾರೆ.

ಭಾರತ ಮಾತೆಯನ್ನು 3 ಭಾಗ ಮಾಡಿದ್ದೇ ಕಾಂಗ್ರೆಸ್‌: ಮೋದಿ ಭಾಷಣದ ಹೈಲೈಟ್ಸ್

ಧ್ವನಿ ಮತದಲ್ಲಿ ವಿಶ್ವಾಸಮತ ಗೆದ್ದ ಮೋದಿ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಸೋಲಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ಚರ್ಚೆಯ ಅಂತಿಮ ಹಂತದಲ್ಲಿ ಪ್ರಧಾನಿ ಮೋದಿ ಮಾತನಾಡುವಾಗಲೇ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಹೀಗಾಗಿ ಮೋದಿ ಭಾಷಣ ಮುಗಿದ ಬಳಿಕ ಸ್ಪೀಕರ್‌ ಓಂ ಬಿರ್ಲಾ, ನಿರ್ಣಯವನ್ನು ಮತಕ್ಕೆ ಹಾಕಿದರು. ಈ ವೇಳೆ ಆಡಳಿತಾರೂಢ ಎನ್‌ಡಿಎ ಒಕ್ಕೂಟದ ಸದಸ್ಯರು ಮಾತ್ರ ಹಾಜರಿದ್ದ ಕಾರಣ, ಅವರು ಅವಿಶ್ವಾಸದ ವಿರುದ್ಧ ಬೆಂಬಲ ವ್ಯಕ್ತಪಡಿಸುವ ಮೂಲಕ ನಿರ್ಣಯವನ್ನು ಸೋಲಿಸಿದರು.

ಮೋದಿ ಭಾಷಣದ ವೇಳೆ ವಿಪಕ್ಷಗಳ ಸಭಾತ್ಯಾಗ

ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ವಿಪಕ್ಷಗಳು ಸಭಾತ್ಯಾಗ ನಡೆಸಿದವು. ಒಂದೂ ಮುಕ್ಕಾಲು ಗಂಟೆಯಾದರೂ ಮಣಿಪುರ ವಿಷಯದ ಬಗ್ಗೆ ಮೋದಿ ಚಕಾರವೆತ್ತಲಿಲ್ಲ ಹಾಗಾಗಿ ನಾವು ಸಭಾತ್ಯಾಗ ನಡೆಸಿದವು ಎಂದು ವಿಪಕ್ಷಗಳು ಹೇಳಿವೆ. ಆದರೆ ವಿಪಕ್ಷಗಳಿಗೆ ತಾಳ್ಮೆ ಇಲ್ಲದೇ ಸಭಾತ್ಯಾಗ ನಡೆಸಿವೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ವಿಪಕ್ಷಗಳ ನಾಯಕರು ಮಣಿಪುರ, ಮಣಿಪುರ ಎಂದು ಘೋಷಣೆ ಕೂಗುತ್ತಿದ್ದರು. ಇದಾದ ಬಳಿಕ ‘ಇಂಡಿಯಾ’ ಒಕ್ಕೂಟದ ಪಕ್ಷಗಳು ಸಭಾತ್ಯಾಗ ನಡೆಸಿದವು. ಇವರೊಂದಿಗೆ ಭಾರತ್‌ ರಾಷ್ಟ್ರ ಸಮಿತಿ ಹಾಗೂ ಶಿರೋಮಣಿ ಅಕಾಲಿ ದಳದ ಸಂಸದರೂ ಸಹ ಸಭಾತ್ಯಾಗ ನಡೆಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್‌ ನಾಯಕ ಶಶಿ ತರೂರ್‌, ಒಂದು ಗಂಟೆ 45 ನಿಮಿಷವಾದರೂ ಮೋದಿ ಮಣಿಪುರ ಎಂಬ ಹೆಸರನ್ನು ಬಳಕೆ ಮಾಡಲಿಲ್ಲ. ವಿಪಕ್ಷಗಳ ಮೆಲೆ ದಾಳಿ ನಡೆಸುವ ಹಳೆಯ ರಾಜಕೀಯವನ್ನೇ ನಡೆಸುತ್ತಿದ್ದರು. ಹೀಗಾಗಿ ಸಭಾತ್ಯಾಗ ನಡೆಸಿದೆವು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!