ಭಾರತ ಮಾತೆಯನ್ನು 3 ಭಾಗ ಮಾಡಿದ್ದೇ ಕಾಂಗ್ರೆಸ್‌: ಮೋದಿ ಭಾಷಣದ ಹೈಲೈಟ್ಸ್

By Kannadaprabha News  |  First Published Aug 11, 2023, 6:46 AM IST

ದೇಶವನ್ನು 2 ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ದುರಂಹಕಾರದ ರಾಜವಂಶಗಳು ಎಂದು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವನ್ನು ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಬಡವರ ಪುತ್ರನನ್ನು ದೇಶದ ಜನತೆ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಭರ್ಜರಿ ಗೆಲುವಿನ ಮೂಲಕ ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


  • ಕಾಂಗ್ರೆಸ್ಸಿನ ಚಿಹ್ನೆ, ಧ್ವಜ, ಚಿಂತನೆ ಎಲ್ಲವೂ ಬೇರೆಯವರಿಂದ ಕದ್ದಿದ್ದು: ಪ್ರಧಾನಿ
  • ಬಡವರ ಮಗ ಅಧಿಕಾರದಲ್ಲಿರುವುದನ್ನು ಸಹಿಸಲು ಆಗುತ್ತಿಲ್ಲ: ತೀವ್ರ ವಾಗ್ದಾಳಿ
  • ದೇಶ ವಿಭಜಿಸಿದವರು ಭಾರತ ಮಾತೆಯ ಸಾವು ಬಯಸುತ್ತಿದ್ದಾರೆ
  • ದೇಶವನ್ನು 2 ಶತಮಾನ ಹಿಂದಕ್ಕೆ ಒಯ್ಯುವ ಕೂಟವೇ ‘ಇಂಡಿಯಾ’
  • ಬಡವರ ಪುತ್ರನಿಗೆ 2024ಕ್ಕೆ ದೇಶದ ಜನತೆ ಮತ್ತೆ ಆಶೀರ್ವದಿಸ್ತಾರೆ
  •  ಕಾಂಗ್ರೆಸ್ಸಿಗೆ ನೀತಿ, ಗುರಿ, ದೂರದೃಷ್ಟಿಇಲ್ಲ. ಆರ್ಥಿಕತೆಯ ಅರಿವಿಲ್ಲ
  •  ಪ್ರತಿಪಕ್ಷಗಳಿಗೆ ಭಾರತ ಸೇನೆಗಿಂತ ಪಾಕಿಸ್ತಾನ ಮೇಲೇ ಹೆಚ್ಚು ನಂಬಿಕೆ
  • ಹಿಂದೆ ನಾಯಕರು ವಿಮಾನಗಳನ್ನು ಕೇಕ್‌ ಕತ್ತರಿಸಲು ಬಳಸುತ್ತಿದ್ದರು
  • ನಮ್ಮ ಸರ್ಕಾರ ಲಸಿಕೆ ಸಾಗಣೆ ಮಾಡಲು ಬಳಕೆ ಮಾಡಿಕೊಂಡಿದೆ
  • ದೇಶಕ್ಕಿಂತ ಪಕ್ಷ ದೊಡ್ಡದು ಎಂದು ಪ್ರತಿಪಕ್ಷಗಳು ತೋರಿಸಿಕೊಟ್ಟಿವೆ
  • ಪ್ರತಿಪಕ್ಷಗಳ ಮೈತ್ರಿಕೂಟ ಕುಟುಂಬ ರಾಜಕಾರಣದ ಪ್ರತಿಬಿಂಬ
  • ವಿಪಕ್ಷಗಳ ಪ್ರತಿ ನಾಯಕನೂ ಮದುವೆಯಲ್ಲಿ ವರ ಆಗಲು ಬಯಸ್ತಿದ್ದಾರೆ

ನವದೆಹಲಿ: ದೇಶವನ್ನು 2 ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ದುರಂಹಕಾರದ ರಾಜವಂಶಗಳು ಎಂದು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವನ್ನು ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಬಡವರ ಪುತ್ರನನ್ನು ದೇಶದ ಜನತೆ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಭರ್ಜರಿ ಗೆಲುವಿನ ಮೂಲಕ ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ ಗುರುವಾರ ಲೋಕಸಭೆಯಲ್ಲಿ 130 ನಿಮಿಷಗಳ ಕಾಲ ಭಾಷಣ ಮಾಡಿದ ಪ್ರಧಾನಿ ಮೋದಿ, ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಲಾಗಿದೆ ಎಂಬ ರಾಹುಲ್‌ ಗಾಂಧಿ (Rahul Gandhi) ಆರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು ವಿಭಜನೆ ಮಾಡಿದ ಮತ್ತು ದೇಶದ ಜನರ ಮೇಲೆ ದಾಳಿ ನಡೆಸಿದ ಇತಿಹಾಸ ಹೊಂದಿರುವವರೇ ಇಂದು ಭಾರತ ಮಾತೆಯ ಸಾವನ್ನು ಬಯಸುತ್ತಿದ್ದಾರೆ ಎಂದು ವಾಕ್‌ಪ್ರಹಾರ ನಡೆಸಿದರು.

Tap to resize

Latest Videos

ಕಳೆದ 3 ದಿನಗಳಿಂದ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ವಿಪಕ್ಷ ನಾಯಕರು ಮಾಡಿದ ಟೀಕೆಗೆ ವಿಸ್ತೃತವಾಗಿ ತಿರುಗೇಟು ನೀಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡರು. ಜೊತೆಗೆ 2024ರಲ್ಲಿ ಇನ್ನೂ ಭಾರೀ ಬಹುಮತದೊಂದಿಗೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ನಡುವೆ ಒಂದೂವರೆ ಗಂಟೆಗಳ ಭಾಷಣದ ಹೊರತಾಗಿಯೂ ಪ್ರಧಾನಿ ಮೋದಿ ಮಣಿಪುರ (Manipur) ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ವಿಪಕ್ಷಗಳು ಸಭಾತ್ಯಾಗ ಮಾಡಿದವು. ಹೀಗಾಗಿ ಮೋದಿ ಭಾಷಣದ ಬಳಿಕ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಧ್ವನಿ ಮತದ ಮೂಲಕ ನಿರ್ಣಯವನ್ನು ಸೋಲಿಸಲಾಯಿತು.

ವಿಭಜನೆ:

ತಮ್ಮ ಸುದೀರ್ಘ ಭಾಷಣದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರಗಳು (Congress Government), ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ‘ಭಾರತ ಮಾತೆಯನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡುವ ವೇಳೆ ಆಕೆಯ ಅವಯವಗಳನ್ನು ಕತ್ತರಿಸಿ ಮೂರು ಭಾಗ ಮಾಡಿದ್ದೇ ಕಾಂಗ್ರೆಸ್‌ ಎಂದು ಟೀಕಿಸಿದ ಮೋದಿ, ಕಾಂಗ್ರೆಸ್‌ಗೆ ಯಾವುದೇ ನೀತಿ, ಯಾವುದೇ ಗುರಿ, ಯಾವುದೇ ದೂರದೃಷ್ಟಿ, ಜಾಗತಿಕ ಆರ್ಥಿಕತೆಯ ಮತ್ತು ಭಾರತದ ಆರ್ಥಿಕತೆ ಕುರಿತು ಅರಿವಿಲ್ಲ. ಪಕ್ಷದ ನಾಯಕತ್ವ ಗೊತ್ತುಗುರಿಯಿಲ್ಲದೆ ಒದ್ದಾಡುತ್ತಿದೆ. ವಿದೇಶಿಯೊಬ್ಬರು ಸ್ಥಾಪಿಸಿದ ಪಕ್ಷದ ಗುರುತು, ಧ್ವಜ, ಚುನಾವಣಾ ಚಿಹ್ನೆ, ಚಿಂತನೆ ಎಲ್ಲವೂ ಕದ್ದಿದ್ದು ಎಂದು ಟೀಕಿಸಿದರು.

ವಿಪಕ್ಷಕ್ಕೆ ಭಯೋತ್ಪಾದನೆ ವಿಷಯದಲ್ಲಿ ಭಾರತೀಯ ಸೇನೆಗಿಂತ (IndiaN Army) ಪಾಕಿಸ್ತಾನದ ಮಾತಿನ ಮೇಲೇ ಹೆಚ್ಚಿನ ನಂಬಿಕೆ. ಅವರಿಗೆ ದೇಶದ ಜನರಿಗಿಂತ ಪಾಕಿಸ್ತಾನದ ಧ್ವಜ ಹಿಡಿಯುವ ಪ್ರತ್ಯೇಕತಾವಾದಿಗಳ ಮಾತಿನ ಮೇಲೇ ಹೆಚ್ಚಿನ ನಂಬಿಕೆ. ವಿದೇಶಿ ನೆಲದಿಂದ ಭಾರತ ವಿರುದ್ಧ ಯಾವುದೇ ನಕಾರಾತ್ಮಕ ಸಂಗತಿ ಬಂದರೂ ಅದನ್ನು ಎತ್ತಿತೋರಿಸುವ ಕೆಲಸವನ್ನು ಕಾಂಗ್ರೆಸ್‌ ತಪ್ಪಿಸಿಕೊಳ್ಳುವುದಿಲ್ಲ. ಇದೇ ಕಾರಣಕ್ಕಾಗಿಯೇ ಜನತೆ ಕಾಂಗ್ರೆಸ್‌ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಮೋದಿ ಕಿಡಿಕಾರಿದರು.

ದೇಶದ ಜನ ವಿಶ್ವಾಸವಿಡಿ, ಶಾಂತಿಯ ಸೂರ್ಯ ಮಣಿಪುರದಲ್ಲಿ ಉದಯಿಸಲಿದೆ, ಮೋದಿ ವಿಶ್ವಾಸ!

ಹಿಂದೆ ಅವರು ಹುಟ್ಟುಹಬ್ಬದ ಕೇಕ್‌ ಕತ್ತರಿಸಲು ಬಳಸುತ್ತಿದ್ದ ವಿಮಾನಗಳಲ್ಲಿ ಇಂದು ಲಸಿಕೆಗಳನ್ನು ಸಾಗಣೆ ಮಾಡಲಾಗುತ್ತಿದೆ, ಅವರು ಬಟ್ಟೆಸಾಗಣೆಗೆ ಬಳಸುತ್ತಿದ್ದ ವಿಮಾನಗಳಲ್ಲಿ ಇಂದು ಬಡವರು ಪ್ರಯಾಣ ಮಾಡುತ್ತಿದ್ದಾರೆ. ಅವರು ಯುದ್ಧನೌಕೆಗಳನ್ನು ತಮ್ಮ ಪ್ರವಾಸಕ್ಕಾಗಿ ಬಳಸಿಕೊಳ್ಳುತ್ತಿದ್ದರು ಎಂದು ಕಾಂಗ್ರೆಸ್‌ಗೆ ಚಾಟಿ ಬೀಸಿದರು.
ಇದೇ ವೇಳೆ ಸಂಸತ್ತಿನ ಉಭಯ ಸದನಗಳಲ್ಲೂ ಕಲಾಪಕ್ಕೆ ಪದೇ ಪದೇ ಆಗುತ್ತಿರುವ ಅಡ್ಡಿಯ ಬಗ್ಗೆ ಪ್ರಸ್ತಾಪಿಸಿದ ಮೋದಿ, ವಿಪಕ್ಷಗಳು ದೇಶಕ್ಕಿಂತ ಪಕ್ಷ ದೊಡ್ಡದು ಎಂದು ತೋರಿಸಿವೆ. ಈ ಮೂಲಕ ದೇಶದ ಜನತೆಗೆ ದ್ರೋಹ ಬಗೆದಿವೆ ಎಂದು ಟೀಕಿಸಿದರು.

ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು

ಇದೇ ವೇಳೆ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಮೋದಿ, ‘ಅವರು ತಮ್ಮ ಹೆಸರು ಬದಲಾಯಿಸಿಕೊಂಡಿರಬಹುದು, ಆದರೆ ತಮ್ಮ ಹಳೆಯ ತಪ್ಪುಗಳನ್ನಲ್ಲ. ಅವರದ್ದು ಕುಟುಂಬ ರಾಜಕಾರಣದ ಪ್ರತಿಬಿಂಬ. ಅದು ಇಂಡಿಯಾ ಅಲ್ಲ, ಘಮಂಡಿಯಾ. ಅದರ ಪ್ರತಿ ನಾಯಕ ಕೂಡ ಮದುವೆ ಮೆರವಣಿಗೆಯಲ್ಲಿ ವರನಾಗಲು ಬಯಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

click me!