ಹೆದ್ದಾರಿಗಳು ಟೋಲ್‌ನಿಂದ ಮುಕ್ತ : ಯಾವಾಗಿಂದ ..?

Published : Dec 18, 2020, 08:38 AM IST
ಹೆದ್ದಾರಿಗಳು ಟೋಲ್‌ನಿಂದ ಮುಕ್ತ : ಯಾವಾಗಿಂದ ..?

ಸಾರಾಂಶ

ಕೇಂದ್ರ ಹೆದ್ದಾರಿ ಹಾಗೂ ಸಚಿವ ನಿತಿನ್ ಗಡ್ಕರಿ  ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ವಾಹನ ಸವಾರರಿಗೆ ಇದೊಂದು ಶುಭ ಸಂದೇಶವಾಗಿದೆ. 

ನವದೆಹಲಿ (ಡಿ.18): ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆ ರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಿಂದ ಜಿಪಿಎಸ್‌ ಆಧಾರಿತ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ. ಇದರಿಂದಾಗಿ ಭಾರತದ ಹೆದ್ದಾರಿಗಳು ಮುಂದಿನ 2 ವರ್ಷಗಳಲ್ಲಿ ಟೋಲ್‌ಬೂತ್‌ ಮುಕ್ತವಾಗಲಿವೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಅಸೋಚಾಮ್‌ ಸಂಸ್ಥಾಪನಾ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಪಿಎಸ್‌ ತಂತ್ರಜ್ಞಾನದ ನೆರವಿನಿಂದಾಗಿ ವಾಹನಗಳ ಚಲನೆಯ ಆಧಾರದ ಮೇಲೆ ಟೋಲ್‌ ಹಣ ಬ್ಯಾಂಕ್‌ ಖಾತೆಯಿಂದ ನೇರವಾಗಿ ಕಡಿತವಾಗಲಿದೆ. ಎಲ್ಲಾ ವಾಣಿಜ್ಯಿಕ ವಾಹನಗಳು ವಾಹನ ಕಣ್ಗಾವಲು ವ್ಯವಸ್ಥೆಯ ಅಡಿಯಲ್ಲಿ ಬರಲಿವೆ. ಹಳೆಯ ವಾಹನಗಳಲ್ಲೂ ಜಿಪಿಎಸ್‌ ತಂತ್ರಜ್ಞಾನವನ್ನು ಅಳವಡಿಸಲು ಸರ್ಕಾರ ಕೆಲವು ಯೋಜನೆಳನ್ನು ರೂಪಿಸಲಿದೆ ಎಂದು ಹೇಳಿದ್ದಾರೆ.

ಕೈಗೆಟುಕುವ ದರದ ಬಜಾಜ್ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಬೈಕ್ ಬಿಡುಗಡೆ! ...

ಮುಂದಿನ ಮಾರ್ಚ್ ವೇಳೆಗೆ ಟೋಲ್‌ ಸಂಗ್ರಹ 34,000 ಕೋಟಿ ರು. ತಲುಪಬಹುದು. ಆದರೆ, ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯಿಂದ ಮುಂದಿನ 5 ವರ್ಷಗಳಲ್ಲಿ ಟೋಲ್‌ ಸಂಗ್ರಹ 1,34,000 ಕೋಟಿ ರು.ಗೆ ಏರಿಕೆ ಆಗಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ-ಹೆಂಡ್ತಿ ಒಬ್ಬರಿಗೊಬ್ರು ಮುಟ್ಟುವಂತಿಲ್ಲ, ಜೋರಾಗಿ ನಗುವಂತಿಲ್ಲ; ವಿಶೇಷ ಆಚರಣೆಯ ಗ್ರಾಮ
Kali Dance Controversy: ಕಾಳಿ ವೇಷ ಧರಿಸಿ ಕೆಟ್ಟ ಡ್ಯಾನ್ಸ್ ಪ್ರದರ್ಶನ, ಆಕ್ರೋಶಕ್ಕೆ ಬೆದರಿ ಕ್ಷಮೆ ಕೇಳಿದ ಕೋಲ್ಕತ್ತಾ ಕಲಾತಂಡ