
ನವದೆಹಲಿ (ಡಿ.18): ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ರಕ್ಷಣಾ ಉದ್ದೇಶದಿಂದ ಮಹತ್ವದ್ದಾಗಿದ್ದು, ಇಂತಹ ರಸ್ತೆಗಳು 10 ಮೀಟರ್ ಅಗಲ ಇರುವುದು ಕಡ್ಡಾಯ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ. ಗಡಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಅಗಲವನ್ನು 5.5 ಮೀಟರ್‌ಗೆ ಸೀಮಿತಗೊಳಿಸಿ 2 ವರ್ಷಗಳ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಸಚಿವಾಲಯ ಬದಲಾವಣೆ ಮಾಡಿದೆ.
ಈ ಮುನ್ನ ವ್ಯೂಹಾತ್ಮಕವಾಗಿ ಮಹತ್ವದ್ದಾದ ರಸ್ತೆಗಳ ಅಗಲದ ಕುರಿತು ನಿರ್ದಿಷ್ಟವಾದ ಮಾನದಂಡ ಇರಲಿಲ್ಲ. ಆದರೆ, ಇತ್ತೀಚಿನ ಲಡಾಖ್ ಬಿಕ್ಕಟ್ಟು ಹಾಗೂ ಚೀನಾದ ಜೊತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಗಡಿ ರಸ್ತೆಗಳ ಅಗಲವನ್ನು ಹೆಚ್ಚಿಸುವಂತೆ ರಕ್ಷಣಾ ಸಚಿವಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಚೀನಾ ಜೊತೆ ಗಡಿ ಸಂಘರ್ಷ: 15 ದಿನದ ಭಾರಿ ಯುದ್ಧಕ್ಕೆ ಶಸ್ತ್ರಾಸ್ತ್ರ ಸಂಗ್ರಹ!
ಈ ಆದೇಶದ ಪ್ರಕಾರ, ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಗುಡ್ಡಗಾಡು ಹಾಗೂ ಪರ್ವತ ಪ್ರದೇಶಗಳಲ್ಲಿ ಇರುವ ರಸ್ತೆಗಳನ್ನು ವ್ಯೂಹಾತ್ಮಕವಾಗಿ ಮಹತ್ವದ ರಸ್ತೆಗಳೆಂದು ಪರಿಗಣಿಸಲಾಗಿದೆ. ಇಂತಹ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ಮಾರ್ಗ 7 ಮೀಟರ್ ಅಗಲವಾಗಿರಬೇಕು. ಜೊತೆಗೆ ಎರಡೂ ಕಡೆಗಳಲ್ಲಿ 1.5 ಮೀಟರ್‌ನಷ್ಟುಹೆಚ್ಚುವರಿ ಜಾಗವನ್ನು ಬಿಡಬೇಕು ಎಂದು ತಿಳಿಸಲಾಗಿದೆ. ಸೇನಾ ವಾಹನಗಳು ಮತ್ತು ಸೈನಿಕರನ್ನು ಗಡಿ ಪ್ರದೇಶಕ್ಕೆ ತ್ವರಿತವಾಗಿ ರವಾನಿಸುವುದಕ್ಕೆ ಈ ರಸ್ತೆಗಳು ಬಳಕೆ ಆಗುವ ಕಾರಣ ಹೆದ್ದಾರಿ ವಿಸ್ತರಣೆ ಆದೇಶ ಮಹತ್ವ ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ