ಸೇನೆಗೆ ಸ್ವದೇಶಿ ಶಸ್ತ್ರಾಸ್ತ್ರ : 28000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ

By Kannadaprabha NewsFirst Published Dec 18, 2020, 8:18 AM IST
Highlights

ಸೇನಾ ಪಡೆಯ ಮೂರು ವಿಭಾಗಗಳಿಗೆ ಅಗತ್ಯವಾದ 28000 ಕೋಟಿ ರು. ಮೌಲ್ಯದ ಶಸ್ತಾಸ್ತ್ರ ಮತ್ತು ಉಪಕರಣಗಳನ್ನು ಖರೀದಿಸುವ ಪ್ರಸ್ತಾವಕ್ಕೆ  ಅನುಮೋದನೆ ನೀಡಲಾಗಿದೆ.

ನವದೆಹಲಿ (ಡಿ.18): ಚೀನಾದೊಂದಿಗಿನ ಲಡಾಖ್‌ ಬಿಕ್ಕಟ್ಟು ಇನ್ನೂ ಮುಂದುವರೆದಿರುವ ಹಂತದಲ್ಲೇ ಸೇನಾ ಪಡೆಯ ಮೂರು ವಿಭಾಗಗಳಿಗೆ ಅಗತ್ಯವಾದ 28000 ಕೋಟಿ ರು. ಮೌಲ್ಯದ ಶಸ್ತಾಸ್ತ್ರ ಮತ್ತು ಉಪಕರಣಗಳನ್ನು ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಖರೀದಿ ಮಂಡಳಿ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಒಪ್ಪಿಗೆ ನೀಡಲಾಗಿದೆ. 28000 ಕೋಟಿ ರು. ಪೈಕಿ 27000 ಕೋಟಿ ರು.ಮೌಲ್ಯದ ಶಸ್ತಾ್ರಸ್ತ್ರ ಮತ್ತು ಉಪಕರಣಗಳನ್ನು ದೇಶೀಯ ಕಂಪನಿಗಳಿಂದಲೇ ಖರೀದಿಸುವ ಮೂಲಕ ಮೇಕ್‌ ಇನ್‌ ಇಂಡಿಯಾ ಯೋಜನೆ ಬೆಂಬಲಿಸಲು ನಿರ್ಧರಿಸಲಾಗಿದೆ. 15 ದಿನಗಳ ಯುದ್ಧಕ್ಕೆ ಅಗತ್ಯವಾದ ಶಸ್ತಾ್ರಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಕೇಂದ್ರ ಸರ್ಕಾರವು ಸೇನೆಯ ಮೂರು ವಿಭಾಗಗಳಿಗೆ ಇತ್ತೀಚೆಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸುರಂಗ ಸಾಕ್ಷ್ಯ ಸಂಗ್ರಹಕ್ಕೆ ಪಾಕ್‌ನೊಳಗೆ ನುಗ್ಗಿದ ಸೇನೆ! ...

ಈ ಖರೀದಿ ಪಟ್ಟಿಯಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ, ವಾಯುಪಡೆಗೆ ಅಗತ್ಯವಾದ, ವೈಮಾನಿಕ ದಾಳಿಯ ಕುರಿತು ಮುನ್ಸೂಚನೆ ನೀಡುವ ಅತ್ಯಾಧುನಿಕ ವ್ಯವಸ್ಥೆ, ನೌಕಾಪಡೆಗೆ ಅಗತ್ಯವಾದ ಹೊಸ ತಲೆಮಾರಿನ ಪಹರೆ ನೌಕೆಗಳು ಮತ್ತು ಭೂಸೇನೆಗೆ ಅಗತ್ಯವಾದ ಮಾಡ್ಯುಲರ್‌ ಬ್ರಿಡ್ಜ್‌ ಸೇರಿವೆ.

click me!