ದೇಶದ ಎಲ್ಲರಿಗೂ ಲಸಿಕೆ ನೀಡ್ತೀವಿ ಎಂದು ಹೇಳೇ ಇಲ್ಲ, ನಿರ್ದಿಷ್ಟ ವರ್ಗಕ್ಕೆ ಕೊಟ್ಟರೆ ಸಾಕು: ಕೇಂದ್ರ!

By Suvarna NewsFirst Published Dec 2, 2020, 7:44 AM IST
Highlights

ದೇಶದ ಎಲ್ಲರಿಗೂ ಲಸಿಕೆ ನೀಡ್ತೀವಿ ಎಂದಿಲ್ಲ: ಕೇಂದ್ರ| ಇಡೀ ದೇಶಕ್ಕೆ ಲಸಿಕೆ ನೀಡುವ ಅಗತ್ಯವಿಲ್ಲ| ನಿರ್ದಿಷ್ಟ ಪ್ರಮುಖ ವರ್ಗಕ್ಕೆ ಕೊಟ್ಟರೆ ಸಾಕು

ನವದೆಹಲಿ(ಡಿ.02): ಕೊರೋನಾ ಲಸಿಕೆ ಬಂದಮೇಲೆ ದೇಶದ ಎಲ್ಲರಿಗೂ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡಲಿದೆ ಎಂದು ಭಾವಿಸಿದ್ದ ಜನರಿಗೆ ನಿರಾಶಾದಾಯಕ ಸುದ್ದಿಯೊಂದು ಬಂದಿದೆ. ದೇಶದ ಎಲ್ಲರಿಗೂ ಕೋವಿಡ್‌-19 ಲಸಿಕೆ ನೀಡುವ ಬಗ್ಗೆ ಯಾವತ್ತೂ ನಾವು ಮಾತನಾಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸೈಡ್‌ ಎಫೆಕ್ಟ್ ಬೀರಿದೆ ಎಂದು ಲಸಿಕೆಗೆ ತಡೆ ನೀಡಲಾಗದು: ಕೇಂದ್ರ

ಮಂಗಳವಾರ ಐಸಿಎಂಆರ್‌ ನಿರ್ದೇಶಕ ಬಲರಾಮ್‌ ಭಾರ್ಗವ ಹಾಗೂ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಎಲ್ಲರಿಗೂ ಕೊರೋನಾ ಲಸಿಕೆ ನೀಡುವ ಬಗ್ಗೆ ಯಾವತ್ತೂ ಮಾತುಕತೆ ನಡೆದಿಲ್ಲ. ನಾವೂ ಕೂಡ ಎಲ್ಲರಿಗೂ ಲಸಿಕೆ ನೀಡುವುದಾಗಿ ಹೇಳಿಲ್ಲ. ಕೊರೋನಾ ಹರಡುವ ಸರಣಿಯನ್ನು ಮುರಿಯಲು ನಿರ್ದಿಷ್ಟವಾದ ಪ್ರಮುಖ ವರ್ಗಕ್ಕೆ ಲಸಿಕೆ ನೀಡಿದರೆ ಸಾಕಾಗುತ್ತದೆ. ಇಡೀ ದೇಶಕ್ಕೆ ಲಸಿಕೆ ನೀಡುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ಆಗಸ್ಟ್‌ ಒಳಗೆ 30 ಕೋಟಿ ಜನರಿಗೆ ಲಸಿಕೆ: ಕೇಂದ್ರ!

ಲಸಿಕೆ ಬಂದಮೇಲೂ ಮಾಸ್ಕ್‌ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ನಾವು ಸಣ್ಣ ಸಂಖ್ಯೆಯ ಜನರೊಂದಿಗೆ ಲಸಿಕಾ ಕಾರ್ಯಕ್ರಮ ಆರಂಭಿಸುತ್ತೇವೆ. ಹೀಗಾಗಿ ಕೊರೋನಾ ಹರಡುವಿಕೆಯ ಸರಣಿಯನ್ನು ಮುರಿಯಲು ಮಾಸ್ಕ್‌ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.

click me!