
ನವದೆಹಲಿ(ಆ.10) ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಿರುವ ವಿಪಕ್ಷ ಇಂದು ಕೂಡ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ. ಆದರೆ ಈ ವಾಗ್ದಾಳಿ ವೇಳೆ ಎಡವಟ್ಟು ಮಾಡಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮಾಡಿದ ಭಾಷಣ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಣಿಪುರ ಹಿಂಸಾಚಾರ ಹಾಗೂ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡನೆ ಕುರಿತು ಭಾಷಣ ಮಾಡಿದ ಚೌಧರಿ, ಪ್ರಧಾನಿ ನರೇಂದ್ರ ಮೋದಿಯನ್ನು ಬ್ಯಾಂಕ್‌ಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ನೀರವ್ ಮೋದಿಗೆ ಹೋಲಿಸಿದ್ದಾರೆ. ಇದು ಬಿಜೆಪಿ ಸಂಸದರನ್ನು ಕೆರಳಿಸಿದೆ. ಯಾವುದೇ ಆಧಾರಗಳಿಲ್ಲದೆ ಪ್ರಧಾನಿ ಮೋದಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವುದು ಹಾಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಧೀರ್ ರಂಜನ್ ಚೌಧರಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತು. ಇನ್ನು ಧೃತರಾಷ್ಟ್ರ ಕುರುಡ ರಾಜನಿಂದ ದ್ರೌಪದಿ ವಸ್ತ್ರಾಪಹರಣವಾಯಿತು. ಇದೀಗ ರಾಜ ಕುರುಡನಾಗಿದ್ದಾನೆ. ಹೀಗಾಗಿ ಹಸ್ತಿನಾಪುರ ಹಾಗೂ ಮಣಿಪುರದಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಅನ್ನೋ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸ್ಪೀಕರ್ ಅಧೀರ್ ರಂಜನ್ ಚೌಧರಿ ಆಡಿದ ವಿವಾದಾತ್ಮಕ ಮಾತುಗಳನ್ನು ಕಡತದಿಂದ ತೆಗೆದು ಹಾಕಿದರು.
ನೀರವ್ ಮೋದಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾದರು. ಎನ್‌ಡಿಎ ಸರ್ಕಾರ ನೀರವ್ ಮೋದಿಯನ್ನು ವಿದೇಶಕ್ಕೆ ಪರಾರಿಯಾಗದಂತೆ ಬಂಧಿಸುವ, ವಿದೇಶದಲ್ಲಿರುವ ನೀರವ್ ಮೋದಿಯನ್ನು ಬಂಧಿಸಿ ಭಾರತಕ್ಕ ಕರೆತರಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದೀಗ ನನಗೆ ಅರ್ಥವಾಗಿದೆ, ಪ್ರಧಾನಿ ಮೋದಿ, ನೀರವ್ ಮೋದಿ ಆಗಿದ್ದಾರೆ. ಮಣಿಪುರ ವಿಚಾರದಲ್ಲಿ ಪಲಾಯನ ಮಾಡುತ್ತಿದ್ದಾರೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
'ಸದನದಲ್ಲಿ ಜಯಲಲಿತಾ ಸೀರೆ ಎಳೆದವರು ಇಂದು ದ್ರೌಪದಿ, ಕೌರವರ ಬಗ್ಗೆ ಮಾತನಾಡ್ತಿದ್ದಾರೆ' ಡಿಎಂಕೆಗೆ ಚಾಟಿ ಬೀಸಿದ ನಿರ್ಮಲಾ
ಸದನನಲ್ಲಿ ಮಣಿಪುರ ವಿಚಾರ ಕುರಿತು ಮಾತನಾಡಿ ಪ್ರಧಾನಿಯನ್ನು ನೀರವ್ ಮೋದಿಗೆ ಹೋಲಿಕೆ ಮಾಡಿ ಬಿಜೆಪಿ ಆಕ್ರೋಶಕ್ಕೆ ತುತ್ತಾದರು. ಇದೇ ವೇಳೆ ಸಚಿವ ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕ ಚೌಧರಿ ಕ್ಷಮೆ ಕೇಳಬೇಕು, ಅವರ ನೀರವ್ ಮೋದಿ ಮಾತುಗಳನ್ನು ಕಡತದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಣಿಪುರ ವಿಚಾರದ ಕುರಿತು ಮಾತನಾಡಲು ಚೌಧರಿಗೆ ತಾಕೀತು ಮಾಡಿದ ಸ್ಪೀಕರ್, ನೀರವ್ ಮೋದಿ ಹೋಲಿಕೆಯನ್ನು ಕಡತದಿಂದ ತೆಗೆದುಹಾಕಿತು.
ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ವಿಚಾರ ಪ್ರಸ್ತಾಪಿಸಿದ ಅಧೀರ್ ರಂಜನ್ ಚೌಧರಿ, ಅಂದು ರಾಜ ಕುರುಡನಾಗಿದ್ದ, ಹೀಗಾಗಿ ದ್ರೌಪದಿ ವಸ್ತ್ರಾಪಹರಣ ನಡೆಯಿತು. ಇಂದು ಮಣಿಪುರ ವಿಚಾರದಲ್ಲಿ ರಾಜ ಕುರುಡರಾಗಿದ್ದಾರೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಪೀಕರ್ ಮೂಲಕ ಎಚ್ಚರಿಕೆಯನ್ನು ನೀಡಿದರು. ಪ್ರಧಾನಿ ಮೋದಿ ವಿರುದ್ಧ ಈ ರೀತಿ ಭಾಷೆ ಪ್ರಯೋಗ ಉತ್ತಮವಲ್ಲ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದರು. ಅಧೀರ್ ರಂಜನ್ ಚೌಧರಿ ಹಸ್ತಿನಾಪುರ ಹಾಗೂ ಮಣಿಪುರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲಾಗಿದೆ.
ಬಿಜೆಪಿಗರು ದೇಶಭಕ್ತರಲ್ಲ, ದೇಶದ್ರೋಹಿಗಳು, ಭಾರತಮಾತೆಯ ಕೊಂದರು: ರಾಹುಲ್ ಗಾಂಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ