Student Police Cadets ಹಿಜಾಬ್‌ ಧರಿಸಲು ಕೇರಳ ಸರ್ಕಾರ ನಕಾರ!

By Suvarna News  |  First Published Jan 30, 2022, 9:42 AM IST

*ಇದಕ್ಕೆ ಅನುಮತಿಸಿದರೆ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ: ಸರ್ಕಾರ ಸ್ಪಷ್ಟನೆ
*ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ  8ನೇ ತರಗತಿಯ ಕಲ್ಲಿಕೋಟೆ ವಿದ್ಯಾರ್ಥಿನಿ
*ಎನ್‌ಸಿಸಿ ಮಾದರಿಯಲ್ಲಿ ಶಾಲೆಗಳಲ್ಲಿ ‘ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌’ 


ತಿರುವನಂತಪುರ (ಜ. 30): ಕೇರಳದ ಶಾಲೆಗಳಲ್ಲಿರುವ ‘ವಿದ್ಯಾರ್ಥಿ ಪೊಲೀಸ್‌ ಕೆಡೆಟ್‌’ಗಳಿಗೆ (Student Police Cadets)  ಹಿಜಾಬ್‌ ಹಾಗೂ ಪೂರ್ತಿ ತೋಳಿನ ಅಂಗಿ ಧರಿಸಲು ಕೇರಳ ಸರ್ಕಾರ ಅನುಮತಿ ನಿರಾಕರಿಸಿದೆ. ವಿದ್ಯಾರ್ಥಿ ಪೊಲೀಸರಿಗೆ ಹಿಜಾಬ್‌ (Hijab) ಧರಿಸಲು ಅವಕಾಶ ನೀಡಬೇಕೆಂದು ರಿಝಾ ನಹಾನ್‌ ಎಂಬ 8ನೇ ತರಗತಿಯ ಕಲ್ಲಿಕೋಟೆ ವಿದ್ಯಾರ್ಥಿನಿ, ಮೊದಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. ನಂತರ ಹೈಕೋರ್ಟು, ಕೇರಳ ಸರ್ಕಾರಕ್ಕೆ ಈ ಬಗ್ಗೆ ಉತ್ತರಿಸಲು ಸೂಚಿಸಿತ್ತು.

ಇದಕ್ಕೆ ಉತ್ತರ ನೀಡಿರುವ ಕೇರಳ ಸರ್ಕಾರ, ‘ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ಗಳಿಗೆ ಹಿಜಾಬ್‌ ಹಾಗೂ ಪೂರ್ತಿ ತೋಳಿನ ಅಂಗಿ ಧರಿಸಲು ಅವಕಾಶ ನೀಡಿದರೆ, ಇತರ ಪಡೆಗಳಲ್ಲೂ ಇಂಥ ಬೇಡಿಕೆ ಆರಂಭವಾಗುತ್ತದೆ. ಕೇರಳದಂಥ ರಾಜ್ಯಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ಬರುತ್ತದೆ. ಹೀಗಾಗಿ ಧಾರ್ಮಿಕ ಸಂಕೇತ ರಾರಾಜಿಸುವಂಥ ಯೂನಿಫಾರಂಗೆ ಅನುಮತಿಸಲು ಆಗದು’ ಎಂದು ಸ್ಪಷ್ಟಪಡಿಸಿದೆ. ಕೇರಳದಲ್ಲಿ ಎನ್‌ಸಿಸಿ ಮಾದರಿಯಲ್ಲಿ ಶಾಲೆಗಳಲ್ಲಿ ‘ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌’ ಯೋಜನೆಯಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಕಾನೂನು, ಸಾರ್ವಜನಿಕ ಶಿಸ್ತು, ಅಪರಾಧ ನಿಯಂತ್ರಣ- ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

Tap to resize

Latest Videos

undefined

ಇದನ್ನೂ ಓದಿ: Hijab Controversy: ಹಿಜಾಬ್‌ ಧರಿಸುವ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ಪಾಠ ಎಂದ ಶಾಸಕ ರಘುಪತಿ ಭಟ್‌

ಸ್ಟೂಡೆಂಟ್ ಪೋಲಿಸ್ ಕೆಡೆಟ್ (SPC) ಯೋಜನೆಯು ಶಾಲಾ-ಆಧಾರಿತ ಯುವ ಅಭಿವೃದ್ಧಿ ಯೋಜನೆಯಾಗಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಕಾನೂನು, ಶಿಸ್ತು, ನಾಗರಿಕ ಪ್ರಜ್ಞೆ, ಸಾಮಾಜಿಕ ಅನಿಷ್ಟಗಳಿಗೆ ಪ್ರತಿರೋಧ ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸಹಾನುಭೂತಿ ಮೂಡಿಸುವ ಮೂಲಕ ಪ್ರಜಾಪ್ರಭುತ್ವ ಸಮಾಜದ ಭವಿಷ್ಯದ ನಾಯಕರಾಗಿ ವಿಕಸನಗೊಳ್ಳಲು ತರಬೇತಿ ನೀಡುತ್ತದೆ.

ವಿದ್ಯಾರ್ಥಿನಿ ಪೊಲೀಸ್ ಸಮವಸ್ತ್ರಕ್ಕಾಗಿ ಪೂರ್ಣ ತೋಳುಗಳು ಮತ್ತು ಹೆಡ್ ಸ್ಕಾರ್ಫ್ (ಹಿಜಾಬ್) ಧರಿಸುವಂತೆ ಕೋರಿ ಕೇರಳ ಹೈಕೋರ್ಟ್ ತನ್ನ ಮನವಿಯನ್ನು ತಿರಸ್ಕರಿಸಿದ ನಂತರ ಬಾಲಕಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಳು. ಆದಾಗ್ಯೂ, ರಿಟ್ ಅರ್ಜಿಯಲ್ಲಿ ತಿಳಿಸಿರುವ ತನ್ನ ಕುಂದುಕೊರತೆಯನ್ನು ವಿವರಿಸುವ ಮೂಲಕ ಸರ್ಕಾರದ ಮುಂದೆ ಪ್ರಾತಿನಿಧ್ಯವನ್ನು ಸಲ್ಲಿಸಲು ಅವಳು ಸ್ವತಂತ್ರಳು ಎಂದು ನ್ಯಾಯಾಲಯವು ನಿರ್ದೇಶಿಸಿತ್ತು.

ಇದನ್ನೂ ಓದಿ: Hijab Controversy: ಹಿಜಾಬ್‌ ವಿವಾದ ತಡೆಗೆ ಪಿಯುಸಿಗೂ ಸಮವಸ್ತ್ರ?

ಹೈಕೋರ್ಟ್‌ನ ತೀರ್ಪಿನ ಪಾಲನೆಗಾಗಿ ಅವರು ರಾಜ್ಯ ಸರ್ಕಾರದ ಮುಂದೆ ಪ್ರಾತಿನಿಧ್ಯವನ್ನು ಸಲ್ಲಿಸಿದರು. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ತಲೆ ಸ್ಕಾರ್ಫ್ ಮತ್ತು ಫುಲ್ ಸ್ಲೀವ್ ಡ್ರೆಸ್ ಧರಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳ ಅಧ್ಯಾಪಕರು ತಿಳಿಸಿದ್ದರಿಂದ ವಿದ್ಯಾರ್ಥಿನಿ ನ್ಯಾಯಾಲಯದ ಮೊರೆ ಹೋಗಿದ್ದರು.

ಕಾಲೇಜಲ್ಲಿ ಹಿಜಾಬ್‌ ನಿಷೇಧ ಬೇಡ:  ಉಡುಪಿಯ (Udupi) ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ (ತಲೆಗವಸು) ಧರಿಸುವ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ ನೀಡದಿರುವುದು ಆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿಯಾಗುತ್ತಿದೆ. ಈ ಪ್ರಕರಣದಲ್ಲಿ ರಾಜಕಾರಣ ಬೆರೆಸದೆ ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಜಮಾತೆ ಇಸ್ಲಾಮಿ ( Jamaat-i-Islami) ಹಿಂದ್‌ ಸಂಘಟನೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಡಾ.ಮಹಮ್ಮದ್‌ ಸಾದ್‌ ಬೆಳಗಾಮಿ (Dr Muhammad Saad Belgami), ಹಿಜಾಬ್‌ ಧರಿಸುವುದನ್ನು ಅಶಿಸ್ತು ಎಂದು ನೋಡದೆ ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು. ಈ ಪ್ರಕರಣವನ್ನು ಮುಂದುವರೆಸಿದರೆ ಅದು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಗಬಹುದು. ಆದ್ದರಿಂದ ಶೀಘ್ರದಲ್ಲಿ ಪ್ರಕರಣವನ್ನು ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ಇತ್ಯರ್ಥಗೊಳಿಸಿ ಮಕ್ಕಳ ಶಿಕ್ಷಣಕ್ಕೆ ಅವಕಾಶ ನೀಡಬೇಕು ಎಂದರು.

ಹೆಣ್ಣು ಮಕ್ಕಳು ಹಿಜಾಬ್‌ ಧರಿಸಿ ಶಾಲಾ ಕಾಲೇಜುಗಳಿಗೆ ಬರುವುದು ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇದು ಮುಸ್ಲಿಂ ಧರ್ಮದ ಧಾರ್ಮಿಕ ನಂಬಿಕೆಯಾಗಿದೆ. ಇದೇ ಕಾರಣ ನೀಡಿ ಹೆಣ್ಣುಮಕ್ಕಳ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡದಿರುವುದು ಅ ಮಕ್ಕಳ ಶೈಕ್ಷಣಿಕ ಭವಿಷ್ಯದ ಜೊತೆ ಆಟವಾಡುವ ಪ್ರಕ್ರಿಯೆಯಾಗಿದೆ. ಆದ್ದರಿಂದ ತಕ್ಷಣ ಈ ವಿಚಾರವನ್ನು ಬಗೆಹರಿಸಿ ಮಕ್ಕಳು ಶಿಕ್ಷಣ ಮುಂದುವರೆಸಲು ಅವಕಾಶ ನೀಡಬೇಕು ಎಂದರು.

click me!