
ನವದೆಹಲಿ (ಆ.6) : ಧರ್ಮಶಾಲೆಗಳು ಅಥವಾ ಧಾರ್ಮಿಕ ದತ್ತಿ ಸಂಸ್ಥೆಗಳು ನಡೆಸುವ ವಸತಿ ಗೃಹಗಳ ಕೊಠಡಿ ಬಾಡಿಗೆಗೆ ಸರಕು ಸೇವೆಗಳ ತೆರಿಗೆ (ಜಿಎಸ್‌ಟಿ) ಅನ್ವಯವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಮೂಲಕ ಧರ್ಮಶಾಲೆಗಳ ಮೇಲೂ ಜಿಎಸ್‌ಟಿಯನ್ನು ವಿಧಿಸುವ ವಿಚಾರವಾಗಿದ್ದ ಗೊಂದಲವನ್ನು ತೆರೆ ಎಳೆದಿದೆ.
ಜಗತ್ತಲ್ಲಿ ಆಗಿದ್ದಾಗಲಿ ನಮಗಂತೂ ನೋ ಟೆನ್ಷನ್: ಭಾರತಕ್ಕೆ ನಿರ್ಮಲಾ ಸೀತಾರಾಮನ್ ಅಭಯ!
ಜೂನ್‌ನಲ್ಲಿ ಜಿಎಸ್‌ಟಿ(GST) ಮಂಡಳಿ 1000 ರು. ಗಿಂತಲೂ ಕಡಿಮೆ ಬಾಡಿಗೆ ಮೌಲ್ಯದ ಎಲ್ಲ ಹೊಟೇಲು ಕೋಣೆಗಳ ಮೇಲೆ ಶೇ. 12ರಷ್ಟು ಜಿಎಸ್‌ಟಿ ವಿಧಿಸುವುದಾಗಿ ಹೇಳಿತ್ತು. ಜುಲೈ 18, 2022 ರಿಂದ 47 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಶಿಫಾರಸುಗಳ ನಿರ್ಧಾರಗಳು ಜಾರಿಗೆ ಬಂದ ನಂತರ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ನಡೆಸುವ ಧರ್ಮಶಾಲೆಗಳ ಕೊಠಡಿಗಳ ಬಾಡಿಗೆಯನ್ನು ಪ್ರತಿ ದಿನಕ್ಕೆ 1000 ರು.ಗೆ ಏರಿಕೆ ಮಾಡಿತ್ತು.
ಆದರೆ, ಆಪ್ ಸಂಸದ ರಾಘವ್ ಛಡ್ಡಾ(Raghav Chhadda) ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್((Nirmala Seetaraman) ಅವರನ್ನು ಭೇಟಿಯಾಗಿ ಅಮೃತಸರ್‌ನ ಸ್ವರ್ಣ ಮಂದಿರ(Amritsara Swarna Mandira )ದ ಸುತ್ತಲಿರುವ ಧರ್ಮಶಾಲೆಗಳ ಮೇಲೆ ವಿಧಿಸಲಾದ ಶೇ. 12ರಷ್ಟುಜಿಎಸ್ಟಿಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ವಿತ್ತ ಸಚಿವಾಲಯ ಸ್ಪಷ್ಟನೆಯನ್ನು ಬಿಡುಗಡೆ ಮಾಡಿದೆ. ಅಮೃತಸರದಲ್ಲಿ ಎಸ್‌ಜಿಪಿಸಿ ನಿರ್ವಹಿಸುತ್ತಿರುವ ಗುರು ಗೋಬಿಂದ್ ಸಿಂಗ್ ಎನ್‌ಆರ್‌ಐ ನಿವಾಸ್, ಬಾಬಾ ದೀಪ್ ಸಿಂಗ್ ನಿವಾಸ್, ಮಾತಾ ಭಾಗ್ ಕೌರ್ ನಿವಾಸ್ -- ಮೂರು ಸಾರೈಗಳು ಜುಲೈ 18, 2022 ರಿಂದ ಜಾರಿಗೆ ಬರುವಂತೆ ಜಿಎಸ್‌ಟಿ ಪಾವತಿಸಲು ಪ್ರಾರಂಭಿಸಿದ್ದರು.
4ನೇ ದಿನವೂ ಸಂಸತ್ ಕಲಾಪಕ್ಕೆ ವಿಪಕ್ಷಗಳ ಅಡ್ಡಿ: ಬೆಲೆ ಏರಿಕೆ, ಜಿಎಸ್‌ಟಿ ಕುರಿತು ಪ್ರತಿಭಟನೆ
‘ಜಿಎಸ್‌ಟಿ ಧಾರ್ಮಿಕ ಸಂಸ್ಥೆಗಳು ನಡೆಸುವ ಧರ್ಮಶಾಲೆಗಳಿಗೆ ಅನ್ವಯವಾಗದ ಹಿನ್ನೆಲೆಯಲ್ಲಿ ಎಸ್‌ಜಿಪಿಸಿ ನಡೆಸುವ ಧರ್ಮಶಾಲೆಗಳು ಜಿಎಸ್‌ಟಿಯಿಂದ ವಿನಾಯಿತಿ ಪಡೆಯಬಹುದಾಗಿದೆ’ ಎಂದು ವಿತ್ತ ಸಚಿವಾಲಯ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ