ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ ದಿನದಂದೇ ಕಾಂಗ್ರೆಸ್‌ ಕಪ್ಪುಬಟ್ಟೆ ಧರಿಸಿದ್ದೇಕೆ?

By Santosh NaikFirst Published Aug 5, 2022, 8:31 PM IST
Highlights

ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಗೃಹ ಸಚಿವ ಅಮಿತ್ ಶಾ ದೊಡ್ಡ ಹೇಳಿಕೆ ನೀಡಿದ್ದಾರೆ. ಹಣದುಬ್ಬರ ಅಥವಾ ನಿರುದ್ಯೋಗದ ಕುರಿತಾಗಿ ಕಾಂಗ್ರೆಸ್‌ ಈ ಪ್ರತಿಭಟನೆಯನ್ನು ಆಯೋಜಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ, ರಾಮಜನ್ಮಭೂಮಿ ಶಂಕುಸ್ಥಾಪನೆಯಾದ ದಿನ ಎನ್ನುವ ಕಾರಣಕ್ಕಾಗಿ, ಕಾಂಗ್ರೆಸ್‌ ಪಕ್ಷ ಬೇರೆ ಯಾವುದೋ ಕಾರಣ ನೀಡಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದೆ ಎಂದು ಆರೋಪಿಸಿದ್ದಾರೆ.
 

ನವದೆಹಲಿ (ಆ.5): ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನೇತೃತ್ವದದಲ್ಲಿ ಶುಕ್ರವಾರ ನವದೆಹಲಿಯಲ್ಲಿ ನಡೆದ ಪ್ರತಿಭಟನೆಯ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೊಡ್ಡ ಆರೋಪ ಮಾಡಿದ್ದಾರೆ. ಹಣದುಬ್ಬರವಾಗಲಿ, ನಿರುದ್ಯೋಗದ ವಿಚಾರಕ್ಕಾಗಲಿ ಕಾಂಗ್ರೆಸ್‌ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿರಲಿಲ್ಲ. ಆ ಕಾರಣಕ್ಕಾಗಿ ನಡೆಸಿದ ಪ್ರತಿಭಟನೆ ಇದಲ್ಲ. ರಾಮಜನ್ಮಭೂಮಿಯ ಶಂಕುಸ್ಥಾಪನೆಯಾಗಿ ಎರಡು ವರ್ಷವಾದ ದಿನದ ಹಿನ್ನಲೆ ಇರಿಸಿಕೊಂಡು, ಬೇರೆ ಕಾರಣದೊಂದಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಗುಪ್ತ ರೀತಿಯಲ್ಲಿ ಅಳವಡಿಸಿಕೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇಡಿ ಯಾವುದೇ ಸಮನ್ಸ್‌ ನೀಡಿರಲಿಲ್ಲ. ಆದರೂ ಕಾಂಗ್ರೆಸ್‌ ಪ್ರತಿಭಟನೆ ಇರಿಸಿಕೊಂಡಿದ್ದ ಹಿಂದಿನ ಕಾರಣವೇನು. ಇಂದು ಇಡೀ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರು ಕಪ್ಪು ಪಟ್ಟಿ ಧರಿಸಿ ಬಂದಿದ್ದರು. ಯಾಕೆಂದರೆ, ನಿರುದ್ಯೋಗ ಅಥವಾ ಹಣದುಬ್ಬರದ ಕಾರಣಕ್ಕಾಗಿ ನಡೆದ ಪ್ರತಿಭಟನೆ ಇದಲ್ಲ. ಇಡಿ ಸಮನ್ಸ್‌ ಎನ್ನುವ ಹೆಸರಿನಲ್ಲಿ ರಾಮ ಜನ್ಮಭೂಮಿಗೆ ಶಂಕುಸ್ಥಾಪನೆ ಮಾಡಿ ಎರಡು ವರ್ಷವಾದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ಉದ್ದೇಶ ಇದರ ಹಿಂದಿದೆ. ಶಾಂತಿಯುತ ಪರಿಹಾರವಿತ್ತು, ಆದರೆ ಕಾಂಗ್ರೆಸ್ ಇನ್ನೂ ಸಂತೋಷವಾಗಿಲ್ಲ. ಈ ರಾಮಮಂದಿರದ ವಿರುದ್ಧ ಪ್ರತಿಭಟನೆ ಸಲುವಾಗಿ ಕಪ್ಪು ಬಟ್ಟೆಯನ್ನು ಬಳಸಲಾಗಿದೆ.

ಕಾಂಗ್ರೆಸ್‌ನಿಂದ ತುಷ್ಟೀಕರಣ ನೀತಿ: ಕಾಂಗ್ರೆಸ್ ಎಂದಿನಂತೆ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಗೃಹ ಸಚಿವರು ದೊಡ್ಡ ಆರೋಪ ಮಾಡಿದ್ದಾರೆ. ಆದರೆ ಈ ನೀತಿ ಹಿಂದೆಯೂ ದೇಶಕ್ಕೆ ಸರಿಯಾಗಿರಲಿಲ್ಲ. ಇಂದದಿಗೂ ಸರಿಯಲ್ಲ. ಇದರಿಂದ ಕಾಂಗ್ರೆಸ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಆ ಪಕ್ಷ ತಲೆದೋರಿರುವ ಹಣೆಬರಹಕ್ಕೂ ತುಷ್ಟೀಕರಣ ನೀತಿಯೇ ಪ್ರಮುಖ ಕಾರಣ ಎಂದಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುವ ಪ್ರಕ್ರಿಯೆ ನಡೆಯುತ್ತಿರುವ ಕಾರಣ, ಈ ಸಮಯದಲ್ಲಿ ಅಮಿತ್ ಶಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಡಿಯನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ. ಪ್ರತಿಯೊಬ್ಬರು ದೇಶದ ಕಾನೂನಿನಂತೆ ಕೆಲಸ ಮಾಡಬೇಕು. ಶುಕ್ರವಾರ ಯಾವುದೇ ಕಾಂಗ್ರೆಸ್ ನಾಯಕರಿಗೆ ಇಡಿ ಯಾವುದೇ ಸಮನ್ಸ್ ಕಳುಹಿಸಿಲ್ಲ, ಆದರೆ ಇದು ಇನ್ನೂ ಯೋಜಿತ ಪ್ರತಿಭಟನೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಯೋಗಿ ಆದಿತ್ಯನಾಥ್‌ ಟೀಕೆ: ಇದೀಗ ಅಮಿತ್ ಶಾ ಅವರು ಈ ಪ್ರತಿಭಟನೆಯನ್ನು ರಾಮ ಮಂದಿರಕ್ಕೆ ನೇರವಾಗಿ ಜೋಡಿಸಿರುವ ಕಾರಣ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ಸಂಪೂರ್ಣ ಪ್ರತಿಭಟನೆಯು ರಾಮ ಭಕ್ತರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ನ ಈ ನಡವಳಿಕೆಯನ್ನು ತುಷ್ಟೀಕರಣ ಮತ್ತು ಖಂಡನೀಯ ಎಂದು ಕರೆದಿದ್ದಾರೆ.

click me!