ಕೊರೋನಾ ಗಾಳಿಯಲ್ಲಿ ಹರಡಲ್ಲ: ವೈದ್ಯ ಪರಿಷತ್| ಗಾಳಿಯಲ್ಲಿ ಹರಡಿದರೆ ಮನೆಮಂದಿಗೆಲ್ಲ ರೋಗ ಅಂಟುತ್ತಿತ್ತು| ಆಸ್ಪತ್ರೆಯಲ್ಲಿನ ಇತರ ರೋಗಿಗಳೂ ಸೋಂಕಿತರಾಗುತ್ತಿದ್ದರು
ನವದೆಹಲಿ(ಏ.06): ಕೊರೋನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂಬ ವಾದಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ತಳ್ಳಿಹಾಕಿದೆ.
ಗಾಳಿಯಿಂದ್ಲೂ ಹರಡುತ್ತೆ ಕೊರೋನಾ: ಅಮೆರಿಕಾದ ವಿಜ್ಞಾನಿಗಳಿಂದ ಶಾಕಿಂಗ್ ವರದಿ!
ಭಾನುವಾರ ಸ್ಪಷ್ಟನೆ ನೀಡಿದ ಐಸಿಎಂಆರ್ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ| ರಮಣ್ ಆರ್. ಗಂಗಖೇಡ್ಕರ್, ‘ಕೊರೋನಾ ಗಾಳಿಯ ಮೂಲಕವೇ ಪಸರಿಸುವ ಸೋಂಕು ಆಗಿದ್ದರೆ ಸೋಂಕಿತನ ಕುಟುಂಬದಲ್ಲಿದ್ದ ಎಲ್ಲರಿಗೂ ಸೋಂಕು ತಗುಲಬೇಕಿತ್ತು. ಅಲ್ಲದೆ, ಸೋಂಕಿತ ದಾಖಲಾಗಿರುವ ಆಸ್ಪತ್ರೆಯ ಇತರ ರೋಗಿಗಳಿಗೂ ಸೋಂಕು ಅಂಟಬೇಕಿತ್ತು. ಇದು ಗಾಳಿಯ ಮೂಲಕ ಹರಡುವ ಸೋಂಕು ಎಂಬುದಕ್ಕೆ ಸಾಕ್ಷ್ಯಗಳಿಲ್ಲ’ ಎಂದು ಹೇಳಿದರು.
ಇದೇ ವೇಳೆ, ಸಾರ್ವಜನಿಕ ಸ್ಥಳದಲ್ಲಿ ಉಗುಳುವುದರಿಂದ ಅಥವಾ ತಂಬಾಕು ಉತ್ಪನ್ನಗಳನ್ನು ಜಗಿಯುವುದರಿಂದ ಕೊರೋನಾ ವೈರಸ್ ಹರಡುವುದು ಸುಲಭವಾಗುತ್ತದೆ. ಹೀಗಾಗಿ ಜನರು ಉಗುಳುವುದು, ಧೂಮಪಾನ ಮಾಡುವುದು, ತಂಬಾಕು ಉತ್ಪನ್ನಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ತಿಳಿಸಿದ್ದಾರೆ.
ಸೋಂಕಿತನ ಜತೆ ಉಸಿರಾಡಿದ್ರೂ ಕೊರೋನಾ ವೈರಸ್ ಬರುತ್ತೆ: ಅಮೆರಿಕ!
ಕೊರೋನಾ ವೈರಸ್ ಸೋಂಕು ಹೊಂದಿರುವ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ಮಾತ್ರ ಆತನಿಂದ ಸೋಂಕು ಹಬ್ಬುತ್ತದೆ ಎಂಬ ನಂಬಿಕೆ ಇರುವಾಗಲೇ, ‘ಸೋಂಕಿತ ವ್ಯಕ್ತಿ ಜತೆ ಉಸಿರಾಡಿದರೆ ಅಥವಾ ಮಾತನಾಡಿದರೂ ಕೊರೋನಾ ಹಬ್ಬುತ್ತದೆ’ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಆಂಥೋಣಿ ಫೌಸಿ 2 ದಿನದ ಹಿಂದೆ ತಿಳಿಸಿದ್ದರು.