ಕೇರಳದಲ್ಲಿ ವಿದ್ಯುತ್, ನೀರಿನ ಬಿಲ್‌ ಇಲ್ಲ : ಸಾಲ ವಸೂಲಿಗೂ ಬ್ರೇಕ್‌

By Kannadaprabha News  |  First Published May 7, 2021, 7:29 AM IST

ಕೊರೋನಾ ಹಿನ್ನೆಲೆ ಜನರ ಬದುಕು ದುಸ್ಥರವಾಗಿದೆ. ಬದುಕೇ ಕಷ್ಟದ ಪರಿಸ್ಥಿತಿಗೆ ಬಂದು ನಿಂತಿದ್ದು ಈ ಸಂದರ್ಭದಲ್ಲಿ ಯಾವುದೇ ರೀತಿಯ ಬಿಲ್‌ಗಳ ವಸೂಲಾತಿ ಮಾಡಬಾರದೆಂದು ಸರ್ಕಾರ ಆದೇಶ ಹೊರಡಿಸಿದೆ. 


ತಿರುವನಂತಪುರ (ಮೇ.07): ಕೊರೋನಾ ಕಾರಣಕ್ಕೆ ರಾಜ್ಯದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಮುಂದಿನ 2 ತಿಂಗಳ ಕಾಲ ಬಾಕಿಯಿರುವ ವಿದ್ಯುತ್‌ ಹಾಗೂ ನೀರಿನ ಬಿಲ್‌ ವಸೂಲಿ ಮಾಡದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆದೇಶಿಸಿದ್ದಾರೆ. 

ಅಲ್ಲದೆ ಬ್ಯಾಂಕಿಂಗ್‌ ವಲಯವೂ ಸಹ ಸಾಲಗಾರರ ಬಳಿ ವಸೂಲಿಗೆ ತೆರಳದಂತೆಯೂ ಸಿಬ್ಬಂದಿಗೆ ಸೂಚಿಸಲಾಗಿದೆ. ಔಷಧ ಸೇರಿದಂತೆ ಇನ್ನಿತರ ಸಾಮಗ್ರಿಗಳ ಖರೀದಿಗಾಗಿ ಮನೆಯಿಂದ ಹೊರಹೋಗಲಾಗದ ಅಸಹಾಯಕರು ಪೊಲೀಸ್‌ ನಿಯಂತ್ರಣ ಕೊಟಡಿಗೆ ಕರೆ ಮಾಡುವ ಮೂಲಕ ಔಷಧಿಗಳನ್ನು ತರಿಸಿಕೊಳ್ಳಬಹುದಾಗಿದೆ. 

Latest Videos

undefined

ಕೊರೋನಾ ಅಬ್ಬರ: ಮೇ. 8ರಿಂದ ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್! ...

ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೊಲೀಸರು ಕೊರೋನಾ ಜಾಗೃತಿ ಮೂಡಿಸಲಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್‌ ತಿಳಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!