ಕೊರೋನಾ ವೈರಸ್ ದೇಶದ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಒಂದೊಂದೆ ರಾಜ್ಯಗಳು ಲಾಕ್‌ಡೌನ್ ಆಗುತ್ತಿವೆ. ಪ್ರಕರಣ ಸಂಖ್ಯೆ ಅರ್ಧ ಲಕ್ಷ ದಾಟುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಕೆಲ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರಾಡಳಿತ ಪ್ರದೇಶದ ರಾಜ್ಯಪಾಲರ ಮಹತ್ವದ ಚರ್ಚೆ ನಡೆಸಿದ್ದಾರೆ.
ನವದೆಹಲಿ(ಮೇ.06): ಕೊರೋನಾ ವೈರಸ್ ಭಾರತದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರತಿ ದಿನ 4 ಲಕ್ಷಕ್ಕೂ ಅಧಿಕ ಕೇಸ್ ಪತ್ತೆಯಾಗುತ್ತಿದೆ. ಸಾವಿನ ಸಂಖ್ಯೆ 4,000 ಸಮೀಪದಲ್ಲಿದೆ. ಕರ್ನಾಟಕದಲ್ಲಿ ಕೊರೋನಾ ಸುನಾಮಿಯಾಗಿದ್ದರೆ, ಇದೀಗ ಕೇರಳದಲ್ಲೂ ಪ್ರಕರಣ ಸಂಖ್ಯೆ ದಿಢೀರ್ ಎರಿಕೆಯಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ 4 ರಾಜ್ಯದ ಮುಖ್ಯಮಂತ್ರಿ ಹಾಗೂ ಇಬ್ಬರು ಕೇಂದ್ರಾಡಳಿತ ಪ್ರದೇಶದ ರಾಜ್ಯಪಾಲರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತೀಯ ಸಶಸ್ತ್ರ ಪಡೆ; ಮೋದಿ ಶ್ಲಾಘನೆ!.
undefined
ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿನ ಕೊರೋನಾ ಸ್ಥಿತಿಗತಿ ಹಾಗೂ ನಿಯಂತ್ರಣಕ್ಕೆ ಕೈಗೊಂಡಿರುವ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.
ನಾಲ್ಕು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿನ ಆಕ್ಸಿಜನ್, ಲಸಿಕೆ, ಔಷಧಿ ಸೇರಿದಂತೆ ಹಲವು ವೈದ್ಯಕೀಯ ಸಲಕರಣೆ ಪೂರೈಕೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಕೆಲ ಮಹತ್ವದ ಸೂಚನೆ ನೀಡಿದ್ದಾರೆ.
ವಿದೇಶಗಳಿಂದ ಆಗಮಿಸುತ್ತಿರುವ ವೈದ್ಯಕೀಯ ಸಲಕರಣೆಯನ್ನು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಹಾಗೂ ತುರ್ತು ಅಗತ್ಯವಿರುವ ನಗರಗಳಿಗೆ ಹಂಚಿಕೆ ಮಾಡುತ್ತಿದೆ. ಇತ್ತ ಮೂರು ಸೇನಾ ಪಡೆಗಳು ಕೊರೋನಾ ವಿರುದ್ಧದ ಹೋರಾಟ ನಡೆಸುತ್ತಿದೆ. ದಿನದ 24 ಗಂಟೆಯೂ ಸಶಸ್ತ್ರ ಪಡೆ ಅವಿರತ ಶ್ರಮ ವಹಿಸುತ್ತಿದೆ.