ಯಾವುದೇ ಕ್ಷಣದಲ್ಲಿ ನಿತೀಶ್‌ ರಾಜೀನಾಮೆ! ಭಾನುವಾರ ಮತ್ತೆ ಸಿಎಂ ಆಗಿ ಪ್ರಮಾಣ ವಚನ; ಇಬ್ಬರು ಬಿಜೆಪಿ ನಾಯಕರಿಗೆ ಡಿಸಿಎಂ ಪಟ್ಟ?

By BK Ashwin  |  First Published Jan 26, 2024, 2:34 PM IST

ಹಳೆಯ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷದ ಬೆಂಬಲದೊಂದಿಗೆ ಭಾನುವಾರ ಏಳನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗ್ತಿದೆ. 


ನವದೆಹಲಿ (ಜನವರಿ 26, 2024): ನಿತೀಶ್ ಕುಮಾರ್ ‘I.N.D.I.A ಮೈತ್ರಿಕೂಟ ತೊರೆಯೋದು ಬಹುತೇಕ ಪಕ್ಕಾ ಅಗಿದ್ದು, 24 - 48 ಗಂಟೆಯೊಳಗೆ ಯಾವುದೇ ಕ್ಷಣದಲ್ಲಿ ಅವರು ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಮತ್ತೆ ಬಿಜೆಪಿ ಜತೆ ಸೇರಿ ಬಿಜೆಪಿ - ಜೆಡಿಯು ಮೈತ್ರಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೂ ಹೇಳಲಾಗಿದೆ.

ಹಳೆಯ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷದ ಬೆಂಬಲದೊಂದಿಗೆ ಭಾನುವಾರ ಏಳನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಶುಕ್ರವಾರ ಮಧ್ಯಾಹ್ನ ತಿಳಿಸಿವೆ. ಈ ಮೂಲಕ ಬಿಹಾರದ ರಾಜಕೀಯ ಮತ್ತೆ ಕ್ಷಿಪ್ರಗತಿಯಲ್ಲಿ ಬದಲಾಗ್ತಿದೆ. 

Tap to resize

Latest Videos

ರಾಹುಲ್‌ ಗಾಂಧಿ ಅವಮಾನ ಮಾಡಿದ್ದಕ್ಕೆ ‘I.N.D.I.A’ ಮೈತ್ರಿಕೂಟಕ್ಕೆ ಸೆಡ್ಡು ಹೊಡೆದ ನಿತೀಶ್‌! ಮೋದಿ ಜತೆ ಸೇರೋದು ಪಕ್ಕಾನಾ?

ಹಾಗೂ, ನಿತೀಶ್‌ ಸರ್ಕಾರಕ್ಕೆ ಬಿಜೆಪಿ ಬೆಂಬಲ ನೀಡ್ತಿರೋದ್ರಿಂದ ಕೇಸರಿ ಪಕ್ಷದ ಇಬ್ಬರು ನಾಯಕರು ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದೂ ತಿಳಿದುಬಂದಿದೆ. ಸದ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿದ್ದು, ಬಿಹಾರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವುದರಿಂದ ಯಾವ ಪಕ್ಷವೂ ಇದಕ್ಕೆ ಆತುರದ ವಹಿಸ್ತಿಲ್ಲ. ಅಲ್ಲದೆ, ತಕ್ಷಣದ ಗಮನವು ಏಪ್ರಿಲ್ / ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಜನತಾದಳ (ಯುನೈಟೆಡ್) ಮುಖ್ಯಸ್ಥರು ಜನವರಿ 28 ರಂದು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2022 ರಲ್ಲಿ ಬಿಜೆಪಿ ಮೈತ್ರಿಕೂಟ ತ್ಯಜಿಸಿ ಅರ್‌ಜೆಡಿ ಜತೆ ಸರ್ಕಾರ ರಚಿಸಿದ್ದರು. ಈಗ ಮತ್ತೆ ಯೂ ಟರ್ನ್ ಹೊಡೆಯುತ್ತಿದ್ದಾರೆ. ಈ ಹಿನ್ನೆಲೆ ನಿತೀಶ್‌ಗೆ ಪಲ್ಟು ಕುಮಾರ್ ಎಂಬ ಅಡ್ಡ ಹೆಸರು ಸಹ ಟ್ರೆಂಡ್‌ ಆಗುತ್ತಿದೆ. ನಿತೀಶ್ ಮಹಾರಾಣಾ ಜಯಂತಿಯಂದು ಭಾನುವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೀಗ ಅದೇ ದಿನ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲಿದ್ದಾರೆ ಎನ್ನಲಾಗಿದೆ.

ಕುಟುಂಬ ರಾಜಕೀಯದ ವಿರುದ್ಧ ನಿತೀಶ್‌ ಟೀಕೆ: ಬಿಹಾರ ಸಿಎಂ ವಿರುದ್ಧ ಹರಿಹಾಯ್ದ ಲಾಲೂ ಪ್ರಸಾದ್‌ ಪುತ್ರಿ!

ಬಹುಮುಖ್ಯವಾಗಿ, ನಿತೀಶ್ ಅವರ ಘರ್ ವಾಪ್ಸಿಯ ಷರತ್ತುಗಳು ಜೆಡಿಯುಗೆ ನೀಡಲಾಗುವ ಲೋಕಸಭಾ ಸ್ಥಾನಗಳ ಕಡಿತವನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. 2019 ರಲ್ಲಿ ಜೆಡಿಯು 17 ರಲ್ಲಿ ಸ್ಪರ್ಧಿಸಿ 16 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ 12-15 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ ಎನ್ನಲಾಗಿದೆ.

ನಿತೀಶ್ ಅವರ ಬಿಜೆಪಿ ಮರು-ಹೊಂದಾಣಿಕೆ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ,  ರಾಜಕೀಯದಲ್ಲಿ, ಬಾಗಿಲುಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿಲ್ಲ ಎಂಬ ಸುಶೀಲ್ ಕುಮಾರ್ ಮೋದಿಯ ಹೇಳಿಕೆಯ ನಂತರ ಈ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ.

ನಡುಗೋ ಚಳಿಯಲ್ಲೂ ಬಿಸಿ ಏರಿದ ಬಿಹಾರ ರಾಜಕೀಯ ತಾಪಮಾನ: ದಿಢೀರ್‌ ರಾಜ್ಯಪಾಲರ ಭೇಟಿಯಾದ ನಿತೀಶ್‌ ಕುಮಾರ್!

click me!