ಯುದ್ಧಕಾಲದಲ್ಲಿ ನಿರಂತರ ಸೇವೆ: ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

Published : May 10, 2025, 06:56 AM ISTUpdated : May 10, 2025, 09:41 AM IST
ಯುದ್ಧಕಾಲದಲ್ಲಿ ನಿರಂತರ ಸೇವೆ: ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಸಾರಾಂಶ

ಭಾರತ- ಪಾಕಿಸ್ತಾನ ಸಂಘರ್ಷ ಹಿನ್ನೆಲೆಯಲ್ಲಿ ‘ಸವಾಲಿನ ಸಂದರ್ಭದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಎಲ್ಲಾ ಬ್ಯಾಂಕುಗಳು ಗ್ರಾಹಕರಿಗೆ ನಿರಂತರ ಸೇವೆ ನೀಡಬೇಕು’ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದಾರೆ.   

ನವದೆಹಲಿ (ಮೇ.10): ಭಾರತ- ಪಾಕಿಸ್ತಾನ ಸಂಘರ್ಷ ಹಿನ್ನೆಲೆಯಲ್ಲಿ ‘ಸವಾಲಿನ ಸಂದರ್ಭದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಎಲ್ಲಾ ಬ್ಯಾಂಕುಗಳು ಗ್ರಾಹಕರಿಗೆ ನಿರಂತರ ಸೇವೆ ನೀಡಬೇಕು’ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದಾರೆ. ಸೈಬರ್‌ ಭದ್ರತೆಯ ಕುರಿತು ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ಸಿಇಒಗಳ ಜೊತೆಗೆ ನಡೆಸಿದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಈ ಸೂಚನೆ ನೀಡಿದ್ದಾರೆ.

ಸವಾಲಿನ ಸಂದರ್ಭದಲ್ಲಿ ಆರ್ಥಿಕತ ಸ್ಥಿರತೆ ಕಾಪಾಡಿಕೊಳ್ಳಬೇಕು ಎಂದಿರುವ ಅವರು ‘ಭದ್ರತಾ ಸಂಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುವ ಮೂಲಕ ಬ್ಯಾಂಕುಗಳು ತಮ್ಮ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಯೂ ನಾಗರಿಕರಿಗೆ ಮತ್ತು ವ್ಯವಹಾರಗಳಿಗೆ ತೊಂದರೆಯಾಗದಂತೆ ಬ್ಯಾಂಕುಗಳು ಗಮನವಹಿಸಬೇಕು. ಎಟಿಎಂಗಳಲ್ಲಿ ನಗದು ಲಭ್ಯತೆ ಇರಬೇಕು . ಯುಪಿಐ, ಇಂಟರ್ನೆಟ್‌ ಬ್ಯಾಕಿಂಗ್ ಸೇವೆಗಳು ಮತ್ತು ಅಗತ್ಯ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ಅಡೆತಡೆ ಇರಬಾರದು’ ಎಂದಿದ್ದಾರೆ.

2 ದಿನ ಎಟಿಎಂ ಬಂದ್‌ ಎಂಬುದು ಸುಳ್ಳು: ಭಾರತ-ಪಾಕ್‌ ಯುದ್ಧದ ಕಾರಣ ಭಾರತದಲ್ಲಿ ಇನ್ನು 2-3 ದಿನ ಎಲ್ಲಾ ಎಟಿಎಂಗಳು ಮುಚ್ಚಲಿವೆ. ಈಗಲೇ ಜನರು ದುಡ್ಡು ತೆಗೆದಿರಿಸಿಕೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಆದರೆ ಇವೆಲ್ಲ ಸುಳ್ಳು ಎಂದು ಭಾರತ ಸರ್ಕಾರದ ಮಾಹಿತಿ ವಿಭಾಗ (ಪಿಐಬಿ) ಸ್ಪಷ್ಟಪಡಿಸಿದೆ.ಅತ್ತ, ಪಾಕಿಸ್ತಾನದಲ್ಲಿ ಎಟಿಎಂಗಳಿಂದ ಹಣ ತೆಗೆಯಲು 3,000 ರು. ಮಿತಿ ಹೇರಲಾಗಿದೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಇದು ಧೃಡಪಟ್ಟಿಲ್ಲ.

ನಮ್ಮೊಳಗೇ ಇದ್ದಾರೆ ಪಾಕ್‌ ಪ್ರೇಮಿಗಳು, ಭಾರತ ವಿರೋಧಿ ಹಿತ ಶತ್ರುಗಳು!

ಕರಾಚಿ ಬಂದರು ಧ್ವಂಸ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ಹಾಗೂ ಸೇನೆ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ನೌಕಾಪಡೆಯು ಈಗ ಕಾರ್ಯಾಚರಣೆಗೆ ಇಳಿದಿದೆ. ಅರಬ್ಬಿ ಸಮದ್ರದಲ್ಲಿ ನೆಲೆಗೊಂಡಿರುವ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್, ಮೊದಲ ಬಾರಿ ಪಾಕಿಸ್ತಾನದ ಪ್ರಮುಖ ನೌಕಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಪಾಕಿಸ್ತಾನದ ಪ್ರಮುಖ ಕರಾಚಿ ಬಂದರು ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!