ಪಾಕಿಸ್ತಾನ ಡ್ರೋನ್‌ ದಾಳಿಗೆ ಬ್ರೇಕ್ ಹಾಕಿದ ಬೆಂಗ್ಳೂರಿಗನ 'ಆಕಾಶ್'

Published : May 10, 2025, 05:47 AM IST
ಪಾಕಿಸ್ತಾನ ಡ್ರೋನ್‌ ದಾಳಿಗೆ ಬ್ರೇಕ್ ಹಾಕಿದ ಬೆಂಗ್ಳೂರಿಗನ 'ಆಕಾಶ್'

ಸಾರಾಂಶ

ನನ್ನ ಮಗು ನಿಖರವಾಗಿ ಕೆಲಸ ಮಾಡುತ್ತ ವೈರಿಯ ವೈಮಾನಿಕ ಗುರಿಗಳನ್ನು ಹೊಡೆದುರುಳಿಸುತ್ತಿರುವುದನ್ನು ನೋಡುತ್ತಿದ್ದರೆ, ಇದು ಜೀವನದಲ್ಲೇ ನನ್ನ ಪಾಲಿಗೆ ಸಂತಸದ ದಿನ ಎನಿಸುತ್ತಿದೆ.

ನವದೆಹಲಿ (ಮೇ.10): ಆಪರೇಷನ್‌ ಸಿಂದೂರದ ಭಾಗವಾಗಿ ಒಂದು ಕಡೆ ಬೆಂಗಳೂರಿನಲ್ಲಿ ಉತ್ಪಾದಿಸಲಾದ ‘ಸ್ಕೈ ಸ್ಟ್ರೈಕರ್‌’ ಆತ್ಮಾಹುತಿ ಡ್ರೋನ್‌ ಪಾಕಿಸ್ತಾನದ ಮೇಲೆರಗಿ ಉಗ್ರರ ನೆಲೆಗಳನ್ನು ಆಹುತಿ ಪಡೆಯುತ್ತಿದ್ದರೆ, ಇನ್ನೊಂದೆಡೆ ಪಾಕ್‌ ಕಡೆಯಿಂದ ಹಾರಿ ಬರುತ್ತಿರುವ ಕ್ಷಿಪಣಿಗಳನ್ನು ತಡೆಯುತ್ತಿರುವಲ್ಲಿ, ಸ್ವದೇಶಿ ಆಕಾಶ್‌ ವಾಯು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಇದನ್ನು ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಪದ್ಮಶ್ರೀ ಪುರಸ್ಕೃತ ಡಾ. ಪ್ರಹ್ಲಾದ್‌ ರಾಮ ರಾವ್‌ (78) ಅವರು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಲ್ಲಿ (ಡಿಆರ್‌ಡಿಒ) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಆಕಾಶ್‌ ಯೋಜನೆಯ ಅತಿ ಕಿರಿಯ ಯೋಜನಾ ನಿರ್ದೇಶಕರಾಗಿದ್ದರು. ಇವರಿಗೆ ಭಾರತದ ಕ್ಷಿಪಣಿ ಮನುಷ್ಯ ಎಂದೇ ಖ್ಯಾತರಾಗಿರುವ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್‌ ಕಲಾಂ ಅವರೇ ಈ ಜವಾಬ್ದಾರಿ ವಹಿಸಿದ್ದರು ಎನ್ನುವುದು ವಿಶೇಷ. ಹೈದರಾಬಾದ್‌ನಲ್ಲಿರುವ ಭಾರತ್ ಡೈನಾಮಿಕ್ಸ್ ಲಿ.ನಲ್ಲಿ ಉತ್ಪಾದನೆಯಾಗುತ್ತಿರುವ ಆಕಾಶ್‌ ವ್ಯವಸ್ಥೆಯನ್ನು 15 ವರ್ಷದ ಸತತ ಪರಿಶ್ರಮದಿಂದ ಅಭಿವೃದ್ಧಿಪಡಿಸಲಾಗಿದೆ.

ರಾತ್ರಿಯಿಡೀ ಪಾಕಿಸ್ತಾನ ದಾಳಿ: 3 ಬಲಿ, 6 ಮಂದಿಗೆ ಗಾಯ, ಕಣಿವೆ ರಾಜ್ಯ ಉದ್ವಿಗ್ನ

ಅದು ಇಂದು ದೇಶರಕ್ಷಣೆಗೆ ನಿಂತಿರುವುದನ್ನು ನೋಡಿ ರಾಮರಾವ್‌, ‘ನನ್ನ ಮಗು ನಿಖರವಾಗಿ ಕೆಲಸ ಮಾಡುತ್ತ ವೈರಿಯ ವೈಮಾನಿಕ ಗುರಿಗಳನ್ನು ಹೊಡೆದುರುಳಿಸುತ್ತಿರುವುದನ್ನು ನೋಡುತ್ತಿದ್ದರೆ, ಇದು ಜೀವನದಲ್ಲೇ ನನ್ನ ಪಾಲಿಗೆ ಸಂತಸದ ದಿನ ಎನಿಸುತ್ತಿದೆ. ಅದು ನಿರೀಕ್ಷೆಗೂ ಮೀರಿ ಅದ್ಭುತವಾಗಿ ಕೆಲಸ ಮಾಡುತ್ತಿದೆ’ ಎಂದು ಭಾವುಕವಾಗಿ ನುಡಿದಿದ್ದಾರೆ. ಇದೇ ವೇಳೆ, ಡ್ರೋನ್‌ಗಳು, ಕ್ಷಿಪಣಿಗಳು, ಹೆಲಿಕಾಪ್ಟರ್‌ ಅಷ್ಟೇ ಅಲ್ಲದೆ, ಅಮೆರಿಕದ ಎಫ್‌-16 ಯುದ್ಧವಿಮಾನಗಳನ್ನೂ ತಡೆಹಿಡಿಯಬಲ್ಲ ಆಕಾಶ್‌ ವ್ಯವಸ್ಥೆಯನ್ನು ದೇಶರಕ್ಷಣೆಗೆ ಬಳಸಲು ಸೇನೆ ಹಿಂದೇಟು ಹಾಕುತ್ತಿದ್ದುದನ್ನೂ ಅವರು ನೆನೆದಿದ್ದಾರೆ.

ಡಾ. ಪ್ರಹ್ಲಾದ್‌ ಯಾರು?: 1947ರಲ್ಲಿ ಬೆಂಗಳೂರಿನಲ್ಲಿ (ಅಂದಿನ ಮದ್ರಾಸ್‌ ಸಂಸ್ಥಾನ) ಜನಿಸಿದ ಪ್ರಹ್ಲಾದ್‌ ಅವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೆಕಾನಿಕಲ್‌ ಪದವಿ, ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ಏರೋನಾಟಿಕಲ್‌ ಮತ್ತು ಆಸ್ಟ್ರಾನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. 1971ರಲ್ಲಿ ಡಿಆರ್‌ಡಿಒದ ವಿಜ್ಞಾನಿಯಾಗಿ ವೃತ್ತಿ ಆರಂಭಿಸಿದ ರಾಮರಾವ್‌, ಬಳಿಕ 1997ರಲ್ಲಿ ಅದರ ನಿರ್ದೇಶಕರಾಗಿ ಬಡ್ತಿ ಪಡೆದರು. ಇವರು ಪುಣೆಯ ಡಿಐಡಟಿಯ ಹಾಗೂ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಾಧನಾ ಸಂಸ್ಥಾನದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ನಿನ್ನೆ ನಾವು ಡ್ರೋನ್‌, ಕ್ಷಿಪಣಿ ದಾಳಿ ನಡೆಸಿಯೇ ಇಲ್ಲ: ಪಾಕ್‌ ವಿದೇಶಾಂಗ ಸಚಿವಾಲಯ ಹೇಳಿಕೆ

ಆಕಾಶ್‌ ಹೊಣೆ ರಾವ್‌ರದ್ದು
ಹೈದ್ರಾಬಾದ್‌ನ ಡಿಆರ್‌ಡಿಒ ಕೇಂದ್ರದಲ್ಲಿದ್ದ ಡಾ.ಪ್ರಹ್ಲಾದ್‌ ರಾವ್‌
ಈ ವೇಳೆ ರಾವ್‌ಗೆ ಆಕಾಶ್‌ ಹೊಣೆ ವಹಿಸಿದ್ದ ಡಾ. ಅಬ್ದುಲ್‌ ಕಲಾಂ
ಸತತ 15 ವರ್ಷದ ಪರಿಶ್ರಮದಿಂದ ಆಕಾಶ್‌ ಏರ್‌ಡಿಫೆನ್ಸ್‌ ಅಭಿವೃದ್ಧಿ
ಇದೀಗ ದೇಶ ರಕ್ಷಣೆಯಲ್ಲಿ ವ್ಯವಸ್ಥೆ ಕ್ಷಮತೆ ನೋಡಿ ರಾವ್‌ಗೆ ಸಂಭ್ರಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!