
ನವದೆಹಲಿ[ಜ.25]: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ, ಗಲ್ಲು ಶಿಕ್ಷೆಯಿಂದ ಪಾರಾಗಳು ದೋಷಿಗಳು ಭಿನ್ನ ವಿಭಿನ್ನ ದಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ದೋಷಿ ಮುಕೇಶ್ ಕ್ಯುರೇಟಿವ್ ಅರ್ಜಿ ಹಾಗೂ ಕ್ಷಮಾದಾನ ಅರ್ಜಿ ವಜಾಗೊಂಡಿದೆ. ಹೀಗಿದ್ದರೂ ಸುಮ್ಮನಾಗದ ಮುಖೇಶ್ ಸದ್ಯ ಕ್ಷಮಾದಾನ ಅರ್ಜಿ ವಜಾಗೊಳಿಸಿದ ರಾಷ್ಟ್ರಪತಿಗಳ ನಿರ್ಧಾರ ಪ್ರಶ್ನಿಸಿ, ತನ್ನ ವಕೀಲ ವೃಂದಾ ಗ್ರೋವರ್ ಮೂಲಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾನೆ. ಅಲ್ಲದೇ ತನ್ನನ್ನು ಕ್ಷಮಿಸಬೇಕೆಂದು ಮನವಿ ಸಲ್ಲಿಸಿದ್ದಾನೆ. ಈ ವಿಚಾರವನ್ನು ಖುದ್ದು ವಕೀಲೆ ವೃಂದಾ ಗ್ರೋವರ್ ಬಹಿರಂಗಪಡಿಸಿದ್ದಾರೆ.
ಮತ್ತೆ ಕೋರ್ಟ್‌ಗೆ ಹೋದ ಕಿರಾತಕರು: ಸಾವು ಮುಂದೂಡುವುದು ಎಲ್ಲಿಯ ತನಕ?
ಗಲ್ಲು ಶಿಕ್ಷೆಯಿಂದ ಪಾರಾಗಲು ಕೊನೆಯ ಅವಕಾಶ
ಗಲ್ಲು ಶಿಕ್ಷೆ ವಿಧಿಸಲಾದ ಅಪರಾಧಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಉಳಿದಿರುವ ಕೊನೆಯ ಅವಕಾಶವಾಗಿದೆ. ರಾಷ್ಟ್ರಪತಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದರೆ, ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸುವ ಅವಕಾಶವಿದೆ. ಈ ಮನವಿಯನ್ನು ಅಪರಾಧಿ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ 14 ದಿನಗಳೊಳಗೆ ಸಲ್ಲಿಸಬೇಕು. ಒಂದು ವೇಳೆ ಸುಪ್ರೀಂ ಕೋರ್ಟ್ ನಜಲ್ಲೂ ಈ ಮನವಿ ವಜಾಗೊಂಡರೆ ಮುಕೇಶ್ ಎದುರಿರುವ ಎಲ್ಲಾ ಕಾನೂನು ಮಾರ್ಗಗಳು ಮುಚ್ಚಿಕೊಳ್ಳಲಿವೆ ಹಾಗೂ ನಿಗದಿತ ದಿನಾಂಕದಂದು ಗಲ್ಲು ಶಿಕ್ಷೆಯಾಗಲಿದೆ. ಆದರೆ ಅತ್ತ ಇನ್ನುಳಿದ ಮೂವರು ಅಪರಾಧಿಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಇನ್ನೂ ಕೆಲವು ಕಾನೂನು ಮಾರ್ಗಗಳಿದ್ದು, ಅವರು ಮೇಲ್ಮನವಿ ಅಥವಾ ಕ್ಷಮಾದಾನ ಅರ್ಜಿ ಸಲ್ಲಿಸಿದರೆ ಗಲ್ಲು ಮುಂದಕ್ಕೋಗುವ ಸಾಧ್ಯತೆಗಳಿವೆ.
'ಇಂದಿರಾ ಜೈಸಿಂಗ್‌ರಂಥವರು ಅತ್ಯಾಚಾರಿಗಳಿಗೆ ಜನ್ಮ ನೀಡುತ್ತಾರೆ!'
ತಿಹಾರ್ ಜೈಲು ಸಿಬ್ಬಂದಿ ವಿರುದ್ಧ ಸಲ್ಲಿಸಿದ್ದ ದೂರು ವಜಾ
ಇನ್ನು ಇತ್ತ ತಿಹಾರ್ ಜೈಲು ಸಿಬ್ಬಂದಿ ತಮ್ಮ ಕಕ್ಷೀದಾರರ ದಾಖಲೆಗಳನ್ನು ನೀಡುತ್ತಿಲ್ಲ ಎಂದು ದೂರಿ ನಿರ್ಭಯಾ ದೋಷಿಗಳಾದ ಪವನ್, ವಿನಯ್ ಹಾಗೂ ಅಕ್ಷಯ್ ವಕೀಲ ದೆಹಲಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ. ತಿಹಾರ್ ಜೈಲಿನ ಪರ ವಕೀಲರು ಅಪರಾಧಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಈ ಮೊದಲೇ ಸಿಬ್ಬಂದಿಗಳು ನೀಡಿರುವುದಾಗಿ ತಿಳಿಸಿದ್ದಾರೆ.
ಮನೆಯವ್ರನ್ನ ಮೀಟ್ ಮಾಡ್ತಿರಾ, ವಿಲ್ ಬರೀತಿರಾ?: ಎಲ್ಲ ಪ್ರಶ್ನೆಗೂ ಏಕೆ ಸೈಲೆಂಟ್ ಆಗಿದ್ದೀರಾ?
ಜನವರಿ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ