ಭಾರತ ಪ್ರವಾಸ ಕೈಗೊಂಡಿರುವ ಬ್ರೆಜಿಲ್ ಅಧ್ಯಕ್ಷ| ಗಣರಾಜ್ಯೋತ್ಸವದ ಮುಖ್ಯ ಅತಿಥಿ ಜೈರ್ ಬೋಲ್ಸನಾರೊ| ಭಾರತ-ಬ್ರೆಜಿಲ್ ನಡುವೆ 15 ಪ್ರಮುಖ ಒಪ್ಪಂದಗಳಿಗೆ ಸಹಿ| ಸೈಬರ್ ಭದ್ರತೆ, ಆರೋಗ್ಯ ,ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದ| ಭೌಗೋಳಿಕ ವ್ಯತ್ಯಾಸಗಳ ಹೊರತಾಗಿಯೂ ನಾವು ಒಟ್ಟಾಗಿದ್ದೇವೆ ಎಂದ ಪ್ರಧಾನಿ ಮೋದಿ|
ನವದೆಹಲಿ(ಜ.25): ಪರಸ್ಪರ ದ್ವಿಪಕ್ಷೀಯ ಭಾಂದವ್ಯ ಹೆಚ್ಚಿಸುವ 15 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಬ್ರೆಜಿಲ್ ಪರಸ್ಪರ ಸಹಿ ಹಾಕಿವೆ.
ಭಾರತಕ್ಕೆ ಭೇಟಿ ನೀಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಹಾಗೂ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖ 15 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
Delhi: President of Brazil, Jair Messias Bolsonaro and Prime Minister Narendra Modi witness exchange of Memorandum of Understanding (MoU) between the two countries including those on cybersecurity, bioenergy and health& medicine. pic.twitter.com/cyDmBPdFMj
— ANI (@ANI)
undefined
ಪ್ರಮುಖವಾಗಿ ಸೈಬರ್ ಭದ್ರತೆ, ಆರೋಗ್ಯ ,ತೈಲ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಿವೆ.
ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಗಣರಾಜ್ಯೋತ್ಸವದ ಸಮಾರಂಭದ ಮುಖ್ಯಅತಿಥಿಯಾಗಿ ಬಂದಿರುವ ಬ್ರೆಜಿಲ್ ಅಧ್ಯಕ್ಷರಿಗೆ ಆತಿಥ್ಯ ವಹಿಸುತ್ತಿರುವುದು ಹೆಮ್ಮೆ ಮತ್ತು ಸಂತೋಷದ ಸಂಗತಿ ಎಂದು ಹೇಳಿದರು.
Prime Minister Narendra Modi: Tomorrow at the Republic Day parade on Rajpath, you will witness the diversity of India. Brazil is also a country that celebrates many festivals with fervour. I thank you (President of Brazil) for accepting the invitation of India. https://t.co/mCxQXRJY5g pic.twitter.com/KmLjGgiaGr
— ANI (@ANI)ಭೌಗೋಳಿಕ ವ್ಯತ್ಯಾಸಗಳ ಹೊರತಾಗಿಯೂ ನಾವು ಅನೇಕ ಕ್ಷೇತ್ರಗಳಲ್ಲಿ ಒಟ್ಟಾಗಿದ್ದೇವೆ. ಈ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಗುರಿ ಎಂದು ಪ್ರಧಾನಿ ಮೋದಿ ಈ ವೇಳೆ ನುಡಿದರು.
ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಬ್ರೆಜಿಲ್ ಅಧ್ಯಕ್ಷ!
ಇದೇ ವೇಳೆ ಮಾತನಾಡಿದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ, ಗಣರಾಜ್ಯೋತ್ಸವ ಪರೇಡ್‌ಗಾಗಿ ತಾವು ಬಹಳ ಕೂತುಹಲದಿಂದ ಕಾಯುತ್ತಿರುವುದಾಗಿ ಹೇಳಿದರು.