ಗೋವಾದಲ್ಲಿ ಮತ್ತೆ ದುರ್ಘಟನೆ: ಆಕ್ಸಿಜನ್ ಇಲ್ಲದೆ 15 ಜನ ಸೋಂಕಿತರು ಸಾವು

By Suvarna News  |  First Published May 14, 2021, 10:36 AM IST
  • ಗೋವಾದಲ್ಲಿ ಮತ್ತೆ ಮರುಕಳಿಸಿದ ದುರ್ಘಟನೆ
  • ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿ 15 ಜನ ಸೋಂಕಿತರು ಸಾವು

ಪಣಜಿ(ಮೇ.14): ಆಮ್ಲಜನಕದ ಸಮಸ್ಯೆಗಳಿಂದ ಹೆಚ್ಚಿನ ಸಾವುಗಳು ಸಂಭವಿಸಬಾರದು ಎಂದು ಗೋವಾದಲ್ಲಿರುವ ಬಾಂಬೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನಂತರ, ರಾಜ್ಯದ ಅತಿದೊಡ್ಡ ಕೋವಿಡ್ ಕೇಂದ್ರವಾದ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಮುಂಜಾನೆ 2 ರಿಂದ 6 ರವರೆಗೆ 15 ಸಾವು ಸಂಭವಿಸಿದೆ.

ಆಕ್ಸಿಜನ್ ಪೋರೈಕೆ ಕಮ್ಮಿಯಾಗಿ 15 ಸೋಂಕಿತರು ಸಾವನ್ನಪ್ಪಿದ್ದಾರೆ. ಮುಂಜಾನೆ 1 ಗಂಟೆ ಸುಮಾರಿಗೆ ಆಸ್ಪತ್ರೆಯ ಕೋವಿಡ್ ವಾರ್ಡ್‌ಗಳಲ್ಲಿ ಆಮ್ಲಜನಕದ ಕೊರತೆ ಕಂಡು ಬಂತು. ಕೊರತೆ ಆರಂಭವಾದಂತೆ ಜಿಎಂಸಿಎಚ್‌ನ ಸಂಬಂಧಿಕರು ಮತ್ತು ನಿವಾಸಿ ವೈದ್ಯರು ರಾತ್ರಿಯಿಡೀ ಆಕ್ಸಿಜನ್‌ಗಾಗಿ ಬಹಳಷ್ಟು ಪ್ರಯತ್ನ ಮಾಡಿದ್ದರು. ಆದರೆ ಸುಮಾರು 20 ನಿಮಿಷಗಳ ನಂತ್ರ ಆಕ್ಸಿಜನ್ ಲಭ್ಯವಾಗಿದ್ದು ಅಷ್ಟೊತ್ತಿಗಾಗಲೇ 15 ಜನರು ಸಾವನ್ನಪ್ಪಿದ್ದಾರೆ.

Latest Videos

undefined

ಗೋವಾ ಆಸ್ಪತ್ರೆಯಲ್ಲಿ 26 ಸೋಂಕಿತರ ಸಾವು: ಹೈಕೋರ್ಟ್‌ನಿಂದ ತನಿಖೆ!

ಅವರು ಮಂಗಳವಾರ ಮುಂಜಾನೆ ಜಿಎಂಸಿಎಚ್‌ನಲ್ಲಿ ಆಮ್ಲಜನಕದ ಸಮಸ್ಯೆಗಳಿಂದ 26 ಕೋವಿಡ್ ರೋಗಿಗಳ ಸಾವು ಸಂಭವಿಸಿದೆ ಎಂದು ಹೇಳಿದ ನಂತರ ಹೈಕೋರ್ಟ್ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಸೂಚಿಸಿತ್ತು.

ಪೈಪ್‌ಲೈನ್‌ನಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಆಕ್ಸಿಜನ್ ಒತ್ತಡ ಆರಂಭವಾಯ್ತು. ಫ್ಲಕ್ಚುಯೇಷನ್‌ನಿಂದ ಅವರ ವಾರ್ಡ್‌ನ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಜಿಎಂಸಿಎಚ್ ವಾರ್ಡ್‌ ವೈದ್ಯರು ತಿಳಿಸಿದ್ದಾರೆ. ರೋಗಿಗಳು ಉಸಿರಾಡಲು ಕಷ್ಟಪಡುವಾ ಅವರ ಸ್ಯಾಚುರೇಶನ್ ಮಟ್ಟಗಳು (ಎಸ್‌ಪಿಒ 2) 40-50ಕ್ಕೆ ಇಳಿದಿದೆ ಎಂದು ಸಂಬಂಧಿಕರು ನಮ್ಮನ್ನು ಕರೆದಿದ್ದಾರೆ. ನಿರ್ಣಾಯಕ ಹಂತದಲ್ಲಿರುವರೋಗಿಗಳೊಂದಿಗೆ ಸಂಬಂಧಿಕರಿಗೆ ವಾರ್ಡ್‌ಗಳಲ್ಲಿರಲು ಅವಕಾಶವಿದೆ.

click me!