
ವಾಷಿಂಗ್ಟನ್(ಮೇ.14): ಶ್ವಾನ ಮನುಷ್ಯನ ಬೆಸ್ಟ್ ಫ್ರೆಂಡ್ ಅಂತಾರೆ. ಅಂತಹ ಬೆಸ್ಟ್ ಫ್ರೆಂಡ್ ಮನುಷ್ಯನಿಂದ ವಿಶೇಷವಾಗಿ ಏನಾದರೂ ಪಡೆಯೋದಕ್ಕೂ ಅರ್ಹವಾಗಿದೆ. ಅಮೆರಿಕದ ವ್ಯಕ್ತಿಯೊಬ್ಬನಿಗೆ ತನ್ನ ಶ್ವಾನ ಎಷ್ಟು ಸ್ಪೆಷಲ್ ಗೊತ್ತಾ..?
ತನ್ನ ಪ್ರೀತಿಯ ನಾಯಿಗೆ ಭವ್ಯವಾದ ಮನೆಯನ್ನು ಕಟ್ಟಿಸ್ಕೊಡೋದಕ್ಕೆ ಬರೋಬ್ಬರಿ 3,67,220 ರೂಪಾಯಿ ವ್ಯಯಿಸಿದ್ದಾನೆ ಈತ. ಈ ಚಂದದ ನಾಯಿಯ ಮನೆಯ ವಿಡಿಯೋ ಮೊದಲ ಬಾರಿ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಮಾಲೀಕನ ಜೊತೆ ನಾಯಿಯನ್ನು ಅರೆಸ್ಟ್ ಮಾಡಿದ ಪೊಲೀಸ್; ಕಾರಣ ಕೊರೋನಾ ರೂಲ್ಸ್!
ದಕ್ಷಿಣ ಕಾಲಿಫೋರ್ನಿಯಾದ ಜೊನಾಥನ್ ಲೋವರ್ ಎಂಬವರು ವಿಡಿಯೋ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಲ್ಯಾವಿಶ್ ಆಗಿರೋ ನಾಯಿ ಗೂಡು, ಅದಕ್ಕೆ ಚಿಕ್ಕ ಎಂಟ್ರೆನ್ಸ್ ಎಲ್ಲವೂ ಇತ್ತು. ಬೂದು ಬಣ್ಣದ ಕಲ್ಲಿನಿಂದಾಗಿ ನಿಜವಾದ ಮನೆಯಂತೆ ಕಾಣುವಂತಿತ್ತು.
ಪ್ರವೇಶದ್ವಾರದಲ್ಲಿ "ಟೆಡ್ಡಿ ಹೌಸ್" ಎನ್ನುವ ಬೋರ್ಡ್ ಇದೆ. ಜೊತೆಗೆ ಎರಡೂ ಬದಿಯಲ್ಲಿ ಲ್ಯಾಂಟನಾಗಳಿವೆ. ವೀಡಿಯೊ ನಂತರ ಮನೆಯ ಒಳಾಂಗಣವನ್ನು ತೋರಿಸುತ್ತದೆ. ಇದಕ್ಕೆ ಜನ ಪಕ್ಕದ ಬಾಗಿಲಿನ ಮೂಲಕ ಪ್ರವೇಶಿಸಬಹುದು. ಫ್ಲಾಟ್‌ಸ್ಕ್ರೀನ್ ಟಿವಿ, ಗೋಡೆಯ ಮೇಲೆ ಟೆಡ್ಡಿ ಫೋಟೋ ಇದೆ. ಮನೆಯಲ್ಲಿ ಪಾಲಿಶ್ ಮಾಡಿದ ಮರದ ನೆಲಹಾಸು ಇದೆ. ಇದರ ಮೇಲೆ ಸೊಗಸಾದ ಮ್ಯಾಟ್ ಹಾಕಲಾಗಿದೆ. ಗೋಲ್ಡನ್ ರಿಟ್ರೈವರ್ ಅನ್ನು ನೋಡಲು ಕಿಟಕಿ ಇದೆ.
ಊಟಕ್ಕೂ ಮೊದಲ ಪ್ರಾರ್ಥನೆ..! ಈ ನಾಯಿಮರಿಗಳನ್ನು ನೋಡಿ
ಮಾರ್ಚ್ 15ರಂದು ಕ್ಲಿಪ್ ಅನ್ನು 122,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಮನೆ ಕಟ್ಟೋ ಮೊದಲು ಮತ್ತು ನಂತರ ವಿಡಿಯೋ ಮಾರ್ಚ್ 19 ರಂದು ಪೋಸ್ಟ್ ಆಗಿದ್ದು 29 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ