ಸುಪ್ರೀಂ ತೀರ್ಪು ಇನ್ನು ಸರಳ ಭಾಷೆಯಲ್ಲೂ ಲಭ್ಯ : ಸಿಜೆಐ

Kannadaprabha News   | Asianet News
Published : May 14, 2021, 09:22 AM IST
ಸುಪ್ರೀಂ ತೀರ್ಪು ಇನ್ನು ಸರಳ ಭಾಷೆಯಲ್ಲೂ ಲಭ್ಯ : ಸಿಜೆಐ

ಸಾರಾಂಶ

ಸುಪ್ರೀಂಕೋರ್ಟ್‌ ಕಲಾಪಗಳನ್ನು ಪತ್ರಕರ್ತರು ವರ್ಚುವಲ್‌ ಆಗಿ ವೀಕ್ಷಿಸಲು ಅವಕಾಶ ಆ್ಯಪ್‌ಗೆ ಚಾಲನೆ ನೀಡಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ  ಜನಸಾಮಾನ್ಯರಿಗೆ ಸಾಮಾನ್ಯ ಭಾಷೆಯಲ್ಲಿ ವಿವರಿಸುವ ಕುರಿತು ಇಂಡಿಕೇಟಿವ್‌ ನೋಟ್ಸ್‌ ಎಂಬ ಹೊಸ ವ್ಯವಸ್ಥೆ

ನವದೆಹಲಿ (ಮೇ.14): ಸುಪ್ರೀಂಕೋರ್ಟ್‌ನ ಕಲಾಪ ನೇರ ಪ್ರಸಾರ ಮಾಡುವ ಪ್ರಸ್ತಾಪ ಜಾರಿ ಕುರಿತು ತಾವು ಗಂಭೀರವಾಗಿ ಪರಿಶೀಲಿಸುತ್ತಿರುವುದಾಗಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ತಿಳಿಸಿದ್ದಾರೆ. 

ಸುಪ್ರೀಂಕೋರ್ಟ್‌ ಕಲಾಪಗಳನ್ನು ಪತ್ರಕರ್ತರು ವರ್ಚುವಲ್‌ ಆಗಿ ವೀಕ್ಷಿಸಲು ಅವಕಾಶ ನೀಡುವ ಆ್ಯಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಆದರೆ ಇಂಥದ್ದೊಂದು ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ನ್ಯಾಯಾಲಯದ ಇತರೆ ನ್ಯಾಯಾಧೀಶರ ಅಭಿಪ್ರಾಯಗಳನ್ನು ತಾವು ಸಂಗ್ರಹಿಸುವುದಾಗಿ ಅವರು ಹೇಳಿದರು.

ಸುಪ್ರೀಂಕೋರ್ಟ್ ನೂತನ ಸಿಜೆಐ ಎನ್​. ವಿ. ರಮಣ ಪ್ರಮಾಣವಚನ ಸ್ವೀಕಾರ!

ಇದೇ ವೇಳೆ ಕೋರ್ಟ್‌ನ ತೀರ್ಪುಗಳನ್ನು ಪತ್ರಕರ್ತರು ಮತ್ತು ಜನಸಾಮಾನ್ಯರಿಗೆ ಸಾಮಾನ್ಯ ಭಾಷೆಯಲ್ಲಿ ವಿವರಿಸುವ ಕುರಿತು ಇಂಡಿಕೇಟಿವ್‌ ನೋಟ್ಸ್‌ ಎಂಬ ಹೊಸ ವ್ಯವಸ್ಥೆಗೂ ಗುರುವಾರ ಚಾಲನೆ ನೀಡಲಾಗಿದೆ. ಸುಪ್ರೀಂಕೋರ್ಟ್‌ ವೆಬ್‌ಸೈಟ್‌ ಮತ್ತು ಆ್ಯಪ್‌ನಲ್ಲಿ ಲಭ್ಯವಿರುವ ಈ ಸೌಲಭ್ಯ ಬಳಸಿಕೊಂಡು, ಪತ್ರಕರ್ತರು ಮತ್ತು ಜನಸಾಮಾನ್ಯರು ಕೋರ್ಟ್‌ನ ತೀರ್ಪಿನ ಕುರಿತು ಹೆಚ್ಚಿನ ಅರಿವು ಪಡೆಯಬಹುದು ಎಂದು ಹೇಳಿದರು.

ಮಾಧ್ಯಮದ ಬೆಂಬಲಕ್ಕೆ ನಿಂತ ಸುಪ್ರೀಂ.. ಮೀಡಿಯಾ ತಡೆ ಸಾಧ್ಯವಿಲ್ಲ!

ಇದೇ ವೇಳೆ ನ್ಯಾಯಾಧೀಶರಾಗುವ ಮೊದಲು ತಾವು ಕೂಡಾ ಪತ್ರಕರ್ತರಾಗಿದ್ದನ್ನು ಮತ್ತು ಆ ವೇಳೆ ತಾವು ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುತ್ತಿದ್ದ ಬಗೆಯನ್ನು ಅವರು ಸ್ಮರಿಸಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ