ಐಸಿಸ್ ಪರ ಮೃದು ಧೋರಣೆ ಹೊಂದಿರುವವರ ವಿರುದ್ಧ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿದ 60ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶೋಧ ಕಾರ್ಯ ನಡೆಸಿದೆ. ಕೊಯಮತ್ತೂರು ಕಾರ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಶೋಧ ನಡೆಸಲಾಗಿದೆ.
ನವದೆಹಲಿ (ಫೆ.15): ದೇಶದ ಮೂರು ರಾಜ್ಯದ 60 ಕಡೆಗಳಲ್ಲಿ ಎನ್ಐಎ ಬುಧವಾರ ದಾಳಿ ನಡೆಸಿದೆ. ಕೊಯಮತ್ತೂರು ಕಾರು ಬಾಂಬ್ ಬ್ಲಾಸ್ಟ್ ಸಂಬಂಧ ತಮಿಳುನಾಡಿನಲ್ಲಿ ಹುಡುಕಾಟ ನಡೆಸಲಾಗಿದೆ. ಆರಂಭದಲ್ಲಿ 32 ಪ್ರದೇಶಗಳಲ್ಲಿ ತನಿಖೆ ನಡೆಸಲಾಗಿತ್ತಾದರೂ, ಕೊನೆಗೆ 60ಕ್ಕೆ ಏರಿದೆ. ಕೊಯಮತ್ತೂರಿನ 14 ಕಡೆ, ತಿರುಚಿಯಲ್ಲಿ 1, ನೀಲಗೀರಿಸ್ ನಲ್ಲಿ 2 ಕಡೆ, ತಿರುನಲ್ವೇಲಿಯಲ್ಲಿ 3, ಟುಟಿಕಾರಿನ್‌ನಲ್ಲಿ ಒಂದು ಕಡೆ, ರಾಜಧಾನಿ ಚೆನ್ನೈನ ಮೂರು ಪ್ರದೇಶ, ತಿರುವಣ್ಣಾಮಲೈನ ಎರಡು ಪ್ರದೇಶ, ದಿಂಡಿಗಲ್ ನಲ್ಲಿ 1 ಕಡೆ, ಕೃಷ್ಣಗಿರಿ 1, ಕನ್ಯಾಕುಮಾರಿ 1 ಹಾಗೂ ಕೇರಳದ ಎರ್ನಾಕುಲಂನಲ್ಲಿ ಒಂದು ಕಡೆ ದಾಳಿ ನಡೆಸಲಾಗಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಸಂಬಂದ ತಿರುಪೂರ್ ನಲ್ಲಿ ಎರಡು ಕಡೆ, ಕೊಯಮತ್ತೂರಿನಲ್ಲಿ ಒಂದು ಕಡೆ, ಕೇರಳದ ಎರ್ನಾಕುಲಂ ನಲ್ಲಿ 4 ಕಡೆ ಮತ್ತು ಕರ್ನಾಟಕದ ಮೈಸೂರಿನಲ್ಲಿ ಒಂದು ಕಡೆ ದಾಳಿ ನಡೆಸಲಾಗಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ವೇಳೆ ಹೆಚ್ಚು ಜನ ಇರುವ ಕಡೆ ಬ್ಲಾಸ್ಟ್ ಮಾಡಲು ಸಂಚು ರೂಪಿಸಲಾಗಿತ್ತು ಎಂದು ವರದಿಯಾಗಿದೆ. ಎನ್ಐಎ ದಾಳಿ ವೇಳೆ ನಾಲ್ಕು ಲಕ್ಷ ನಗದು, ಡಿಜಿಟಲ್ ವಸ್ತುಗಳು ವಶಕ್ಕೆ ಪಡೆಯಲಾಗಿದೆ.