Palamu Violence ಮಹಾಶಿವರಾತ್ರಿ ತಯಾರಿ ವೇಳೆ ಕೋಮುಗಲಭೆ, ಮನೆಗೆ ಬೆಂಕಿ, ಶಾಲೆಯಲ್ಲಿ ಸಿಲುಕಿದ 25 ಮಕ್ಕಳು!

Published : Feb 15, 2023, 04:07 PM ISTUpdated : Feb 15, 2023, 04:15 PM IST
Palamu Violence ಮಹಾಶಿವರಾತ್ರಿ ತಯಾರಿ ವೇಳೆ ಕೋಮುಗಲಭೆ, ಮನೆಗೆ ಬೆಂಕಿ, ಶಾಲೆಯಲ್ಲಿ ಸಿಲುಕಿದ 25 ಮಕ್ಕಳು!

ಸಾರಾಂಶ

ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಹೀಗೆ ಜಾರ್ಖಂಡನ್ ಪಲಮು ಜಿಲ್ಲೆಯಲ್ಲಿ ಶಿವರಾತ್ರಿ ಆಚರಣೆಗೆ ತಯಾರಿ ಮಾಡಲಾಗಿದೆ. ಆದರೆ ಆಚರಣೆ ತಯಾರಿ ಮೇಲೆ ಕಲ್ಲು ತೂರಾಟ ನಡೆದಿದೆ. ಎರಡು ಮನೆ, ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಪಟ್ಟಣದಲ್ಲಿ ಕಲ್ಲು ತೂರಾಟ, ಹಲ್ಲೆ ನಡೆಯುತ್ತಲೇ ಇದೆ. ಇದರ ಪರಿಣಾಮ ಈ ಗಲಭೆ ನಡುವೆ 25 ಶಾಲಾ ಮಕ್ಕಳು ಶಾಲೆಯಲ್ಲೇ ಸಿಲುಕಿಕೊಂಡಿದ್ದಾರೆ.

ರಾಂಚಿ(ಫೆ.15): ದೇಶ ವಿದೇಶದಲ್ಲಿ ಮಹಾಶಿವರಾತ್ರಿ ಆಚರಣೆಗೆ ತಯಾರಿಗಳು ನಡೆಯುತ್ತಿದೆ. ಶಿವಕ್ಷೇತ್ರಗಳಿಗೆ ಪಾದಯಾತ್ರೆ, ಶಿವನ ಆರಾಧನೆ, ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.ಹೀಗೆ ಜಾರ್ಖಂಡ್ ಪಲಮುನಲ್ಲಿ ಶಿವರಾತ್ರಿ ಆಚರಣೆಗೆ ತಯಾರಿ ನಡೆಯುತ್ತಿತ್ತು. ಪಲಮುವಿನಲ್ಲಿರುವ ಶಿವನ ದೇವಾಲಯದ  ಪಕ್ಕದಲ್ಲೇ ಪೆಂಡಾಲ್ ಹಾಕಲಾಗಿದೆ. ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈ ತಯಾರಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದು ಕೋಮುಗಲಭೆಗೆ ಕಾರಣವಾಗಿದೆ. ಶಿವರಾತ್ರಿ ಆಚರಣೆ ಪಕ್ಕದಲ್ಲಿದ್ದ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಹೊರಗಡೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸತತ ಕಲ್ಲು ತೂರಾಟ ನಡೆಯುತ್ತಲೇ ಇದೆ. ಈ ಘಟನೆ ಪಲಮು ಮಸೀದಿ ಚೌಕ್‌ನಿಂದ 200 ಮೀಟರ್ ದೂರದಲ್ಲಿ ನಡೆದಿದೆ. ಪಲಮುವಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನ ಸ್ಥಳದ ಪಕ್ಕದಲ್ಲೇ ಇರುವ ಶಾಲೆಯಲ್ಲಿ 20 ರಿಂದ 25 ಮಕ್ಕಳು ಸಿಲುಕಿಕೊಂಡಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಪಲಮುವಿನಲ್ಲಿನ ಶಿವ ದೇವಾಲಯ ಆವರಣ ಪಕ್ಕದಲ್ಲಿ ಶಿವರಾತ್ರಿ ಆಚರಣೆಗೆ ತಯಾರಿ ಮಾಡಲಾಗಿದೆ. ಇದಕ್ಕಾಗಿ ಅತೀ ದೊಡ್ಡ ಬ್ಯಾನರ್, ಸ್ವಾಗತ ಕಮಾನು ನಿರ್ಮಿಸಲಾಗಿದೆ. ಶಿವನ ಭಜನೆ, ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅತೀ ದೊಡ್ಡ ಸ್ವಾಗತ ಕಮಾನನ್ನು ಪುಡಿ ಪುಡಿ ಮಾಡಲಾಗಿದೆ. ಇತ್ತ ಪೆಂಡಾಲ್, ಕುರ್ಚಿಗಳು ಪುಡಿಯಾಗಿದೆ. ವೇದಿಕೆಯನ್ನು ನಾಶ ಮಾಡಲಾಗಿದೆ. ಪಕ್ಕದಲ್ಲೇ ಇದ್ದ ಮನೆಗಳಿಗೂ ಕಲ್ಲು ತೂರಾಟ ನಡೆಸಲಾಗಿದೆ.

Chikkamagalauru: ದತ್ತಜಯಂತಿ ವೇಳೆ ಕೋಮು ಗಲಭೆ ಸೃಷ್ಟಿಸಲು ನಡೆದಿತ್ತು ಮಹಾಸಂಚು

ಇದು ಶಿವರಾತ್ರಿ ಆಯೋಜಕರ ಪಿತ್ತ ನೆತ್ತಿಗೇರಿಸಿದೆ. ಇದರಿಂದ ಕಲ್ಲು, ಇಟ್ಟಿಗೆಗಳಿಂದ ಎರಡು ಕೋಮುಗಳ ನಡುವೆ ಕಲ್ಲು ತೂರಾಟ ನಡೆಸಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಶಿವರಾತ್ರಿ ಆಯೋಜನೆ ಪಕ್ಕದಲ್ಲಿ ನಿಲ್ಲಿಸಿದ್ದ  ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ ನಡೆಯುತ್ತಲೇ ಇದೆ. ಇತ್ತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. 

ಪಲಮುವಿನನ ಕೆಲ ಭಾಗದಲ್ಲಿ ಈಗಲೂ ಕಲ್ಲು ತೂರಾಟ ನಡೆಯುತ್ತಿದೆ. ಇದರಿಂದ ಶಾಲೆಯಲ್ಲಿ ಸಿಲುಕಿಕೊಂಡಿರುವ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯವಾಗಿಲ್ಲ. ಶಾಲಾ ಆವರಣವನ್ನು ಪೊಲೀಸರು ಸುತ್ತುವರಿದಿದ್ದಾರೆ. ಶೀಘ್ರದಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ರಾಜ್ ಕುಮಾರ್ ಲಕ್ರಾ ಹೇಳಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸಂಪೂರ್ಣ ಪಲಮು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. 

ಕೋಮು ವೈಷಮ್ಯ ಸೃಷ್ಟಿಸಲು ಮಂಗಳೂರು ಸ್ಫೋಟ: ಡಿಜಿಪಿ ಪ್ರವೀಣ್‌ ಸೂದ್‌

ಪಲಮುವಿನಲ್ಲಿ ಬಿಗುವಿನ ವಾತಾವರ ನಿರ್ಮಾಣವಾಗಿದೆ. ಕಲ್ಲು ತೂರಾಟ, ಸ್ವಾಗತ ಕಮಾನು ನಾಶ ಮಾಡಿದ ಹಾಗೂ ಮನೆಗಳಿಗೆ ಬೆಂಕಿ ಹಚ್ಚಿದ ಕೆಲ ಕಿಡಿಗೇಡಿಗಳನ್ನು ಪತ್ತೆ ಹಚ್ಚಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ಇದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡು ಗಲಭೆ ಸೃಷ್ಟಿಸಲಾಗಿದೆ. ಹೀಗಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯಲಿದೆ ಎಂದು ರಾಜ್ ಕುಮಾರ್ ಲಕ್ರಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!