
ಪುದುಚೇರಿ(ಮೇ.09): ಕೊರೋನಾ ವೈರಸ್ ದೇಶದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೀಗ ಪುದುಚೇರಿ ಮುಖ್ಯಮಂತ್ರಿಯಾದ ಎರಡೇ ದಿನದಲ್ಲಿ ಎನ್ ರಂಗಸ್ವಾಮಿಗೆ ಕೊರೋನಾ ದೃಢಪಟ್ಟಿದೆ. ತಕ್ಷಣವೇ ರಂಗಸ್ವಾಮಿಯವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ: ಶಾಸಕ ಮತ್ತಿಮುಡಗೆ 2ನೇ ಬಾರಿ ಕೊರೋನಾ ದೃಢ
ಎರಡು ದಿನದ ಹಿಂದೆ ರಂಗಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿದ್ದ ರಂಗಸ್ವಾಮಿ ವರದಿ ನೆಗೆಟೀವ್ ಆಗಿತ್ತು. ಆದರೆ ಮುಖ್ಯಮಂತ್ರಿ ಆದ ಎರಡೇ ದಿನಕ್ಕೆ ಇದೀಗ ಕೊರೋನಾ ವೈರಸ್ ದೃಢಪಟ್ಟಿದೆ.
71 ವರ್ಷದ ಎನ್ ರಂಗಸ್ವಾಮಿ ಮೇ.07ರಂದು ಪುದುಚೇರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಪಕ್ಷದ ರಂಗಸ್ವಾಮಿಗೆ ರಾಜ್ಯಪಾಲ ತಮಿಳಿಸಾಯಿ ಸೌಂದರರಾಜನ್ ಪ್ರತಿಜ್ಞಾವಿಧಿ ಬೋಧಿಸಿದ್ದರು.
ಕೊರೋನಾ ರೋಗಲಕ್ಷಣ ಕಾಣಿಸಿಕೊಂಡ ಕಾರಣ ರಂಗಸ್ವಾಮಿ ಮತ್ತೆ ಕೊರೋನಾ ಪರೀಕ್ಷೆ ಮಾಡಿಸಿದ್ದಾರೆ. ಇದೀಗ ಕೊರೋನಾ ದೃಢಪಟ್ಟಿರುವುದರಿಂದ ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ರಂಗಸ್ವಾಮಿ ಕೊರೋನಾ ರೋಗ ಲಕ್ಷಣ ಹೊರತು ಪಡಿಸಿದರೆ ಆರೋಗ್ಯವಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ