ಮಾಲೀಕನ ಜೊತೆ ನಾಯಿಯನ್ನು ಅರೆಸ್ಟ್ ಮಾಡಿದ ಪೊಲೀಸ್; ಕಾರಣ ಕೊರೋನಾ ರೂಲ್ಸ್!

By Suvarna NewsFirst Published May 9, 2021, 9:52 PM IST
Highlights
  • ವಾಕಿಂಗ್ ಬಂದ ಮಾಲೀಕ ಹಾಗೂ ನಾಯಿ ಅರೆಸ್ಟ್
  • ಕಾರಣ ಕೇಳಿದರೆ ಕೊರೋನಾ ನಿಯಮ ಬ್ರೇಕ್
  • ಸರ್ಕಾರದ ಆದೇಶದ ಪ್ರತಿಯೊಂದು ವಾಕ್ಯ, ಪದ ಪಾಲಿಸಿದ ಪೊಲೀಸ್!

ಇಂದೋರ್(ಮೇ.09):  ಕೊರೋನಾ ವೈರಸ್ ಹರಡದಂತೆ ತಡೆಯಲು ಆಯಾ ರಾಜ್ಯಗಳು ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದ್ದಾರೆ. ನಿಯಮ ಪಾಲನೆ ಮಾಡಲು ಪೊಲೀಸರು ಅಷ್ಟೇ ಶ್ರಮವಹಿಸುತ್ತಿದ್ದಾರೆ. ಇಂದೋರ್ ಪೊಲೀಸರು ಸರ್ಕಾರ ಪ್ರಕಟಿಸಿದ ಆದೇಶದ ಒಂದು ಪದ ಬಿಡದೆ ಪಾಲಿಸಿದ್ದಾರೆ. ಪರಿಣಾಮ ಮಾಲೀಕನ ಜೊತೆ ವಾಕಿಂಗ್ ಬಂದ ನಾಯಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಊಟಕ್ಕೂ ಮೊದಲ ಪ್ರಾರ್ಥನೆ..! ಈ ನಾಯಿಮರಿಗಳನ್ನು ನೋಡಿ.

ಇಂದೋರ್‌ನ ಪಾಲಾಸಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಂದೋರ್‌ನ ಉದ್ಯಮಿ ತನ್ನ ನಾಯಿ ಜೊತೆ ವಾಕಿಂಗ್ ಬಂದಿದ್ದಾರೆ. ಆದರೆ  ಅದು ಕರ್ಫ್ಯೂ ಸಮಯವಾಗಿತ್ತು. ಕರ್ಫ್ಯೂ ವೇಳೆ ಮನೆಯಿಂದ ಹೊರಬಂದವರನ್ನು ಬಂಧಿಸುವ ಆದೇಶವಿತ್ತು. ಹೀಗಾಗಿ ಪೊಲೀಸರು ಹಿಂದೂ ಮುಂದೂ ನೋಡದೆ ಉದ್ಯಮಿ ಹಾಗೂ ಉದ್ಯಮಿ ಜೊತೆ ಬಂದ್ದಿದ್ದ ನಾಯಿಯನ್ನು ಬಂಧಿಸಿದ್ದಾರೆ.

ಕಾರವಾರ: ನಾಯಿ ಮರಿಗಾಗಿ ಕಾಯುತ್ತಿರುವ ಪೊಲೀಸರು..!

ಪೊಲೀಸರ ಈ ನಡೆಗೆ ವಿರೋಧ ವ್ಯಕ್ತವಾಗಿದೆ. ಪ್ರಾಣಿ ಹಕ್ಕು ಹೋರಾಟಗಾರರು, ಪ್ರಾಣಿಗಳ ಸಂಘಟನೆ ಸದಸ್ಯರು ನಾಯಿಯನ್ನು ಅರೆಸ್ಟ್ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಕರ್ಫ್ಯೂ ನಿಯಮ ಉಲ್ಲಂಘಿಸಿದ್ದರೆ, ಮಾಲೀಕರ ಬಂಧನ ಅಥವಾ ದಂಡ ಹಾಕಿ. ಆದರೆ ನಾಯಿಯನ್ನು ಬಂಧಿಸಿದ್ದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಲೀಕ ಹಾಗೂ ನಾಯಿಯನ್ನು ಜೈಲಿಗೆ ಹಾಕಲಾಗಿ್ತು ಅನ್ನೋ  ಮಾಧ್ಯಮಗಳ ವರದಿಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಪೊಲೀಸರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ.
 

click me!