ಕೊರೋನಾದಿಂದ ಸ್ಮಶಾನ ಫುಲ್; ಹೆಣದ ಮೇಲಿನ ಬಟ್ಟೆ ಕದ್ದು ವ್ಯಾಪಾರ ಮಾಡುತ್ತಿದ್ದ ಗ್ಯಾಂಗ್ ಅರಸ್ಟ್!

Published : May 09, 2021, 09:22 PM ISTUpdated : May 10, 2021, 09:10 AM IST
ಕೊರೋನಾದಿಂದ ಸ್ಮಶಾನ ಫುಲ್; ಹೆಣದ ಮೇಲಿನ ಬಟ್ಟೆ ಕದ್ದು ವ್ಯಾಪಾರ ಮಾಡುತ್ತಿದ್ದ ಗ್ಯಾಂಗ್ ಅರಸ್ಟ್!

ಸಾರಾಂಶ

ಕೊರೋನಾ ಸೋಂಕಿನಿಂದ ಬಲಿಯಾದ ಹೆಣಗಳ ಮೇಲಿನ ಬಟ್ಟೆ ಕದಿಯೋ ಕಳ್ಳರು ಸ್ಮಶಾನ, ಶವಾಗಾರಕ್ಕೆ ತೆರಳಿ ಬಟ್ಟೆ ಕದಿಯುತ್ತಿದ್ದ ಕಟುಕ ಕಳ್ಳರು ಕದ್ದ ಬಟ್ಟೆಗಳಿಗೆ ಇಸ್ತ್ರಿ ಹಾಕಿ ವ್ಯಾಪಾರ

ಉತ್ತರ ಪ್ರದೇಶ(ಮೇ.09): ಕೊರೋನಾ ವೈರಸ್‌ಗೆ ಪ್ರತಿ ದಿನ ದೇಶದಲ್ಲಿ ಸಾವಿನ ಸಂಖ್ಯೆ 4,000ಕ್ಕೂ ಹೆಚ್ಚಾಗುತ್ತಿದೆ. ಹೀಗಾಗಿ ಶವಾಗಾರ, ಸ್ಮಶಾನಗಳು ಫುಲ್ ಆಗಿದೆ. ಶವಗಳನ್ನು ಸುಡುಲ ಸಾಧ್ಯವಾಗದೆ ಆ್ಯಂಬುಲೆನ್ಸ್‌ನಲ್ಲೇ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಕೆಲ ಕಟುಕ ಕಿರಾತಕರು ಇನ್ನು ಶವಗಳನ್ನು ವ್ಯಾಪಾರ ಮಾಡೋದೊಂದೇ ಬಾಕಿ. ಅಲ್ಲೀಯವರಿಗೆ ಪರಿಸ್ಥಿತಿ ಬಂದು ನಿಂತಿದೆ.

ಸಾವಿನ ವ್ಯಾಪಾರ: ಬಯಲಾಯ್ತು ಧನದಾಹಿ ನೀಚರ ಕರಾಳ ಮುಖ!

ಉತ್ತರ ಪ್ರದೇಶದ ಭಾಗ್‌ಪಟ್‌ನಲ್ಲಿ ಹೆಣದ ಬಟ್ಟೆ ಕದ್ದು ವ್ಯಾಪಾರ ಮಾಡೋ ಕಳ್ಳರ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ.  7 ಮಂದಿಯ ಈ ಗ್ಯಾಂಗ್ ಶವಗಾರ, ಸ್ಮಶಾನಕ್ಕೆ ತೆರಳಿ ಹೆಣದ ಮೇಲಿದ್ದ ಬಟ್ಟೆಗಳನ್ನು ಕದ್ದೊಯ್ಯುತ್ತಿತ್ತು. ಹೆಣದ ಉಡುಪು, ಸ್ಯಾರಿ, ಬಟ್ಟೆ, ಹೊದಿಸಿದ್ದ ಬಟ್ಟೆಯನ್ನೂ ಬಿಡದೆ ಕದ್ದೊಯ್ಯುತ್ತಿದ್ದರು. ಹೀಗೆ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

7 ಮಂದಿ ಚಾಲಾಕಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.  ಈ ವೇಳೆ ಇವರ ಕಳ್ಳತನ ಹಿಸ್ಟರಿ ಬಯಲಾಗಿದೆ. ಈ ರೀತಿಯ ಕದ್ದ ಬಟ್ಟೆಗಳನ್ನು ಇಸ್ತ್ರಿ ಹಾಕಿ ಮತ್ತೆ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 520 ಬೆಡ್‌ಶೀಟ್, 127 ಕುರ್ತಾ, 52 ಬಿಳಿ ಸ್ಯಾರಿ, ಬಿಳಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಕ್ಷ ಲಕ್ಷ ಕೇಳಿದ ಆಸ್ಪತ್ರೆ: ಪತಿ ಶವವನ್ನೇ ಬಿಟ್ಟುಹೋದ ಪತ್ನಿ..!

ವಿಶೇಷ ಅಂದರೆ ಅರೆಸ್ಟ್  ಆಗಿರುವ ಎಲ್ಲಾ 7 ಮಂದಿ ಒಂದೇ ಕುಟುಂಬದವರು. ಕಳೆದ 10 ವರ್ಷದಿಂದ ಹೊರಗೆ ಹಾಕಿದ್ದ ಬಟ್ಟೆ , ಪ್ರಮುಖ ವಸ್ತುಗಳನ್ನು ಕದಿಯುತ್ತಿದ್ದರು. ಆದರೆ ಸದ್ಯ ಲಾಕ್‌ಡೌನ್, ಕರ್ಫ್ಯೂ ಕಾರಣ ಹೊರಗೆ ಬರುವಂತಿಲ್ಲ. ಹೀಗಾಗಿ ಶವಾಗಾರಕ್ಕೆ ತೆರಳಿ ಶವಗಳ ಮೇಲಿನ ಬಟ್ಟೆ ಕದಿಯುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್