ಹೊಸ ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಹೊಸ ನಿಯಮ!

By Suvarna NewsFirst Published Jan 16, 2020, 3:37 PM IST
Highlights

ಪೆಟ್ರೋಲ್‌ ಪಂಪ್‌ಗಳು ಸುತ್ತಮುತ್ತಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ| ಹೊಸ ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಹೊಸ ನಿಯಮ!

ನವದೆಹಲಿ[ಜ.16]: ಪೆಟ್ರೋಲ್‌ ಪಂಪ್‌ಗಳು ಸುತ್ತಮುತ್ತಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ, ಹೊಸ ಪೆಟ್ರೋಲ್‌ ಪಂಪ್‌ಗಳು ಶಾಲೆ, ಆಸ್ಪತ್ರೆ ಮತ್ತು ವಸತಿ ಪ್ರದೇಶಗಳಿಂದ ಕನಿಷ್ಠ 50 ಮೀಟರ್‌ ದೂರದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ, ಹೊಸ ಪೆಟ್ರೋಲ್‌ ಪಂಪ್‌ ಸ್ಥಾಪನೆಗೆ ಈ ನಿಯಮ ಅನ್ವಯ ಆಗಲಿದೆ. ಅಲ್ಲದೇ ಪ್ರತಿ ತಿಂಗಳು 3,00,000 ಲಕ್ಷ ಲೀಟರ್‌ ತೈಲ ಮಾರಾಟ ಸಾಮರ್ಥ್ಯ ಇರುವ ಪೆಟ್ರೋಲ್‌ ಪಂಪ್‌ಗಳು ಪೆಟ್ರೋಲಿಯಂ ಉತ್ಪನ್ನಗಳ ಆವಿ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆಯೂ ನಿರ್ದೇಶನ ನೀಡಲಾಗಿದೆ.

ಯುದ್ಧ ಪರಿಣಾಮ ಶುರು: ಕಚ್ಚಾತೈಲ ಬೆಲೆ ಗಗನಕ್ಕೆ!

ಐಐಟಿ ಕಾನ್ಪುರ, ನ್ಯಾಷನಲ್‌ ಪರಿಸ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ, ಇಂಧನ ಮತ್ತು ಸಂಪನ್ಮೂಲ ಸಂಸ್ಥೆ ಹಾಗೂ ಪೆಟ್ರೋಲಿಯಂ ಸಚಿವಾಲಯ ಹೊಸ ಪೆಟ್ರೋಲ್‌ ಪಂಪ್‌ಗಳ ಸ್ಥಾಪನೆಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಿವೆ.

ಪೆಟ್ರೋಲ್‌ ಬಂಕ್‌ಗಳನ್ನು ಶಾಲೆ, ಆಸ್ಪತ್ರೆಗಳಿಂದ 50 ಮೀಟರ್‌ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡುವಂತೆ ಇಲ್ಲ. ಅಲ್ಲದೇ ಪೆಟ್ರೋಲ್‌ ಬಂಕ್‌ಗಳ ಮೇಲೆ ಹೈಟೆನ್ಶನ್‌ ವೈರ್‌ಗಳು ಇರಬಾರದು. ಪೆಟ್ರೋಲ್‌ ಅಥವಾ ಡಿಸೆಲ್‌ ಸೋರಿಕೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

click me!