ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರ ಮಾಹಿತಿ ಸಂಗ್ರಹ!

By Suvarna NewsFirst Published Jan 16, 2020, 10:34 AM IST
Highlights

ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರು, ಆಹಾರ, ನೀರಿನ ಮೂಲದ ಮಾಹಿತಿ| ಮನೆಗಣತಿಯ ವೇಳೆ ಮನೆಯ ಮುಖ್ಯಸ್ಥ ಪುರುಷನೋ, ಮಹಿಳೆಯೋ ಅಥವಾ ಮಂಗಳಮುಖಿ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಸಂಗ್ರಹ

ನವದೆಹಲಿ[ಜ.16]:  ಏ.1ರಿಂದ ಆರಂಭವಾಗಲಿರುವ ಮನೆ ಗಣತಿಯ ವೇಳೆ, ಸರ್ಕಾರ ಮೊದಲ ಬಾರಿಗೆ ತೃತೀಯಲಿಂಗಿ (ಮಂಗಳಮುಖಿ) ಯೊಬ್ಬ ಮುಖ್ಯಸ್ಥನಾಗಿರುವ ಮನೆ ಮತ್ತು ಮನೆಯ ಸದಸ್ಯರ ಬಗ್ಗೆ ಮಾಹಿತಿ ಕಲೆಹಾಕಲಿದೆ.

ಈ ಮುನ್ನ ಮನೆಯ ಮುಖ್ಯಸ್ಥನ ಲಿಂಗ- ಪುರುಷ ಅಥವಾ ಮಹಿಳೆ ಎಂಬ ಎರಡೇ ಆಯ್ಕೆಯನ್ನು ನೀಡಲಾಗಿತ್ತು. ಈ ಬಾರಿ ಮಂಗಳಮುಖಿ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ.

ಆಕೆ ಬಿಕಿನಿ ಧರಿಸಿದರೆ ಜಗತ್ತೇ ಖುಷಿಯಾಗುವುದೇಕೆ?

ಮನೆಗಣತಿಯ ವೇಳೆ ಮನೆಯ ಮುಖ್ಯಸ್ಥ ಪುರುಷನೋ, ಮಹಿಳೆಯೋ ಅಥವಾ ಮಂಗಳಮುಖಿ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ತೃತೀಯಲಿಂಗಿಗಳು ಮುಖ್ಯಸ್ಥರಾಗಿರುವ ಮನೆಯ ಮಾಹಿತಿಯನ್ನು ಕಲೆ ಹಾಕುತ್ತಿರುವುದು ಇದೆ ಮೊದಲು. ಗಣತಿಯ ವೇಳೆ ಮಂಗಳಮುಖಿಗಳು ಮನೆಯಲ್ಲಿ ಬಳಸುವ ಆಹಾರ ಧಾನ್ಯ ಯಾವುದು? ಕುಡಿಯುವ ನೀರಿನ ಮೂಲ ಯಾವುದು? ಬಾಟಲಿ ನೀರನ್ನು ಸೇವಿಸುತ್ತಾರಾ? ಇಂಟರ್‌ನೆಟ್‌ ಮತ್ತು ಟೀವಿಯನ್ನು ವೀಕ್ಷಿಸುತ್ತಾರಾ? ಮನೆಯ ಒಡೆತನ ಯಾರಿಗೆ ಸೇರಿದ್ದು? ಹೀಗೆ ಪ್ರತಿ ಮನೆಯಲ್ಲೂ 31 ಪ್ರಶ್ನೆಗಳನ್ನು ಕೇಳಲಾಗುತ್ತದೆ.

click me!