* ಬಯಲಾಯ್ತು ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ
* ಪಂಜಾಬ್ ಚುನಾವಣಾ ಫಲಿತಾಂಶದಲ್ಲಿ ಏನಾಗಲಿದೆ?
* ಕಾಂಗ್ರೆಸ್‌ಗೆ ಆಪ್ ಸೆಡ್ಡು ಹೊಡೆಯುತ್ತೆ ಎಂದ ಸಮೀಕ್ಷೆ
ಚಂಡೀಗಢ(ಫೆ.08): ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯ (Punjab Assembly Elections) ನಡುವೆಯೇ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ಯತ್ನದಲ್ಲಿವೆ. ಏತನ್ಮಧ್ಯೆ, ಇಂಡಿಯಾ ನ್ಯೂಸ್- ಜನ್ ಕಿ ಬಾತ್ PMOO (India News-Jan ki Baat) ಮಾದರಿಯನ್ನು ಆಧರಿಸಿ ಅಭಿಪ್ರಾಯ ಸಂಗ್ರಹ ಸಮೀಕ್ಷೆಯನ್ನು ನಡೆಸಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು (Aam Aadmi Party) ಸತತ ಮೂರನೇ ಬಾರಿಗೆ ಗೆಲುವನ್ನು ಸಾಧಿಸುವ ನಿರೀಕ್ಷೆ ಇದೆ. 60-66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಶೇಕಡಾ 41ರಿಂದ - 42% ಮತ ಹಂಚಿಕೆಯಾಗುವ ಅಂದಾಜು ಇದೆ ಎಂದು ಸಮೀಕ್ಷೆ ತಿಳಿಸಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಚರಣ್‌ಜಿತ್ ಸಿಂಗ್ ಚನ್ನಿ (Channi) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು, ಕಾಂಗ್ರೆಸ್ ಕೇವಲ 33-39 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹೀಗಿದ್ದರೂ 34% - 35% ಮತ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ. ಮಾಲ್ವಾ ಮತ್ತು ಮಜಾದಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಲಾಭವನ್ನು ಗಳಿಸುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಕಾಂಗ್ರೆಸ್ ದೋವಾಬ್‌ನಿಂದ ಲಾಭ ಪಡೆಯುವ ನಿರೀಕ್ಷೆಯಿದೆ. ಈ ಸಮೀಕ್ಷೆಗಾಗಿ ಸುಮಾರು 8 ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಜನವರಿ 31 ರಿಂದ ಫೆಬ್ರವರಿ 5 ರ ನಡುವೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ, 18-25 ವರ್ಷ ವಯಸ್ಸಿನ 10%, 25-35 ವರ್ಷದ 30%, 35-45 ವರ್ಷ ವಯಸ್ಸಿನ 45% ಮತ್ತು 55+ ವರ್ಷ ವಯಸ್ಸಿನ 15% ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.
Punjab Elections 2022: ಪಂಜಾಬ್ ಚುನಾವಣೆ ಬೆನ್ನಲ್ಲೇ ಡೇರಾ ಮುಖ್ಯಸ್ಥ ರಾಮ್ ರಹೀಮ್ ಜೈಲಿನಿಂದ ಹೊರಕ್ಕೆ!
ಪಂಜಾಬ್‌ನಲ್ಲಿ 60 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬಹುದು
ಸಮೀಕ್ಷೆಯ ಪ್ರಕಾರ, ಎಎಪಿ 41-42%, ಕಾಂಗ್ರೆಸ್ 34-35%, SAD 14-17%, ಬಿಜೆಪಿ ಮೈತ್ರಿಕೂಟ 7% ಮತ್ತು ಇತರರು 1-2% ಗಳಿಸುವ ನಿರೀಕ್ಷೆಯಿದೆ. ಇದಲ್ಲದೇ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಗರಿಷ್ಠ 117 ಸ್ಥಾನಗಳನ್ನು ಪಡೆಯುತ್ತಿದೆ. ರಾಜ್ಯದಲ್ಲಿ ಎಎಪಿ 60-66, ಕಾಂಗ್ರೆಸ್ 33-39, ಎಸ್‌ಎಡಿ 14-18, ಬಿಜೆಪಿ ಮೈತ್ರಿಕೂಟ 0-4 ಗಳಿಸುವ ನಿರೀಕ್ಷೆಯಿದೆ.
ಮಾಲ್ವಾದಲ್ಲಿ ಆಪ್ ಮುಂಚೂಣಿಯಲ್ಲಿ
ಪ್ರದೇಶವಾರು ನೋಡಿದರೆ, ಮಾಲ್ವಾದಲ್ಲಿ ಒಟ್ಟು 69 ಸ್ಥಾನಗಳಿವೆ. ಇಲ್ಲಿ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿದೆ. ಎಎಪಿ 39, ಕಾಂಗ್ರೆಸ್ 20, ಎಸ್‌ಎಡಿ 9 ಮತ್ತು ಬಿಜೆಪಿ ಮೈತ್ರಿಕೂಟ 1 ಸ್ಥಾನ ಪಡೆಯಬಹುದು.
ಮಾಂಜಾದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಒಂದೇ ಒಂದು ಸ್ಥಾನವಿಲ್ಲ
ಅದೇ ರೀತಿ ಮಂಜಾ ಪ್ರದೇಶದಲ್ಲಿ ಒಟ್ಟು 25 ಸೀಟುಗಳಿವೆ. ಇಲ್ಲಿಯೂ ಆಪ್ ಜನರ ಫೇವರಿಟ್ ಆಗಿದೆ. ಮಾಂಜಾದಲ್ಲಿ ಎಎಪಿ 18, ಕಾಂಗ್ರೆಸ್ 6, ಎಸ್‌ಎಡಿ 1 ಸ್ಥಾನ ಪಡೆಯಬಹುದು. ಇಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಒಂದೇ ಒಂದು ಸ್ಥಾನ ಸಿಗುವ ಲಕ್ಷಣ ಕಾಣುತ್ತಿಲ್ಲ.
UP Elections: ಪಂಜಾಬ್‌ನಲ್ಲಿ ರಾಹುಲ್ ಗಾಂಧಿ ಮೇಲೆ ದಾಳಿ, ನೋಡುತ್ತಲೇ ನಿಂತ ಸಿಎಂ ಚನ್ನಿ!
ದೋಬಾದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ
ಪಂಜಾಬ್‌ನ ದೋಬಾ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಇಲ್ಲಿ ಚುನಾವಣೆ ನಡೆಯಲು ಒಟ್ಟು 23 ಸ್ಥಾನಗಳಿವೆ. ಕಾಂಗ್ರೆಸ್ 10 ಸ್ಥಾನಗಳನ್ನು, ಎಎಪಿ ಮತ್ತು ಎಸ್‌ಎಡಿ ತಲಾ 6 ಸ್ಥಾನಗಳನ್ನು ಪಡೆಯಬಹುದು. ಆದರೆ ಬಿಜೆಪಿ ಮೈತ್ರಿಕೂಟಕ್ಕೆ ಒಂದು ಸ್ಥಾನ ಸಿಗಬಹುದು.
ಜಾಟ್, ಸಿಖ್ ಆಯ್ಕೆಯೂ ಆಪ್
ಜಾತಿವಾರು ನೋಡಿದರೆ, ಜಾಟ್ ಸಿಖ್ ಆಪ್‌ನ್ನು ಹೆಚ್ಚು ಇಷ್ಟಪಡುತ್ತಾರೆ. ರಾಜ್ಯದಲ್ಲಿ, ಜಾಟ್ ಸಿಖ್‌ಗಳು ಎಎಪಿಗೆ 60%, ಕಾಂಗ್ರೆಸ್‌ಗೆ 16%, ಎಸ್‌ಎಡಿಗೆ 20% ಮತ್ತು ಬಿಜೆಪಿ ಮೈತ್ರಿಗೆ 4% ಆದ್ಯತೆ ನೀಡುತ್ತಾರೆ.
ಆಪ್ OBC ಸಮಾಜದ ಮೊದಲ ಆಯ್ಕೆ
ಒಬಿಸಿ ಸಮಾಜವೂ ಪಂಜಾಬ್‌ನಲ್ಲಿ ಎಎಪಿಯನ್ನು ಇಷ್ಟಪಡುತ್ತಿದೆ. ರಾಜ್ಯದಲ್ಲಿ ಎಎಪಿಗೆ 50%, ಕಾಂಗ್ರೆಸ್‌ಗೆ 24%, ಎಸ್‌ಎಡಿಗೆ 12%, ಬಿಜೆಪಿಗೆ 10% ಮತ್ತು ಒಬಿಸಿಗೆ 4%.
ಎಸ್‌ಸಿ ಸಮಾಜಕ್ಕೂ ಬೇಕು ಆಪ್
ಇತ್ತೀಚೆಗಷ್ಟೇ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಚನ್ನಿ ಮೂಲಕ ದಲಿತರ ಮತಗಳಿಗೆ ಸೆಡ್ಡು ಹೊಡೆಯುವುದು ಪಕ್ಷದ ತಂತ್ರವಾಗಿದೆ ಆದರೆ ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಇದುವರೆಗೆ ಕಾಂಗ್ರೆಸ್ ಈ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿಲ್ಲ. ಪಂಜಾಬ್‌ನ ಎಸ್‌ಸಿ ವರ್ಗವು ಎಎಪಿಯನ್ನು ಹೆಚ್ಚು ಇಷ್ಟಪಡುತ್ತಿದೆ. ರಾಜ್ಯದಲ್ಲಿ ಎಎಪಿ 43%, ಕಾಂಗ್ರೆಸ್ 39%, ಎಸ್‌ಎಡಿ 10%, ಬಿಜೆಪಿ ಮೈತ್ರಿ 5% ಮತ್ತು ಇತರರು 3% ಎಸ್‌ಸಿಗೆ ಆದ್ಯತೆ ನೀಡಿದ್ದಾರೆ.
Punjab Elections: ನಾನು ಸೂರ್ಯ ಕತ್ತಲನ್ನು ಸೀಳಿ ಉದಯಿಸುತ್ತೇನೆ, ಚನ್ನಿಗೆ ಸಿಧು ಟಾಂಗ್!
ಮಹಿಳೆಯರ ಆಯ್ಕೆಯೂ ಆಪ್
ಇನ್ನು ಮಹಿಳೆಯರ ಮತದ ಬಗ್ಗೆ ಹೇಳುವುದಾದರೆ, ಜನಸಂಖ್ಯೆಯ ಅರ್ಧದಷ್ಟು ಜನರು ಸಹ ಆಮ್ ಆದ್ಮಿ ಪಕ್ಷವನ್ನು ನಂಬುತ್ತಾರೆ. ಎಎಪಿಗೆ 64%, ಕಾಂಗ್ರೆಸ್‌ಗೆ 22%, ಎಸ್‌ಎಡಿಗೆ 7%, ಬಿಜೆಪಿಗೆ 3% ಮತ್ತು ಇತರರಿಗೆ 4%.
ಗುಂಪುಗಾರಿಕೆಯಿಂದ ಕಾಂಗ್ರೆಸ್ ಸೋಲುತ್ತಿದೆ ಎಂದು ಶೇ.70ರಷ್ಟು ಜನರ ಅಭಿಪ್ರಾಯ
ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಅಂದರೆ ಕಾಂಗ್ರೆಸ್ ನ ಆಂತರಿಕ ಗುಂಪುಗಾರಿಕೆಯ ಪರಿಣಾಮ ಮತದಾರರಿಗೆ ಇಷ್ಟವಾಗುತ್ತಿಲ್ಲ. ಆಂತರಿಕ ಗುಂಪುಗಾರಿಕೆಯಿಂದ ಕಾಂಗ್ರೆಸ್ ಸೋಲುತ್ತಿದೆ ಎಂದು ಶೇ.70ರಷ್ಟು ಜನ ನಂಬಿದ್ದು ಇದೇ ಕಾರಣಕ್ಕೆ ಸೋಲನುಭವಿಸಲಿದೆ ಎಂದು ಹೇಳಲಾಗಿದೆ. ಆದರೆ 30% ಜನರು ಈ ವಿಷಯವನ್ನು ನಿರ್ಲಕ್ಷಿಸಿದ್ದಾರೆ.