ದೇಶದಲ್ಲಿ ಎರಡನೇ ಹಂತದ ಲಾಕ್‌ಡೌನ್| ಲಾಕ್‌ಡೌನ್ ಮೇ 3ವವರೆಗೆ ವಿಸ್ತರಿಸಿದ ಪಿಎಂ ಮೋದಿ| ಇಂದು, ಬುಧವಾರ ಲಾಕ್‌ಡೌನ್ ಮಾರ್ಗಸೂಚಿ ಬಿಡುಗಡೆ| ಹೇಗಿರುತ್ತೆ ಲಾಕ್‌ಡೌನ್?
ನವದೆಹಲಿ(ಏ.15): ಈಗಾಗಲೇ ದೇಶದಾದ್ಯಂತ ಎರಡನೇ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಮೇ 3ವರೆಗೆ ವಿಸ್ತರಿಸಲಾಗಿದೆ. ಪಿಎಂ ಮೋದಿ ಈ ಸಂಬಂಧ ಅಧಿಕೃತ ಘೋಷಣೆ ಮಾಡಿದ್ದು, ಇಂದು ಬುಧವಾರ ಲಾಕ್‌ಡೌನ್ ಸಂಬಂಧಿತ ಮಾರ್ಸೂಚಿಯನ್ನು ಆಯಾ ರಾಜ್ಯಗಳು ಬಿಡುಗಡೆ ಮಾಡಲಿರುವುದಾಗಿ ತಿಳಿಸಿದ್ದಾರೆ. ಈ ಮಾರ್ಗಸೂಚಿ ಹೀಗಿರಬಹುದು ಎನ್ನಲಾಗಿದೆ.
- ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ. ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಸಾಧ್ಯತೆ
- ಕೊರೋನಾ ಸೋಂಕು ಇಲ್ಲದ ಜಿಲ್ಲೆಗಳ ಒಳಗೆ ಬಸ್ ಸಂಚಾರ, ವಾಣಿಜ್ಯ- ವ್ಯಾಪಾರ ವಹಿವಾಟು ಆರಂಭ ನಿರೀಕ್ಷೆ
- ಅಂತರಜಿಲ್ಲಾ ಬಸ್, ವಾಹನಗಳ ಸಂಚಾರ ನಿರ್ಬಂಧ ಮುಂದುವರಿಕೆ. ಶಾಲಾ- ಕಾಲೇಜುಗಳ ರಜೆ ವಿಸ್ತರಣೆ ಖಚಿತ
ಮೇ. 3ವರೆಗೆ ದೇಶದಾದ್ಯಂತ ಲಾಕ್‌ಡೌನ್: ಪಿಎಂ ಮೋದಿ ಅಧಿಕೃತ ಘೋಷಣೆ!
- ಸರಕು ಸಾಗಣೆಗೆ ದೇಶಾದ್ಯಂತ ಮುಕ್ತ ಅವಕಾಶ. ಲಾರಿ ದುರಸ್ತಿ ಗ್ಯಾರೇಜ್, ಹೆದ್ದಾರಿ ಡಾಬಾಗಳ ಆರಂಭ ಸಂಭವ
- ಔಷಧ ಪೂರೈಕೆ ವ್ಯತ್ಯಯ ತಪ್ಪಿಸಲು ಸಾಮಾಜಿಕ ಅಂತರದೊಂದಿಗೆ ಔಷಧ ಕಂಪನಿಗಳನ್ನು ತೆರೆಯಲು ಅವಕಾಶ ಸಾಧ್ಯತೆ
- ಸೋಂಕು ನಿಯಂತ್ರಣಕ್ಕೆ ಬಂದಿರುವ ಕಡೆ ಮದ್ಯದಂಗಡಿ ತೆರೆಯುವ ನಿರ್ಧಾರ ರಾಜ್ಯಗಳ ವಿವೇಚನೆಗೆ ಬಿಡುವ ಸಂಭವ
- ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬಿತ್ತನೆ, ಕಟಾವು, ಜಮೀನು ಕೆಲಸ ಮಾಡಲು ರೈತರಿಗೆ ಸಮ್ಮತಿ ಸೂಚಿಸುವ ನಿರೀಕ್ಷೆ
- ಮೀನುಗಾರಿಕೆ, ಮೀನು ಮಾರಾಟ, ಸಾಗಣೆ, ಮೀನುಗಾರಿಕೆಗೆ ಸಂಬಂಧಿಸಿದ ಕ್ಷೇತ್ರಗಳಿಗೆ ವಿನಾಯಿತಿ ದೊರೆವ ಸಂಭವ
- ಸಣ್ಣ ಉದ್ದಿಮೆಗಳು, ಕಾರ್ಖಾನೆಗಳಲ್ಲಿ ಸೀಮಿತ ನೌಕರರೊಂದಿಗೆ ಉತ್ಪಾದನೆ ಪುನಾರಂಭಿಸಲು ಅವಕಾಶ ಲಭಿಸುವ ಸಂಭವ
- ಎಪಿಎಂಸಿ ಮಾರುಕಟ್ಟೆ, ಸಗಟು ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡಲು ಅವಕಾಶ ನಿರೀಕ್ಷೆ