ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸತತ ಐದನೇ ದಿನವೂ ವಾಯುಮಾಲಿನ್ಯ ಅಪಾಯಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಜನರ ಆರೋಗ್ಯ ಹದಗೆಡುವ ಆತಂಕ ಮತ್ತಷ್ಟು ಹೆಚ್ಚಾಗಿದೆ.
ದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸತತ ಐದನೇ ದಿನವೂ ವಾಯುಮಾಲಿನ್ಯ ಅಪಾಯಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಜನರ ಆರೋಗ್ಯ ಹದಗೆಡುವ ಆತಂಕ ಮತ್ತಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾನದಂಡಗಳ ಪ್ರಕಾರ, ದೆಹಲಿಯ ಗಾಳಿ ಈಗ 80ರಿಂದ 100 ಪಟ್ಟು ಮಲಿನವಾಗಿದೆ. ಕೇಂದ್ರ ಸರ್ಕಾರದ ಸುರಕ್ಷತಾ ಮಿತಿಯನ್ನೇ ಆಧರಿಸಿ ಹೇಳುವುದಾದರೆ ದೆಹಲಿಯಲ್ಲಿ ಗಾಳಿ 7ರಿಂದ 8 ಪಟ್ಟು ಮಲಿನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಶುಕ್ರವಾರ ಕೊಂಚ ಗಾಳಿ ಬೀಸಿದ್ದರಿಂದ ದೆಹಲಿಯ (National Capital) ವಿವಿಧ ಭಾಗಗಳಲ್ಲಿ ಕಲುಷಿತ ಗಾಳಿಯ ಪ್ರಮಾಣ ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಮಕ್ಕಳು ಹಾಗೂ ವೃದ್ಧರಲ್ಲಿ ಉಸಿರಾಟ ಮತ್ತು ಕಣ್ಣಿನ ತೊಂದರೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಕಟ್ಟಿಹಾಕಲು ಸುರಂಗದಲ್ಲೇ ಹೊಂಚು ಹಾಕಿದ 40000 ಉಗ್ರರು: ಸುರಂಗಗಳಲ್ಲಿ ಶಸ್ತ್ರಾಸ್ತ್ರ, ಆಹಾರ ಸಂಗ್ರಹ
100 ಪಟ್ಟು ಅಧಿಕ:
ಗಾಳಿಯ ಗುಣಮಟ್ಟವನ್ನು ಪಿಎಂ2.5 ಎಂಬ ಸಾಂದ್ರತೆಯ ಮೂಲಕ ಅಳೆಯಲಾಗುತ್ತದೆ. ಗಾಳಿಯಲ್ಲಿ ವಿಲೀನವಾಗಿರುವ ಸಣ್ಣ ಸಣ್ಣ ಕಣಗಳ ಸೂಚಕ ಇದಾಗಿದೆ. ಇದು ಹೆಚ್ಚಾದಷ್ಟೂ ಶ್ವಾಸಕೋಶದೊಳಕ್ಕೆ ನುಸುಳಿ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮನುಷ್ಯನ ಉತ್ತಮ ಆರೋಗ್ಯಕ್ಕೆ ಗಾಳಿಯಲ್ಲಿ ಪಿಎಂ2.5 ಪ್ರಮಾಣ ಪ್ರತಿ ಕ್ಯುಬಿಕ್ ಮೀಟರ್‌ಗೆ 5 ಮೈಕ್ರೋಗ್ರಾಂ ಇರಬೇಕು. ಆದರೆ, ದೆಹಲಿಯಲ್ಲಿ ಅದಕ್ಕಿಂತ 80ರಿಂದ 100 ಪಟ್ಟು ಅಧಿಕ ಪಿಎಂ2.5 ಇದೆ.
ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್
ಮತ್ತೊಂದೆಡೆ, ಗಾಳಿ ಸುರಕ್ಷಿತವಾಗಿದೆ ಎಂದು ಪರಿಗಣಿಸಲು ಪ್ರತಿ ಕ್ಯುಬಿಕ್ ಮೀಟರ್‌ನಲ್ಲಿ 60 ಮೈಕ್ರೋಗ್ರಾಂನಷ್ಟು ಪಿಎಂ2.5 ಇರಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ದೆಹಲಿಯ ಹಲವು ಪ್ರದೇಶಗಳಲ್ಲಿ ಅದಕ್ಕಿಂತ 7ರಿಂದ 8 ಪಟ್ಟು ಪಿಎಂ2.5 ಕಂಡುಬಂದಿದೆ.