ಮಾರುತಿ ಸುಝುಕಿ, ಹ್ಯುಂಡೈ, ಮಹೀಂದ್ರಾ, ಎಂಜಿ, ಕಿಯಾ, ಆಡಿ, ಬಿಎಂಡಬ್ಲ್ಯು, ಕಂಪನಿ ಗಳು ಹೊಸ ವರ್ಷದಲ್ಲಿ ಕಾರಿನ ದರ ಶೇ.2ರಿಂದ 4ರಷ್ಟು ಏರಿಕೆಗೆ ಚಿಂತಿಸಿವೆ. ಕಚ್ಚಾವಸ್ತು ದರ ಏರಿಕೆ, ವೇತನ ಹೆಚ್ಚಳದ ಕಾರಣವನ್ನು ಅವು ಈಗಾಗಲೇ ನೀಡಿವೆ.
ಬೆಂಗಳೂರು(ಜ.01): 2024ಕ್ಕೆ ತೆರೆಬಿದ್ದು, ಹೊಸ ವರ್ಷ 2025 ಆರಂಭವಾಗಿದೆ. 'ಹೊಸ ವರ್ಷದಲ್ಲಿ ಜಾರಿಗೆ ಬರಲಿವೆ' ಎಂದು ಈಗಾಗಲೇ ಸರ್ಕಾರ ಮತ್ತು ಖಾಸಗಿ ವಲಯದ ಕಂಪನಿಗಳು ಘೋಷಿಸಿರುವ ಹಲವು ನಿರ್ಧಾರಗಳು ಜ.1ರಿಂದ ಮತ್ತು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಈ ಪೈಕಿ ನಿತ್ಯ ಜೀವನದ ಮೇಲೆ ಪರಿಣಾಮ ಬೀರುವ ಒಂದಿಷ್ಟು ಬದಲಾವಣೆಯ ಪಟ್ಟಿ ಇಲ್ಲಿದೆ.
ಹೊಸ ಕಾರುಗಳ ಬೆಲೆ 4% ಏರಿಕೆ
ಮಾರುತಿ ಸುಝುಕಿ, ಹ್ಯುಂಡೈ, ಮಹೀಂದ್ರಾ, ಎಂಜಿ, ಕಿಯಾ, ಆಡಿ, ಬಿಎಂಡಬ್ಲ್ಯು, ಕಂಪನಿ ಗಳು ಹೊಸ ವರ್ಷದಲ್ಲಿ ಕಾರಿನ ದರ ಶೇ.2ರಿಂದ 4ರಷ್ಟು ಏರಿಕೆಗೆ ಚಿಂತಿಸಿವೆ. ಕಚ್ಚಾವಸ್ತು ದರ ಏರಿಕೆ, ವೇತನ ಹೆಚ್ಚಳದ ಕಾರಣವನ್ನು ಅವು ಈಗಾಗಲೇ ನೀಡಿವೆ.
ಹೊಸ ವರ್ಷಕ್ಕೆ ಬಸ್ ಪ್ರಯಾಣ ದರ ಹೆಚ್ಚಳ?
ಎಟಿಎಂನಲ್ಲಿ ಪಿಎಫ್ ಹಣ
ಕೇಂದ್ರೀಕೃತ ಪಿಂಚಣಿ ವ್ಯವಸ್ಥೆ ಜಾರಿ ಪರಿ ಣಾಮ, ಇಪಿಎ ಫ್‌ಒ ಪಿಂಚಣಿ ದಾರರು ಇನ್ನು ಬ್ಯಾಂಕಿನ ಯಾವುದೇ ಶಾಖೆಯ ಎಟಿಎಂಗಳ ಮೂಲಕ ಪಿಂಚಣಿ ಹಣ ಪಡೆಯಬಹುದು. ಜನವರಿ ಯಿಂದಲೇ ಈ ಸೇವೆ ಭವಿಷ್ಯನಿಧಿ ನೌಕರರಿಗೆ ಲಭ್ಯವಾಗಲಿದೆ.
ಸಣ್ಣ ಫೋನಲ್ಲಿ 10000 ಕಳಿಸಿ
ಇಂಟರ್ನೆಟ್ ರಹಿತ, ಫೀಚರ್ ಫೋನುಗಳಲ್ಲಿ ಈವರೆಗೆ 5000 ರು. ಇದ್ದ ವಹಿ ವಾಟಿನ ಮಿತಿಯನ್ನು 10,000 ರು.ಗೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ಸುಲಭ ವಾಗಿ ದುಪ್ಪಟ್ಟು ಹಣವನ್ನು ಕಳುಹಿಸಬಹುದಾಗಿದೆ.
ರೈತರ ಸಾಲ ಮಿತಿ ಹೆಚ್ಚಳ
ಪ್ರಸ್ತುತ 1.60 ಲಕ್ಷ ರು. ವರೆಗೆ ರೈತರು ಖಾತರಿ ರಹಿತ ಸಾಲ ಪಡೆ ಯಬಹುದಾ ಗಿದ್ದು, ಈ ಮೊತ್ತ ವನ್ನು ಆರ್‌ಬಿಐ 2 ಲಕ್ಷರು. ಲಕ್ಷ ರು.ಗೆ ಏರಿಸಿದೆ. ಜ.1ರಿಂದ ಜಾರಿಯಾಗಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ತುಂಬಾ ಅನುಕೂಲವಾಗಲಿದೆ. ಉತ್ಪಾದಕತೆ ಹೆಚ್ಚಲಿದೆ.
ಇಂಟರ್ನೆಟ್ ಶುಲ್ಕ ಏರಿಕೆ
ಲಾಭದ ಪ್ರಮಾಣ ಹೆಚ್ಚಿಸುವ ಸಲುವಾಗಿ ಇಂಟ ರ್ನೆಟ್ ಶುಲ್ಕ ಹೆಚ್ಚಿಸಲು ಟೆಲಿ ಕಾಂ ಕಂಪನಿಗಳು ಯೋಜಿಸಿವೆ. ಜೊತೆಗೆ ಹಳೆಯ ಆ್ಯಂಡ್ರಾಯ್ಡ್ ಆ್ಯಪ್‌ನ ಮೊಬೈಲ್‌ಗೆ ವಾಟ್ಸಾಪ್ ಸ್ಥಗಿತವಾಗಲಿದೆ. ಜತೆಗೆ ಫೀಚರ್ ಪೋನ್‌ಗಳಿಗೂ ಹೊಸ ಪ್ಲಾನ್ ಲಭಿಸಲಿದೆ. ಜಿಎಸ್ಪಿ ನಿಯಮ ಕಟ್ಟುನಿಟ್ಟು ಪಾಲನೆ ಜಿಎಸ್‌ಟಿ ಪೋರ್ಟಲ್ ಪ್ರವೇಶಿಸಲು ಬಹು ಹಂತದ ಧೃಡೀಕರಣ ಕಡ್ಡಾಯವಾಗಲಿದೆ. ಜೊತೆಗೆ 180 ದಿನಗಳಿಗಿಂತ ಇತ್ತೀಚಿನ ದಾಖಲೆಗಳಿಗೆ ಮಾತ್ರ ಇ-ವೇ ಬಿಲ್ ರಚಿಸಲು ಅವಕಾಶ ಮಾಡಿಕೊಡಲಾಗುವುದು.
ಸೆನ್ಸೆಕ್ಸ್ ಎಕ್ಸ್‌ಪೈರಿ ದಿನಾಂಕ ಬದಲು
ಸೆನ್ಸೆಕ್ಸ್ ಸೇರಿದಂತೆ ಅನ್ಯ ಸೂಚ್ಯಂಕಗಳ ಎಕ್ಸ್‌ಪೈರಿ ದಿನವನ್ನು ಈಗಿರುವ ಶುಕ್ರವಾರದ ಬದಲು ಮಂಗಳವಾರಕ್ಕೆ ಬದಲಾಯಿಸಲಾಗಿದೆ. ಇದು ಜ.1ರಿಂದಲೇ ಅನ್ವಯಿಸಲಿದೆ.
ಹೊಸ ಅಮೆರಿಕ ವೀಸಾ ನಿಯಮ
ವಲಸಿಗರಲ್ಲದ ಭಾರತೀಯರು 2025ರ ಜ.1ರಿಂದ ಒಂದು ಬಾರಿ ಯಾವುದೇ ಶುಲ್ಕವಿಲ್ಲದೆ ತಮ್ಮ ಅಪಾಂಯಿಂಟ್‌ಮೆಂಟ್ ಅನ್ನು ಮರುಹೊಂದಾಣಿಕೆ ಮಾಡಿಕೊಳ್ಳಬಹುದು.
ಅಮೆರಿಕದಲ್ಲಿ ಕಠಿಣ ವಲಸೆ ನೀತಿ
ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಬಳಿಕ ವಲಸೆ ವಿಷಯದಲ್ಲಿ ಕಠಿಣ ನೀತಿ ಜಾರಿ ಸಾಧ್ಯತೆ. ಇದು ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ ತರುವ ಆತಂಕ ಇದೆ. ಶುಲ್ಕವಿಲ್ಲದೆ ಎಫ್‌ಡಿ ಹಿಂಪಡೆತ ಅವಕಾಶ 10000 ರು.ಗಿಂತ ಕಡಿಮೆ ಮೊತ್ತದ ಎಫ್‌ಡಿ ಮೊತ್ತವನ್ನು, ಮುಕ್ತಾಯದ ಅವಧಿಗೆ ಮೊದಲೇ ಯಾವುದೇ ದಂಡವಿಲ್ಲದೇ ಹಿಂಪಡೆಯುವ ಅವಕಾಶ ಲಭ್ಯವಾಗಲಿದೆ. ಗಂಭೀರ ಸ್ವರೂಪದ ಕಾಯಿಲೆ ಇದ್ದ ಪೂರ್ಣ ಹಣ ಹಿಂಪಡೆಯಬಹುದು.
ಮಡಿಕೇರಿ ರಾಜಾಸೀಟಿನಲ್ಲಿ ವರ್ಷದ ಕೊನೆ ಸೂರ್ಯಾಸ್ತ ವೀಕ್ಷಿಸಿದ ಸಾವಿರಾರು ಪ್ರವಾಸಿಗರು!
ವಾಹನ ಮಾರಾಟಕ್ಕೆ ಶೇ.1ರಷ್ಟು ಟಿಸಿಎಸ್
10 ಲಕ್ಷ ರು. ಮೇಲ್ಪಟ್ಟ ಮೊತ್ತದ ಮೋಟಾರು ವಾಹನಗಳ ಮಾರಾಟಕ್ಕೆ ಶೇ.1ರಷ್ಟು ಟಿಸಿಎಸ್ (ಟ್ಯಾಕ್ಸ್ ಕಲೆಕ್ಷೆಡ್ ಅಟ್‌ಸೋರ್ಸ್) ಜ.1ರಿಂದಜಾರಿಗೆ ಬರಲಿದೆ.
ಎಲ್‌ಪಿಜಿ ದರ ಏರಿಕೆ ಶಾಕ್ ಸಂಭವ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 6293 ರು.ಗೆ ತಲುಪಿದೆ. ಇದರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಹೆಚ್ಚುವ ನಿರೀಕ್ಷೆಯಿದೆ. ಆದರೆ ಎಷ್ಟು ಏರಿಕೆ ಆಗಬಹುದು ಎಂಬ ಬಗ್ಗೆ ಖಚಿತ ಅಂದಾಜಿಲ್ಲ.