ಮಲಬಾರ್ ಗೋಲ್ಡ್ ಮತ್ತೊಮ್ಮೆ ಜಾಹೀರಾತು ಕಾರಣಕ್ಕೆ ವಿವಾದಕ್ಕೀಡಾಗಿದೆ. ಮಲಬಾರ್ ಗೋಲ್ಡ್‌ನ ಜಾಹೀರಾತಿನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಬಿಂದಿ ಇಲ್ಲದೇ ಕಾಣಿಸಿಕೊಂಡಿದ್ದಾರೆ. ಇದು ಟೀಕಿಗೆ ಗುರಿಯಾಗಿದೆ. ಟ್ವಿಟರ್‌ನಲ್ಲಿ ಅನೇಕರು ಮಲಬಾರ್ ಗೋಲ್ಡ್ ಜಾಹೀರಾತನ್ನು ಟೀಕಿಸಿದ್ದು, ಇದು ಹಿಂದೂ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನ ಎಂದು ಹೇಳಿದ್ದಾರೆ. ಅಲ್ಲದೇ ಮಲಬಾರ್ ಚಿನ್ನವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಈ ಜಾಹೀರಾತು ಹಿಂದೂ ಸಮುದಾಯದ ಅಕ್ಷಯ ತೃತೀಯ ಹಬ್ಬಕ್ಕಾಗಿ ಮಾಡಲ್ಪಟ್ಟ ಜಾಹೀರಾತು ಎನ್ನಲಾಗಿದೆ. ಅಕ್ಷಯ ತೃತೀಯದಂದು ಹಿಂದೂ ಸಮುದಾಯದವರು ಚಿನ್ನದ ಖರೀದಿಗೆ ಮಂಗಳಕರವೆಂದು ಪರಿಗಣಿಸಿದ್ದಾರೆ. ಜಾಹೀರಾತಿನಲ್ಲಿ, ಕರೀನಾ ಗುಲಾಬಿ ಬಣ್ಣದ ಲೆಹಂಗಾವನ್ನು ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್‌ಪೀಸ್, ಕಿವಿಯೋಲೆಗಳು ಮತ್ತು ಮಾಂಗ್ ಟಿಕಾದೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಹಣೆ ಮೇಲೆ ಬಿಂದಿ ಮಾತ್ರ ಇಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದುಬೈನಲ್ಲಿ ಸಿಲುಕಿದ್ದ ನೌಕರರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತಂದ ಮಲಬಾರ್ ಗೋಲ್ಡ್!
ಜಾಹೀರಾತಿನಲ್ಲಿ ಕರೀನಾ ಅವರ ಸೌಂದರ್ಯ ಬೆರಗುಗೊಳಿಸುವಂತಿದೆ. ಆದರೆ ಆಕೆಯ ಹಣೆಯ ಮೇಲೆ ಬಿಂದಿ ಇಲ್ಲದಿರುವುದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಬಹುಪಾಲು ಹಿಂದೂಗಳು ಈ ಜಾಹೀರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಇದು ಹಿಂದೂ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನ ಎಂದು ಕರೆದಿದ್ದಾರೆ. ಹಣೆಯ ಮೇಲೆ ಬಿಂದಿಯನ್ನು ಧರಿಸುವುದು ಮಹಿಳೆಯರಿಗೆ, ವಿಶೇಷವಾಗಿ ವಿವಾಹಿತರಿಗೆ ಸಾಂಪ್ರದಾಯಿಕ ಭಾರತೀಯ ಉಡುಪಿನ ಪ್ರಮುಖ ಅಂಶವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮುಸ್ಲಿಮರನ್ನು ಮದುವೆಯಾದ ಕರೀನಾ ಹಿಂದೂ ಹಬ್ಬದ ಜಾಹೀರಾತಿನಲ್ಲಿ ಬಿಂದಿ ಇಲ್ಲದೆ ಕಾಣಿಸಿಕೊಂಡಿದ್ದಕ್ಕಾಗಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಈ ಕಾರಣಕ್ಕೆ ತಂಬಾಕು ಜಾಹೀರಾತು ರಿಜೆಕ್ಟ್ ಮಾಡಿ ಮಾದರಿಯಾದ ಅಲ್ಲು ಅರ್ಜುನ್
ಒಬ್ಬ ಬಳಕೆದಾರ, ಕರೀನಾ ಕಪೂರ್ ಖಾನ್ ಅವರನ್ನು ಬಿಂದಿ ಇಲ್ಲದೆ ತೋರಿಸುವ ಮೂಲಕ ಮಲಬಾರ್ ಗೋಲ್ಡ್ ಅಕ್ಷಯ ತೃತೀಯದ ಮಂಗಳಕರ ದಿನದಂದು ತಮ್ಮ ಆಭರಣಗಳನ್ನು ಪ್ರಚಾರ ಮಾಡುತ್ತಿದೆ. @ Malabartweets ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ಕಡೆಗಣಿಸುವ ಇವರು ಹಿಂದೂಗಳು ತಮ್ಮ ಹಣವನ್ನು ತಮ್ಮೊಂದಿಗೆ ಖರ್ಚು ಮಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, ಸಾಮಾನ್ಯ ನಂಬಿಕೆಯೆಂದರೆ ಹಿಂದೂ ಹಬ್ಬಗಳಿಗೆ ನಿರ್ದಿಷ್ಟವಾಗಿ ಸ್ತ್ರೀ ಮಾಡೆಲ್‌ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಿಂದಿಗಳಿಲ್ಲದೆ ಕಾಣಿಸಿಕೊಳ್ಳುವುದು. ಹಿಂದೂ ಮಹಿಳೆಗೆ ಬಿಂದಿಯ ಸಾಂಕೇತಿಕ ಮಹತ್ವವನ್ನು ಅಳಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು ಹೀಗೆ ಹೇಳಿದರು. 'ದಿ ರೆಸ್ಪಾನ್ಸಿಬಲ್ ಜ್ಯುವೆಲರ್ಸ್ ಕರೀನಾ ಕಪೂರ್ ಖಾನ್ ಅವರೊಂದಿಗೆ ಅಕ್ಷಯ ತೃತೀಯಕ್ಕೆ ಬಿಂದಿ ಇಲ್ಲದೆ ಜಾಹೀರಾತನ್ನು ಬಿಡುಗಡೆ ಮಾಡುತ್ತಿದೆ. ಅವರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಕಾಳಜಿ ಇದೆಯೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಈ ಹಿಂದೆ ಮಲಬಾರ್ ಗೋಲ್ಡ್ ಪಾಕಿಸ್ತಾನ ಸ್ವಾತಂತ್ರ ದಿನಾಚರಣೆಯ ಸಲುವಾಗಿ ಪಾಕಿಸ್ತಾನ ಸ್ವಾತಂತ್ರದ ರಸಪ್ರಶ್ನೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ ಎಂಬ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿತ್ತು. ಬಳಿಕ ಇದು ವಿವಾದಕ್ಕೀಡಾಗುತ್ತಿದ್ದಂತೆ ಕ್ಷಮೆ ಕೇಳಿ ಪೋಸ್ಟ್ ಡಿಲೀಟ್ ಮಾಡಿತ್ತು.