70 ಗಂಟೆ ಕೆಲಸದಿಂದ GST ಪೋರ್ಟಲ್ ಡೌನ್, ನಾರಾಯಣಮೂರ್ತಿ ರೋಸ್ಟ್ ಮಾಡಿದ ನೆಟ್ಟಿಗರು

By Chethan Kumar  |  First Published Jan 10, 2025, 7:46 PM IST

2 ದಿನದಿಂದ ಜಿಎಸ್‌ಟಿ ಪೋರ್ಟಲ್ ಡೌನ್ ಆಗಿದೆ. ಹಲವರು ರಿಟರ್ನ್ಸ್ ಫೈಲಿಂಗ್ ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಜಿಎಸ್‌ಟಿ ಪೋರ್ಟಲ್ ತಾಂತ್ರಿಕ ಸಮಸ್ಯೆಗೆ ನಾರಾಯಣಮೂರ್ತಿ ಟ್ರೋಲ್ ಆಗಿದ್ದಾರೆ. 70 ಗಂಟೆ ಕೆಲಸ ಪರಿಣಾಮ ಎಂದಿದ್ದಾರೆ.


ಬೆಂಗಳೂರು(ಜ.10) ಇನ್ಫೋಸಿಸ್ ನಾರಾಯಣ ಮೂರ್ತಿ 70 ಗಂಟೆ ಕೆಲಸದ ಹೇಳಿಕೆ ನೀಡಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಅನ್ನೋ ನಾರಾಯಣಮೂರ್ತಿ ಹೇಳಿಕೆಗೆ ಭಾರಿ ವಿರೋಧಗಳು ವ್ಯಕ್ತವಾಗಿತ್ತು.  ಇದಾದ ಬಳಿಕ ಹಲವು ಬಾರಿ ನಾರಾಯಣಮೂರ್ತಿ ಟ್ರೋಲ್ ಆಗಿದ್ದಾರೆ. ಇದೀಗ ಜಿಎಸ್‌ಟಿ ಪೋರ್ಟಲ್ ಕಳೆದೆರಡು ದಿನದಿಂದ ಡೌನ್ ಆಗಿದೆ. ಇದು ನಾರಾಯಣಮೂರ್ತಿಯವರ 70 ಗಂಟೆ ಕೆಲಸದ ಪರಿಣಾಮ ಎಂದು ನೆಟ್ಟಿಗರು ಮತ್ತೆ ನಾರಾಯಣಮೂರ್ತಿ ಅವರನ್ನು ರೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಜಿಎಸ್‌ಟಿ ಪೋರ್ಟಲ್ ತಾಂತ್ರಿಕ ಸಮಸ್ಯಯಿಂದ ಡೌನ್ ಆಗಿರುವುದಕ್ಕೂ ನಾರಾಯಣಮೂರ್ತಿ ಟ್ರೋಲ್ ಆಗುತ್ತಿರುವುದ್ಯಾಕೆ ಅನ್ನೋ ಪ್ರಶ್ನೆ ಮೂಡಿದರೆ ಇಲ್ಲಿದೆ ಉತ್ತರ.

ಕಳೆದೆರಡು ದಿನದಿಂದ ಜಿಎಸ್‌ಟಿ ಪೋರ್ಟಲ್ ತಾಂತ್ರಿಕ ಸಮಸ್ಯೆಯಿಂದ ಲಭ್ಯವಿಲ್ಲ. ಉದ್ಯಮಿಗಳು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್ ಮಾಡಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಕಾರಣ ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್ ಮಾಡಲು ಜನವರಿ 11 ಕೊನೆಯ ದಿನ. ಆದರೆ ಜನವರಿ 9 ರಿಂದ ಪೋರ್ಟಲ್ ಡೌನ್ ಆಗಿದೆ. ಸರಿಸುಮಾರು 2 ದಿನಗಳಿಂದ ಜಿಎಸ್‌ಟಿ ಪೋರ್ಟಲ್ ಮೂಲಕ ರಿಟರ್ನ್ಸ್ ಫೈಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉದ್ಯಮಿಗಳು ಪರದಾಡುತ್ತಿದ್ದಾರೆ. ಇಷ್ಟೇ ಅಲ್ಲ ಸರ್ಕಾರಕ್ಕೆ ಗಡುವು ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಜಿಎಸ್‌ಟಿ ಡೌನ್ ಆಗುತ್ತಿದ್ದಂತೆ ನಾರಾಯಣಮೂರ್ತಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇನ್ಫೋಸಿಸ್.

Tap to resize

Latest Videos

ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದೀರಾ? ಕೊನೆ ಡೇಟ್ ಸಮೀಪಿಸುತ್ತಿದ್ದಂತೆ ಪೋರ್ಟಲ್ ಡೌನ್

ನಾರಾಯಣೂರ್ತಿಯವರ ಇನ್ಫೋಸಿಸ್ ಸಂಸ್ಥೆ ಕೇಂದ್ರ ಹಣಕಾಸು ಇಲಾಖೆಯ ಜಿಎಸ್‌ಟಿ, ಆದಾಯ ತೆರಿಗೆ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಇದರ ನಿರ್ವಹಣೆಯನ್ನೂ ಇನ್ಫೋಸಿಸ್ ಮಾಡುತ್ತಿದೆ. ನಾರಾಯಣಮೂರ್ತಿ ಹೇಳಿದಂತೆ 70 ಗಂಟೆ ಕೆಲಸ ಮಾಡಿದ ಪರಿಣಾಮ ಇದೀಗ ಈ ಪೋರ್ಟಲ್ ಡೌನ್ ಆಗಿದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ. ಸರಿಯಾಗಿ, ಗಮನವಿಟ್ಟು ಕೆಲಸ ಮಾಡಿದ್ದರೆ ಪೋರ್ಟಲ್ ಡೌನ್ ಆಗುತ್ತಿರಲಿಲ್ಲ. ಆದರೆ ನಾರಾಯಣಮೂರ್ತಿ 70 ಗಂಟೆ ಕೆಲಸ ಮಾಡಲು ತಮ್ಮ ಉದ್ಯೋಗಿಗಳಿಗೆ ಸೂಚಿಸಿದ್ದಾರೆ. ಉದ್ಯೋಗಿಗಳು 70 ಗಂಟೆ ಕೆಲಸ ಮಾಡಿದ್ದಾರೆ. ಆದರೆ ಏನು ಮಾಡಿದ್ದಾರೆ ಅನ್ನೋದು ಪೋರ್ಟಲ್ ಡೌನ್ ಆಗುವಾಗ ಜಗಜ್ಜಾಹೀರಾಗಿದೆ ಎಂದು ನಾರಾಯಣಮೂರ್ತಿ ಕಾಲೆಳೆದಿದ್ದಾರೆ.

ಕಳೆದೆರಡು ದಿನದಿಂದ ಜಿಎಸ್‌ಟಿ ಸೋಶಿಯಲ್ ಮೀಡಿಯಾದಲ್ಲಿ ಪೋರ್ಟಲ್ ಡೌನ್ ಆಗಿದೆ. 11 ರಿಂದ 6 ಗಂಟೆ ನಿರ್ವಹಣೆ ನಡೆಯುತ್ತಿದೆ.ಬಳಿಕ ಲಭ್ಯವಾಗಲಿದೆ ಎಂದು ಆರಂಭದಲ್ಲಿ ಹೇಳಿತ್ತು ಬಳಿಕ 6 ರಿಂದ 9, 9 ರಿಂದ 12, 12 ರಿಂದ 3, 3 ರಿಂದ 6 ಹೀಗೆ ಪಟ್ಟಿ ಬೆಳೆದಿದೆ. ಇದನ್ನೇ ಟ್ರೋಲ್ ಮಾಡಿರುವ ಹಲವರು ಇದು ಸಿನಿಮಾ ಶೋ ಅಲ್ಲ. ಜಿಎಸ್‌ಟಿ ಡೌನ್ ಆಗಿರುವ ಸಮಯ. ಇದು ವಾರದಲ್ಲಿ 70 ಗಂಟೆ ಕೆಲಸ ಮಾಡಿದ ಪರಿಣಾಮ ಎಂದು ರೋಸ್ಟ್ ಮಾಡಿದ್ದಾರೆ.

 

11 to 6
6 to 9
9 to 12
12 to 3
3 to 6
It is not movie show but it is extension of GST portal downtime !
# Effect of working 70 hour in a Week

— Harikrushn Tank (@Harikrushn97)

 

ದೇಶಾದ್ಯಂತ ಸುಲಭ ಹಾಗೂ ಸರಳವಾಗಿ ಜಿಎಸ್‌ಟಿ ಫೈಲ್ ಮಾಡಲು, ಮಾಹಿತಿ ಸಂಗ್ರಹಿಸಲು, ತೆರಿಗೆ ಸಂಗ್ರಹ, ರಿಟರ್ಸನ್ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳಿಗೆ ಜಿಎಸ್‌ಟಿ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಇನ್ಪೋಸಿಸ್ ಸಂಸ್ಥೆ ಬರೋಬ್ಬರಿ 1,380 ಕೋಟಿ ರೂಪಾಯಿ ಪಡೆದುಕೊಂಡಿದೆ. ದುಬಾರಿ ಮೊತ್ತ ಪಡೆದರೂ ನೆಟ್ಟಗೆ ಪೋರ್ಟಲ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇನ್ಫೋಸಿಸ್ ವಿರುದ್ದ ಹಲವರು ಆಕ್ರೋಶ ಹೊರಹಾಕಿದ್ದಾರೆ. 

December GST: ಕರ್ನಾಟಕ ಕಟ್ಟಿರುವ ಜಿಎಸ್‌ಟಿ ಎಷ್ಟು?

ಜಿಎಸ್‌ಟಿ ಪೋರ್ಟಲ್ ಸಮಸ್ಯೆಯಿಂದ ಉದ್ಯಮಿಗಳು, ಚಾರ್ಟೆಟ್ ಅಕೌಂಟ್ಸ್ ಸೇರಿದಂತೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಸರ್ಕಾರವನ್ನು, ಹಣಕಾಸು ಇಲಾಖೆಯನ್ನು, ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ತೆಗೆಳುತ್ತಿದ್ದಾರೆ. ಆದರೆ ಅಸಲಿ ವಿಚಾರ ಏನಂದರೆ ಇದರ ಹಿಂದಿರುವುದು ಇನ್ಫೋಸಿಸ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸರ್ಕಾರ ಕೇಳಿದಷ್ಟು ಹಣ ಕೊಟ್ಟಿದೆ.ಇದಕ್ಕೆ ಸರಿಯಾಗಿ ಉತ್ತಮ ಪೋರ್ಟಲ್, ತಾಂತ್ರಿಕ ಸಮಸ್ಯೆ ಮುಕ್ತ ಪೋರ್ಟಲ್ ನೀಡುವುದು ಇನ್ಫೋಸಿಸ್ ಜವಾಬ್ದಾರಿ ಎಂದು ಹಲವರು ಸೂಚಿಸಿದ್ದಾರೆ.
 

Gst Portal aaj ke din pic.twitter.com/kbYFo8kEZc

— Loki (@lokibhindi)
click me!