BUSINESS
ಡಿಸೆಂಬರ್‌ನಲ್ಲಿ ಒಟ್ಟು 1.77 ಲಕ್ಷ ಜಿಎಸ್‌ಟಿ ಕಲೆಕ್ಷನ್ ಆಗಿದೆ. ಇದು ಕಳೆದ ಮೂರು ತಿಂಗಳಿನಿಂದ ಕನಿಷ್ಠವಾದರೂ, ಕಳದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ ಹೆಚ್ಚಾಗಿದೆ.
ಜಿಎಸ್‌ಟಿಗೆ ಗರಿಷ್ಠ ಕೊಡುಗೆ ನೀಡುವ ರಾಜ್ಯಗಳ ಪಟ್ಟಿ ಇಲ್ಲಿದೆ. ಟಾಪ್ 10 ರಾಜ್ಯಗಳನ್ನು ಇಲ್ಲಿ ನೀಡಲಾಗಿದೆ.
ಮಹಾರಾಷ್ಟ್ರ ಡಿಸೆಂಬರ್‌ನಲ್ಲಿ 29,260 ಕೋಟಿ ಜಿಎಸ್‌ಟಿ ಕೊಡುಗೆ ನೀಡಿದೆ.
2ನೇ ಸ್ಥಾನದಲ್ಲಿ ಕರ್ನಾಟಕವಿದ್ದು, 12,526 ಕೋಟಿ ರೂಪಾಯಿ ಕಟ್ಟಿದೆ.
ಮೂರನೇ ಸ್ಥಾನದಲ್ಲಿರುವ ತಮಿಳುನಾಡು 10,956 ಕೋಟಿ ಜಿಎಸ್‌ಟಿ ನೀಡಿದೆ.
ನಾಲ್ಕನೇ ಸ್ಥಾನದಲ್ಲಿ ಹರ್ಯಾಣವಿದ್ದು 10,403 ಕೋಟಿ ರೂಪಾಯಿ ಕಟ್ಟಿದೆ.
10,279 ಕೋಟಿ ಜಿಎಸ್‌ಟಿ ಕಟ್ಟಿ ಗುಜರಾತ್ 5ನೇ ಸ್ಥಾನದಲ್ಲಿದೆ.
ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶ 6ನೇ ಸ್ಥಾನದಲ್ಲಿದ್ದು, 8,117 ಕೋಟಿ ಜಿಎಸ್‌ಟಿ ಕಟ್ಟಿದೆ.
ರಾಷ್ಟ್ರ ರಾಜಧಾನಿ ದೆಹಲಿ ನಂತರದ ಸ್ಥಾನದಲ್ಲಿದ್ದು 5,593 ಕೋಟಿ ಹಣ ಕಟ್ಟಿದೆ.
ಕರ್ನಾಟಕದ ಪಕ್ಕದ ರಾಜ್ಯ ತೆಲಂಗಾಣ 8ನೇ ಸ್ಥಾನದಲ್ಲಿದ್ದು, 5224 ಕೋಟಿ ಜಿಎಸ್‌ಟಿ ನೀಡಿದೆ.
ಪಶ್ಚಿಮ ಬಂಗಾಳ ಕೂಡ ಸ್ಥಾನ ಪಡೆದಿದ್ದು, 5190 ಕೋಟಿ ರೂಪಾಯಿ ಜಿಎಸ್‌ಟಿ ನೀಡಿದೆ.
ಟಾಪ್-10 ಸ್ಥಾನವನ್ನು ಒಡಿಶಾ ಮುಗಿಸಿದ್ದು, 4841 ಕೋಟಿ ರೂಪಾಯಿ ಹಣ ನೀಡಿದೆ.