
ನವದೆಹಲಿ(ಜ.10) ಪ್ರಧಾನಿ ನರೇಂದ್ರ ಮೋದಿ ಹಲವು ವೇದಿಕೆಗಳಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿ ಫೋಟೋಗಳು ಅತೀ ಹೆಚ್ಚು ಹರಿದಾಡಿದೆ. ಮೋದಿ ಹಾಗೂ ಜಾರ್ಜಿಯಾ ಮೆಲೋನಿ ನಡುವಿನ ಮೀಮ್ಸ್, ಟ್ರೋಲ್ ಸೇರಿದಂತೆ ಹಲವು ರೂಪದಲ್ಲಿ ಫೋಟೋಗಳು ವೈರಲ್ ಆಗಿದೆ. ಆದರೆ ಈ ಕುರಿತು ಪ್ರಧಾನಿ ಮೋದಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ಮೊದಲ ಬಾರಿಗೆ ಈ ಮೀಮ್ಸ್ ಕುರಿತು ಮೋದಿ ಪ್ರತಿಕ್ರಿಯೆಸಿದ್ದಾರೆ. ನಿಖಿಲ್ ಕಾಮತ್ ಪಾಡ್‌ಕಾಸ್ಟ್ ಮಾತುಕತೆಯಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಈ ವೇಳೆ ಮೀಮ್ಸ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಮೋದಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ನಿಖಿಲ್ ಕಾಮತ್ ಗಂಭೀರ ಪ್ರಶ್ನೆಗಳ ನಡುವೆ ಜಾರ್ಜಿಯಾ ಮೆಲೋನಿ ಜೊತೆಗಿನ ಮೀಮ್ಸ್ ಕುರಿತು ಪ್ರಶ್ನಿಸಿದ್ದಾರೆ. ತಕ್ಷಣವೇ ಈ ಪ್ರಶ್ನೆಗೆ ಮೋದಿ ಉತ್ತರಿಸಿದ್ದಾರೆ. ಅವೆಲ್ಲಾ ನಡೆಯುತ್ತಾ ಇರುತ್ತದೆ ಎಂದು ಮೋದಿ ಉತ್ತರಿಸಿದ್ದಾರೆ. ಬಳಿಕ ವಿವರಣೆ ನೀಡಿದ್ದಾರೆ. ಮೀಮ್ಸ್, ಆನ್‌ಲೈಟ್ ಚಾಟ್, ಟ್ರೋಲ್‌ಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದಕ್ಕೆ ಸಮಯವನ್ನೂ ವ್ಯರ್ಥ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ವೈರಲ್ ಆದ ಇಟಲಿ ಪ್ರಧಾನಿಯ ಮೆಲೋಡಿ ಸೆಲ್ಫಿಗೆ ನರೇಂದ್ರ ಮೋದಿ ಪ್ರತಿಕ್ರಿಯೆ!
ಜಾರ್ಜಿಯಾ ಮೆಲೋನ ಕುರಿತು ಮೀಮ್ಸ್ ಕುರಿತ ಪ್ರಶ್ನೆಯನ್ನೂ ಮೋದಿ ಗಂಭೀರವಾಗಿ ಪರಿಗಣಿಸಿಲ್ಲ. ತಕ್ಷಣ ಉತ್ತರ ನೀಡಿ ತಮ್ಮ ಮಾತು ಮುಂದುವರಿಸಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಮೋದಿ ಹಲವು ಭಾರಿ ಬೇಟಿಯಾಗಿದ್ದಾರೆ. ಅತ್ತ ಜಾರ್ಜಿಯಾ ಮೆಲೋನಿ ಕೂಡ ಮೋದಿ ಭೇಟಿಯನ್ನು ಕೊಂಡಾಡಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಮೋದಿ ಭೇಟಿಯ ವಿಶೇಷತೆ, ಮಾತುಕತೆ ಕುರಿತು ಆತ್ಮೀಯವಾಗಿ ಬರದುಕೊಂಡಿದ್ದರು. ಹೀಗಾಗಿ ಜಾರ್ಜಿಯಾ ಮೆಲೋನಿ ಹಾಗೂ ಮೋದಿ ಕುರಿತು ಹಲವು ಮೀಮ್ಸ್‌ಗಳು ಹರಿದಾಡಿತ್ತು. ಇದೀಗ ಮೊದಲ ಬಾರಿಗೆ ಈ ಮೀಮ್ಸ್ ಕುರಿತು ಮೋದಿ ಪ್ರತಿಕ್ರಿಯಿಸಿದ್ದಾರೆ.
ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಮೋದಿಯನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆತ್ಮಿಯವಾಗಿ ಬರಮಾಡಿಕೊಂಡಿದ್ದರು. ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿತ್ತು. ಸಭೆ ಬಳಿಕ ಜಾರ್ಜಿಯಾ ಮೇಲೋನಿ ಸೆಲ್ಫಿ ವಿಡಿಯೋ ಮಾಡಿದ್ದರು. ಮೋದಿ ಹಾಗೂ ಜಾರ್ಜಿಯಾ ಮೇಲೋನಿ ನಗುತ್ತಾ ವಿಶ್ ಮಾಡುತ್ತಿರುವ ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಜಾರ್ಜಿಯಾ ಮೇಲೋನಿ ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲ ಮೆಲೋಡಿ ಎಂದು ಉಲ್ಲೇಖಿಸಿದ್ದಾರೆ. ಮೇಲೋನಿಯ ಆರಂಭಿಕ ಎರಡು ಪದ ಹಾಗೂ ಮೋದಿಯ ಅಂತಿಮ ಎರಡು ಪದ ಸೇರಿಸಿ ಮೇಲೋಡಿ ಎಂದು ಉಲ್ಲೇಖಿಸಿದ್ದರು. ಮೇಲೋಡಿ ಎಂದೇ ಭಾರಿ ಮೀಮ್ಸ್ ಹರಿದಾಡಿತ್ತು.
ನಿಖಿಲ್ ಕಾಮತ್ ಜೊತೆಗಿನ ಮಾತುಕತೆಯಲ್ಲಿ ಪ್ರಧಾನಿ ಮೋದಿ ಆಹಾರ ಖಾದ್ಯಗಳ ಕುರಿತು ಮಾತನಾಡಿದ್ದಾರೆ. ನಾನೂ ಫೂಡಿ ಅಲ್ಲ ಎಂದು ಮೋದಿ ಹೇಳಿದ್ದಾರೆ. ಹೀಗಾಗಿ ವಿದೇಶ ಪ್ರವಾಸದಲ್ಲಿ ಅವರು ನೀಡಿದ ಆಹಾರವನ್ನು ಸೇವಿಸುತ್ತೇನೆ. ಯಾರಾದರೂ ಆಹಾರದ ಮೆನು ಕೊಟ್ಟರೆ ಯಾವುದೇ ಸೂಚಿಸಬೇಕು ಅನ್ನೋದು ತಿಳಿಯುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಸಂಘದ ಆರಂಭಿಕ ದಿನಗಳಲ್ಲೂ ಹೊಟೆಲ್‌ಗೆ ತೆರಳಿದಾಗ ಯಾವ ಆಹಾರ ಆರ್ಡರ್ ಮಾಡಬೇಕು ಅನ್ನೋದು ತಿಳಿಯದಾಗುತ್ತದೆ. ರಾಜಕೀಯ ಜೀವನದ ಆರಂಭಿಕ ದಿನ ಹಾಗೂ ನಂತರದ ದಿನಗಳಲ್ಲಿ ಹಿರಿಯ ನಾಯಕ ಅರುಣ್ ಜೇಟ್ಲಿ ಸಹಾಯ ಪಡೆಯುತ್ತಿದ್ದೆ. ರೆಸ್ಟೋರೆಂಟ್‌ಗಳಲ್ಲಿ ಆಹಾರ ಆರ್ಡರ್ ಮಾಡಲು ಜೆಟ್ಲಿ ಸಹಾಯ ಪಡೆದು ಮಾಡುತ್ತಿದ್ದೆ ಎಂದು ಮೋದಿ ಹೇಳಿದ್ದಾರೆ.
ನಾನು ಆರ್ಡರ್ ಮಾಡಿದ ಆಹಾರ ಹಾಗೂ ನನಗೆ ಕೊಟ್ಟಿರುವ ಆಹಾರ ಎರಡೂ ಒಂದೇ ಅನ್ನೋದು ಪತ್ತೆ ಹಚ್ಚುವುದು ನನಗೆ ಸವಾಲಿನ ಕೆಲಸ ಎಂದಿದ್ದಾರೆ.
ಪ್ರಧಾನಿ ಮೆಲೋನಿ ಕುಳ್ಳಿ ಎಂದು ಗೇಲಿ ಮಾಡಿದ ಪತ್ರಕರ್ತನಿಗೆ ಒಟ್ಟು 5 ಲಕ್ಷ ರೂ ದಂಡ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ