ಏರ್‌ಪೋರ್ಟ್‌ನಲ್ಲಿ ಅಪ್ಪನ ಸಾವು: ಕೋರ್ಟ್‌ ಮೆಟ್ಟಿಲೇರಿದ ಮಗಳಿಗೆ 12 ಲಕ್ಷ ಪರಿಹಾರ

By Anusha Kb  |  First Published May 16, 2023, 12:45 PM IST

ತುರ್ತು ಸಮಯದಲ್ಲಿಸರಿಯಾಗಿ ವೈದ್ಯಕೀಯ ಸೇವೆ ಒದಗಿಸದೇ ನಿರ್ಲಕ್ಷ್ಯ ತೋರಿ ವ್ಯಕ್ತಿಯ ಸಾವಿಗೆ ಕಾರಣರಾದರೂ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಇಂಡಿಗೋ ಏರ್‌ಲೈನ್ಸ್‌ಗೆ ಬರೋಬ್ಬರಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 


ಬೆಂಗಳೂರು:  ತುರ್ತು ಸಮಯದಲ್ಲಿ ವ್ಹೀಲ್ ಚೇರ್ ನೀಡದೇ ಸರಿಯಾಗಿ ವೈದ್ಯಕೀಯ ಸೇವೆ ಒದಗಿಸದೇ ನಿರ್ಲಕ್ಷ್ಯ ತೋರಿ ವ್ಯಕ್ತಿಯ ಸಾವಿಗೆ ಕಾರಣರಾದರೂ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಇಂಡಿಗೋ ಏರ್‌ಲೈನ್ಸ್‌ಗೆ ಬರೋಬ್ಬರಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 

ಆಗಿದ್ದೇನು?
2021ರ ನವೆಂಬರ್ 19 ರಂದು ಮಂಗಳೂರು ಮೂಲದ, ಆಗ ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದ ಚಂದ್ರಾ ಶೆಟ್ಟಿ ಪತ್ನಿ ಸುಮತಿ ಮಗಳು ದೀಕ್ಷಿತಾ ಶೆಟ್ಟಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ  ಮಂಗಳೂರಿಗೆ ಪ್ರಯಾಣಿಸಲು ಇಂಡಿಗೋ ವಿಮಾನ ಬುಕ್ ಮಾಡಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್  ಆಗುತ್ತಿದ್ದಂತೆ 60 ವರ್ಷದ ಚಂದ್ರಾ ಶೆಟ್ಟಿ (Chandra Shetty) ಅವರು ವಿಮಾನ ನಿಲ್ದಾಣದೊಳಗೆಯೇ ಕುಸಿದು ಬಿದ್ದರು. ಪ್ರಜ್ಞಾಶೂನ್ಯರಾಗಿ ಬಿದ್ದ ತಮ್ಮ ತಂದೆಯನ್ನು ಉಳಿಸಿಕೊಳ್ಳಲು ಮಗಳು ದೀಕ್ಷಿತಾ ಹಾಗೂ ಪತ್ನಿ ಸುಮತಿ (Sumati) ವಿಮಾನ ನಿಲ್ದಾಣದ ಸಿಬ್ಬಂದಿಯ ಹಾಗೂ ಇಂಡಿಗೋ ಸಿಬ್ಬಂದಿಯ ಸಹಾಯ ಕೇಳಿದರು. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಇವರಿಗೆ ವೈದ್ಯಕೀಯವಾಗಿ ಗೋಲ್ಡನ್ ಅವರ್‌ (Golden hour) ಎಂದು ಕರೆಯಲಾಗುವ ತುರ್ತು ಸಮಯದಲ್ಲಿ (Emergency Time) ಸಹಾಯ ಮಾಡುವಲ್ಲಿ ವಿಫಲರಾದರು. ಹೀಗಾಗಿ ಪರಿಸ್ಥಿತಿ ಬಿಗಡಾಯಿಸಿತ್ತು.  ವಿಮಾನ ನಿಲ್ದಾಣದ ಸಿಬ್ಬಂದಿಯ  ನಿರ್ಲಕ್ಷ್ಯದಿಂದ ಗೋಲ್ಡನ್ ಅವರ್ ಯಾವುದೇ ವೈದ್ಯಕೀಯ ಪರಿಶೀಲನೆ ಇಲ್ಲದೇ ಕಳೆದು ಹೋಯಿತು. ಇದಾಗಿ ಸುಮಾರು 45 ನಿಮಿಷ ತಡವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಚಂದ್ರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. 

Tap to resize

Latest Videos

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರಿ ಭದ್ರತಾ ಲೋಪ: ಮಾನವ ದೋಷ ಎಂದು ಸಮರ್ಥಿಸಿಕೊಂಡ ಅಧಿಕಾರಿಗಳು

ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ ಪುತ್ರಿ

ಇದರಿಂದ ನೊಂದ ಪುತ್ರಿ ದೀಕ್ಷಿತಾ ಹಾಗೂ ಪತ್ನಿ ಸುಮತಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ನಿರ್ವಾಹಕ ಸಂಸ್ಥೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಹಾಗೂ ಇಂಡಿಗೋ ಏರ್‌ಲೈನ್ಸ್ (Indigo Airlines) ವಿರುದ್ಧ ಕೆಐಎ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 7, 2021ರಂದು  ದೂರು ದಾಖಲಿಸಿದ್ದರು.  ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಾರ್ಚ್‌ 2022 ರಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಇಂಡಿಗೋ ಏರ್‌ಲೈನ್ಸ್ ವಿರುದ್ಧ ದೂರು ದಾಖಲಿಸಿದ್ದರು. 

ಇಂಡಿಗೋ, ಕೆಂಪೇಗೌಡ ಏರ್‌ಪೋರ್ಟ್‌ಗೆ 12 ಲಕ್ಷ ದಂಡ

ಗ್ರಾಹಕ ನ್ಯಾಯಾಲಯದ (Consumer court) ನೋಟೀಸ್‌ನ ನಂತರವೂ ಇಂಡಿಗೋ ಏರ್‌ಲೈನ್ಸ್‌ನ ಪ್ರತಿನಿಧಿಗಳು ತಮ್ಮ ವಾದವನ್ನು ಗ್ರಾಹಕ ನ್ಯಾಯಾಲಯದ ಮುಂದೆ ಮಂಡಿಸಲು ವಿಫಲರಾದರು. ಇತ್ತ ಚಂದ್ರಾ ಶೆಟ್ಟಿ ಕುಟುಂಬ ಮಾಡಿದ ಎಲ್ಲಾ ಆರೋಪಗಳನ್ನು ಬಿಐಎಎಲ್‌ ಪ್ರತಿನಿಧಿಸಿದ ಅಟಾರ್ನಿ ನಿರಾಕರಿಸಿದರು. ಏರ್‌ಪೋರ್ಟ್‌ನ ಸಿಬ್ಬಂದಿ ಟರ್ಮಿನಲ್‌ ಒಳಗೆ ಇರುವ ಕ್ಲಿನಿಕ್‌ಗೆ ಅವರನ್ನು ಕರೆದೊಯ್ದಿದ್ದರು. ನಂತರ ಸಮೀಪದ ಅಸ್ತರ್ ಆಸ್ಪತ್ರೆಗೆ( Aster Hospital)ಅವರನ್ನು ಕಳುಹಿಸಲಾಯಿತು ಎಂದು ಅವವರು ಕೋರ್ಟ್‌ಗೆ ಮಾಹಿತಿ ನೀಡಿದರು. 

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಗೊಂದಲ: ಹೆಲ್ಪ್‌ಲೈನ್ ತೆರೆದ ಏರ್ಪೋರ್ಟ್

ಆದರೆ ಈ ವರ್ಷ ಏಪ್ರಿಲ್ 20 ರಂದು ನಡೆದ ವಿಚಾರಣೆ ವೇಳೆ ಏರ್‌ಪೋರ್ಟ್ ಸಿಬ್ಬಂದಿಯ ಅಮಾನವೀಯ ವರ್ತನೆಗೆ ಚಾಟಿ ಬೀಸಿದ ಗ್ರಾಹಕ ನ್ಯಾಯಾಲಯ, ಏರ್‌ಲೈನ್ಸ್ ಹಾಗೂ ಏರ್‌ಪೋರ್ಟ್ ಪ್ರಯಾಣಿಕರಿಗೆ ಸುರಕ್ಷಿತವಾದ ವಾತಾವರಣವನ್ನು ಕಲ್ಪಿಸಬೇಕು. ಆದರೆ ಈ ಪ್ರಕರಣದಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ಇಂಡಿಗೋ ಅಸ್ವಸ್ಥ ಪ್ರಯಾಣಿಕನಿಗೆ ತುರ್ತು ಸಮಯದಲ್ಲಿ ವ್ಹೀಲ್ ಚೇರ್ ನೀಡಲು ವಿಫಲವಾಗಿದೆ ಎಂದು ಹೇಳಿ ಇಂಡಿಗೋ, ಕೆಂಪೇಗೌಡ ಏರ್‌ಪೋರ್ಟ್‌ಗೆ ಒಟ್ಟು 12 ಲಕ್ಷ ದಂಡ ವಿಧಿಸಿದೆ.

click me!