ಜಪ್ತಿಯಾದ ಡ್ರಗ್ಸ್ ಬೆಲೆಯನ್ನು ಪ್ರಾರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತಾದರೂ, ವಶಪಡಿಸಿಕೊಳ್ಳಲಾದ ಡ್ರಗ್ಸ್‌ನ ಗುಣಮಟ್ಟ ಪರಿಶೀಲನೆ ಬಳಿಕ ಮಾರುಕಟ್ಟೆಯಲ್ಲಿ ಇದರ ಬೆಲೆ 25,000 ಕೋಟಿ ರೂ.ನಷ್ಟಿದೆ ಎಂಬ ಅಂದಾಜಿಗೆ ಬರಲಾಗಿದೆ.
ಕೊಚ್ಚಿ (ಮೇ 16,2023): ಕೇರಳದ ಕೊಚ್ಚಿ ಬಂದರಿನಲ್ಲಿ ಕಳೆದ ಶನಿವಾರ ವಶಪಡಿಸಿಕೊಳ್ಳಲಾದ 2,500 ಕೇಜಿ ಮೆಥಾಂಫೆಟಾಮಿನ್ (ಡ್ರಗ್ಸ್ )ನ ನಿವ್ವಳ ಬೆಲೆ ಬರೋಬ್ಬರಿ 25,000 ಕೋಟಿ ರೂ. ಎಂದು ಮಾದಕವಸ್ತು ನಿಗ್ರಹ ದಳದ (ಎನ್‌ಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಇದು ಈವರೆಗೆ ದೇಶದಲ್ಲಿ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಮಾದಕ ವಸ್ತು ಪ್ರಕರಣವಾಗಿ ಹೊರಹೊಮ್ಮಿದೆ.
ಜಪ್ತಿಯಾದ ಡ್ರಗ್ಸ್ ಬೆಲೆಯನ್ನು ಪ್ರಾರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತಾದರೂ, ವಶಪಡಿಸಿಕೊಳ್ಳಲಾದ ಡ್ರಗ್ಸ್‌ನ ಗುಣಮಟ್ಟ ಪರಿಶೀಲನೆ ಬಳಿಕ ಮಾರುಕಟ್ಟೆಯಲ್ಲಿ ಇದರ ಬೆಲೆ 25,000 ಕೋಟಿ ರೂ.ನಷ್ಟಿದೆ ಎಂಬ ಅಂದಾಜಿಗೆ ಬರಲಾಗಿದೆ. ಡ್ರಗ್ಸ್ ಅನ್ನು ದೂರದ ದೇಶಗಳಿಗೆ ಪೂರೈಸುವವರೆಗೂ ಅದರ ತೇವಾಂಶ ಹಾಳಾಗದಂತೆ ಉತ್ತಮವಾಗಿ ಪ್ಯಾಕಿಂಗ್ ಮಾಡಲಾಗಿದೆ. ಇದು ಅತ್ಯಂತ ಉತ್ಕೃಷ್ಟಮಟ್ಟದ ಮೆಥಾಂಫೆಟಮಿನ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಪಾಕ್‌ನಿಂದ ಸಾಗಿಸುತ್ತಿದ್ದ ಬರೋಬ್ಬರಿ 12 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ
ಮಾದಕ ವಸ್ತು ನಿಗ್ರಹ ದಳವು ಕಳೆದ ಶನಿವಾರ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕೊಚ್ಚಿ ಬಂದರಿಗೆ ಆಗಮಿಸಿದ್ದ ನೌಕೆಯಿಂದ 134 ಚೀಲಗಳಲ್ಲಿ ತುಂಬಿದ್ದ ಮಾದಕ ವಸ್ತು ಪತ್ತೆ ಮಾಡಿತ್ತು. ತನಿಖೆ ವೇಳೆ ಅಷ್ಘಾನಿಸ್ತಾನದಲ್ಲಿ ಉತ್ಪಾದಿಸಲಾಗಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸನಿಹದ ಮಕ್ರಾಮ್ ಕರಾವಳಿಯಿಂದ ಮದರ್ ಶಿಪ್ ಎಂಬ ಹಡಗಿನಲ್ಲಿ ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಪಾಕಿಸ್ತಾನ ಮೂಲದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ನೌಕಾಪಡೆ ಜತೆಗೆ ‘ಆಪರೇಶನ್ ಸಮುದ್ರಗುಪ್ತ’ ಹೆಸರಿನಲ್ಲಿ ಮಾದಕ ವಸ್ತು ವಿರುದ್ಧ ನಡೆಯುವ ಜಂಟಿ ಕಾರ್ಯಾಚರಣೆ ಮೂಲಕ ಇದರ ಜಪ್ತಿ ಮಾಡಲಾಗಿದೆ. ಇದು 3ನೇ ಅತಿ ಬೃಹತ್ ಪ್ರಮಾಣದ ಮಾದಕ ವಸ್ತು ವಶವಾಗಿದೆ ಹಾಗೂ ಒಂದೂವರೆ ವರ್ಷದಲ್ಲಿ ಮೊದಲ ಬಾರಿಯಾಗಿದೆ ಎಂದು ಎನ್‌ಸಿಬಿ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸನಿಹದ ಮಕ್ರಾಮ್ ಕರಾವಳಿಯಿಂದ ‘ಮದರ್ ಶಿಪ್’ ಹೆಸರಿನ ಹಡಗಿನಲ್ಲಿ ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿತ್ತು. ಈ ಹಡಗಿನ ಮೂಲಕ ಚಿಕ್ಕ ಚಿಕ್ಕ ದೋಣಿಗಳಿಗೆ ಡ್ರಗ್ಸ್ ಚೀಲಗಳನ್ನು ಇಳಿಸಿಕೊಂಡು, ಅವುಗಳ ಮೂಲಕ ಆಯಾ ದೇಶಗಳಿಗೆ ಡ್ರಗ್ಸ್ ರವಾನಿಸಲಾಗುತ್ತಿತ್ತು’ ಎಂದು ಎನ್‌ಸಿಬಿ ತಿಳಿಸಿತ್ತು.
ಇದನ್ನೂ ಓದಿ: ಡ್ರಗ್ಸ್ ಸೇವಿಸಿ, ಅಶ್ಲೀಲ ಚಿತ್ರ ವೀಕ್ಷಿಸಿ 30 ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾಮಪಿಶಾಚಿ!
ಇದನ್ನೂ ಓದಿ: ಕಾಂಗ್ರೆಸ್ ಸದಸ್ಯರಿಗೆ ಡ್ರಗ್ಸ್ ನಿರ್ಬಂಧ: ಸಿಡಬ್ಲ್ಯುಸಿಯಲ್ಲಿ ಶೇ. 50 ರಷ್ಟು ಮೀಸಲಿಗೆ ಅಸ್ತು