'ಇದು ಗಂಗೆಯ ಆಶೀರ್ವಾದ..' ಪ್ರತಿದಿನ ಗಂಗಾರತಿ ಮಾಡುತ್ತಿದ್ದ ವಿಭು ಉಪಾಧ್ಯಾಯ, ನೀಟ್‌ ಪರೀಕ್ಷೆಯಲ್ಲಿ ಟಾಪ್‌!

By Santosh NaikFirst Published Jun 15, 2023, 11:12 AM IST
Highlights

ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ನೀಟ್ ಯುಜಿ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. 2023ರ ನೀಟ್‌ ಯುಜಿ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಜೂನ್‌ 13 ರಂದು ಪ್ರಕಟ ಮಾಡಿದೆ. ಇದರಲ್ಲಿ ವಿಭು ಉಪಾಧ್ಯಾಯ ಸಾಧನೆ ಗಮನಸೆಳೆದಿದೆ

ನವದೆಹಲಿ (ಜೂ.15): ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ ಮತ್ತು ಬಿಡಿಎಸ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್‌-ಯುಜಿ ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ನಿವಾಸಿ ವಿಭು ಉಪಾಧ್ಯಾಯ ಅವರ ಸಾಧನೆ ಗಮನಸೆಳೆದಿದೆ. ನೀಟ್‌ ಯುಜಿ ಪರೀಕ್ಷೆಯ ಪ್ರಥಮ ಯತ್ನದಲ್ಲಿಯೇ ವಿಭು 622ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ಗಂಗಾನದಿಗೆ 2019ರಿಂದಲೂ ಪ್ರತಿದಿನ ಗಂಗಾರತಿ ಮಾಡುವ ನಡುವೆಯೇ ಅವರು ಈ ಸಾಧನೆ ಮಾಡಿವುದು ವಿಶೇಷ. ನೀಟ್‌ ಪರೀಕ್ಷೆಯ 720 ಅಂಕಗಳ ಪೈಕಿ ವಿಭು ಉಪಾಧ್ಯಾಯ 622 ಅಂಕ ಸಂಪಾದನೆ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ನೀಟ್‌ ಪರೀಕ್ಷೆಯಲ್ಲಿ ಟಾಪ್‌ ಕ್ಲಾಸ್‌ ನಿರ್ವಹಣೆ ನೀಡಿದ ವಿಭು ಉಪಾಧ್ಯಾಯ ಇದೆಲ್ಲವೂ ಗಂಗಾಮಾತೆಯ ಆಶೀರ್ವಾದ ಎಂದೇ ಹೇಳತ್ತಿದ್ದಾರೆ. 2019ರ ಜೂನ್‌ 15 ರಿಂದ ಉತ್ತರ ಪ್ರದೇಶ ಕಚ್ಲಾ ಗಂಗಾ ಘಾಟ್‌ನಲ್ಲಿ ಗಂಗಾರತಿ ಮಾಡುವ ಸಂಪ್ರದಾಯ ಆರಂಭವಾಗಿತ್ತು. ಅಂತಿನಿಂದಲೂ ವಿಭು ಪ್ರತಿದಿನ ಇಲ್ಲಿ ಗಂಗಾರತಿಯನ್ನು ಮಾಡುತ್ತಿದ್ದರು. 2019ರ ಜನವರಿಯಲ್ಲಿ ಬದೌನ್ ಜಿಲ್ಲಾಧಿಕಾರಿಯಾಗಿದ್ದ ದಿನೇಶ್‌ ಕುಮಾರ್‌ ಸಿಂಗ್‌, ವಾರಣಾಸಿಯ ಅಂಚಿನಲ್ಲಿರುವ ಕಚ್ಲಾ ಗಂಗಾ ಘಾಟ್‌ನಲ್ಲಿ ಪ್ರತಿದಿನವೂ ಗಂಗಾರತಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು.

ಜಿಲ್ಲಾಧಿಕಾರಿಯ ನಿರ್ಧಾರದ ಬಳಿಕವೇ, ಬನಾರಸ್‌ನ ಸಾಲಿನಲ್ಲಿರುವ ಈ ಗಂಗಾ ಘಾಟ್‌ನಲ್ಲಿ ಪ್ರತಿದಿನ ಗಂಗಾರತಿ ಆರಂಭವಾಗಿತ್ತು. ಗಂಗಾರತಿ ಮಾಡಲು ಬ್ರಾಹ್ಮಣ ಅರ್ಚಕರ ಅಗತ್ಯವಿತ್ತು. ಈ ವೇಳೆ ವಿಭು ಉಪಾಧ್ಯಾಯ ತಾವು ಈ ಸೇವೆ ಮಾಡುವುದಾಗಿ ತಿಳಿಸಿದ್ದರು. ಮನೆಯಲ್ಲಿ ತಂದೆ ತಾಯಿಯ ಅನುಮತಿಯನ್ನು ಪಡೆದು, ವಿದ್ಯಾಭ್ಯಾಸದ ಜೊತೆಯಲ್ಲಿ ಪ್ರತಿದಿನ ಸಂಜೆ ಕಚ್ಲಾ ಗಂಗಾ ಘಾಟ್‌ನಲ್ಲಿ ಗಂಗಾರತಿ ಮಾಡುವುದಕ್ಕೆ ತೆರಳುತ್ತಿದ್ದರು.

ಆದರೆ ಒಂದು ವರ್ಷದ ಹಿಂದೆ ವಿಭು ಉಪಾಧ್ಯಾಯ ನೀಟ್‌ ಪರೀಕ್ಷೆಗೆ ಕೋಚಿಂಗ್‌ ಪಡೆಯುವ ಸಲುವಾಗಿ ಬದೌನ್ ತೊರೆದು ರಾಜಸ್ಥಾನದ ಕೋಟಾಕ್ಕೆ ಸೇರಿದ್ದರು. ಆದರೆ, ಈ ಸಮಯದಲ್ಲಿ ಗಂಗಾರತಿ ಮಾಡುವುದನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ ಎನ್ನುವ ವಿಭು, ಗಂಗಾ ಮಾತೆಯ ಆಶೀರ್ವಾದದ  ಹಾಗೂ ಕಠಿಣ ಪರಿಶಮ್ರದ ಕಾರಣದಿಂದಾಗಿಯೇ ನಾನು ನೀಟ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಮೊದಲ ಪ್ರಯತ್ನದಲ್ಲಿಯೇ ನೀಟ್‌ ಪರೀಕ್ಷೆಯಲ್ಲಿ ಪಾಸ್‌ ಆಗೋದಕ್ಕೆ ನನ್ನ ತದೆ ತಾಯಿ, ಗಂಗಾ ಮಾತೆ ಹಾಗೂ ಜಿಲ್ಲಾಧಿಕಾರಿ ದಿನೇಶ್‌ ಕುಮಾರ್‌ ಸಿಂಗ್‌ ಕಾರಣ ಎನ್ನುತ್ಥಾರೆ. ನೀಟ್‌ ಪರೀಕ್ಷೆಗಾಗಿ ಕಳೆದ ಮೂರು ನಾಲ್ಕು ವರ್ಷಗಳಿಂದ ತಯಾರಿ ಮಾಡುತ್ತಿದ್ದ ವಿಭು ಉಪಾಧ್ಯಾಯ, ಮುಂದೆ ನನಗೆ ಸಮಯ ಸಿಕ್ಕಾಗಲೆಲ್ಲಾ ಗಂಗಾರತಿ ಮಾಡೋದನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.

'ವೈದ್ಯನಾಗಬೇಕು ಅನ್ನೋದು ಮೊದಲಿನಿಂದಲೂ ನನಗೆ ಕನಸಾಗಿತ್ತು. 9ನೇ ತರಗತಿಯಲ್ಲಿದ್ದಾಗಲೇ ನೀಟ್‌ ಪರೀಕ್ಷೆಗಾಗಿ ನಾನು ಅಭ್ಯಾಸ ಆರಂಭ ಮಾಡಿದ್ದೆ. ಇದರಿಂದಾಗಿ ನೀಟ್‌ ಪರೀಕ್ಷೆಯಲ್ಲಿ ಪಾಸ್‌ ಆಗಲು ಯಶಸ್ವಿಯಾದೆ. 2019ರಂದ ನಾನು ಗಂಗಾರತಿಯನ್ನು ಮಾಡುತ್ತಿದ್ದೆ. ಈಗಲೂ ಕೂಡ ನನಗೆ ಸಮಯ  ಸಿಕ್ಕಲ್ಲಿ ಖಂಡಿತವಾಗಿ ಗಂಗಾರತಿ ಮಾಡುತ್ತೇನೆ. ಭವಿಷ್ಯದಲ್ಲೂ ನನಗೆ ಸಮಯ ಸಿಕ್ಕಲ್ಲಿ ಗಂಗಾರತಿ ಮಾಡುತ್ತೇನೆ' ಎಂದು ವಿಭು ಉಪಾಧ್ಯಾಯ ಹೇಳಿದ್ದಾರೆ.

ಹಿಜಾಬ್‌ಗಿಂತ ಶಿಕ್ಷಣದ ಅಗತ್ಯ ಅರಿತ ತಬಸ್ಸುಮ್‌ ಶೇಖ್‌ ಇಂದು ರಾಜ್ಯಕ್ಕೆ ಟಾಪರ್‌!

ಇನ್ನು ವಿಭು ಉಪಾಧ್ಯಾಯ ಯಶಸ್ಸಿನ ಕಥೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದು ಗಂಗಾ ಮಾತೆಯ ಆಶೀರ್ವಾದ ಹಾಗೂ ಅವರ ಕುಟುಂಬದ ತಪ್ಪಸಿನ ಫಲ ಎಂದಿದ್ದಾರೆ. ವಿಭು ಉಪಾಧ್ಯಾಯ ಕುರಿತಾಗಿ ಹಲವು ಮಾಹಿತಿಗಳ ಟ್ವೀಟ್‌ಗಳನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ 'ಕರ್ಮ ಮತ್ತು ಧರ್ಮಕ್ಕಿಂತ ಮಿಗಿಲಾದದ್ದು ಯಶಸ್ಸಿಗೆ ಬೇರೇನೂ ಇಲ್ಲ' ಎಂದು ಟ್ವೀಟ್‌ ಮಾಡಿದ್ದಾರೆ. ಆಧ್ಮಾತ್ಮಿಕತೆಯೊಂದಿಗೆ ಬದ್ಧತೆ ಇದ್ದರಷ್ಟೇ ಇಂಥ ಯಶಸ್ಸು ಸಾಧ್ಯವಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

Latest Videos

ಕರ್ನಾಟಕ ಬಳಿಕ ಜಮ್ಮುಕಾಶ್ಮೀರದಲ್ಲೂ ಹಿಜಾಬ್‌ ವಿವಾದ, ವಿಶ್ವ ಭಾರತಿ ಶಾಲೆಯಲ್ಲಿ ಬಾಲಕಿಯರ ಪ್ರತಿಭಟನೆ!

click me!